AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

VIDEO: ಸ್ಲಿಪ್​ನಿಂದ ಗಲ್ಲಿಯತ್ತ... ಐಡೆನ್ ಮಾರ್ಕ್ರಾಮ್ ಸ್ಟನ್ನಿಂಗ್ ಕ್ಯಾಚ್

VIDEO: ಸ್ಲಿಪ್​ನಿಂದ ಗಲ್ಲಿಯತ್ತ… ಐಡೆನ್ ಮಾರ್ಕ್ರಾಮ್ ಸ್ಟನ್ನಿಂಗ್ ಕ್ಯಾಚ್

ಝಾಹಿರ್ ಯೂಸುಫ್
|

Updated on: Nov 24, 2025 | 1:28 PM

Share

India vs South Africa, 2nd Test: ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವು 30 ರನ್​​ಗಳ ಜಯ ಸಾಧಿಸಿತ್ತು. ಇದೀಗ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​​ನಲ್ಲಿ ಸೌತ್ ಆಫ್ರಿಕಾ ತಂಡ ಭರ್ಜರಿ ಪ್ರದರ್ಶನ ನೀಡಿದೆ. ಈ ಮೂಲಕ ಗುವಾಹಟಿ ಟೆಸ್ಟ್​ನಲ್ಲಿ ಪ್ರವಾಸಿ ತಂಡ ಮೇಲುಗೈ ಸಾಧಿಸಿದೆ.

ಗುವಾಹಟಿಯಲ್ಲಿ ನಡೆಯುತ್ತಿರುವ ಭಾರತದ ವಿರುದ್ಧ 2ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಸೌತ್ ಆಫ್ರಿಕಾ ತಂಡದ ಆಟಗಾರ ಐಡೆನ್ ಮಾರ್ಕ್ರಾಮ್ ಅದ್ಭುತ ಕ್ಯಾಚ್ ಹಿಡಿದಿದ್ದಾರೆ. ಮಾರ್ಕೊ ಯಾನ್ಸೆಲ್ ಎಸೆದ ಈ ಪಂದ್ಯದ 44ನೇ ಓವರ್​ನ 3ನೇ ಎಸೆತವನ್ನು ನಿತೀಶ್ ಕುಮಾರ್ ರೆಡ್ಡಿ ರಕ್ಷಣಾತ್ಮಕವಾಗಿ ಆಡಲು ಯತ್ನಿಸಿದ್ದರು. ಆದರೆ ನಿರೀಕ್ಷಿತವಾಗಿ ಮೂಡಿಬಂದ ಬೌನ್ಸರ್​ನಿಂದಾಗಿ ಚೆಂಡು ಬ್ಯಾಟ್​ನ ಬದಿಗೆ ತಗುಲಿ ಗಲ್ಲಿಯತ್ತ ಚಿಮ್ಮಿತು. ಈ ವೇಳೆ ಸ್ಲಿಪ್​ನಲ್ಲಿ ಫೀಲ್ಡಿಂಗ್​ನಲ್ಲಿದ್ದ ಐಡೆನ್ ಮಾರ್ಕ್ರಾಮ್ ಓಡಿ ಹೋಗಿ ಅದ್ಭುತ ಫ್ಲೈಯಿಂಗ್ ಕ್ಯಾಚ್ ಹಿಡಿದರು.

ಇದೀಗ ಐಡೆನ್ ಮಾರ್ಕ್ರಾಮ್ ಅವರ ಸ್ಟನ್ನಿಂಗ್ ಕ್ಯಾಚ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕ್ರಿಕೆಟ್ ಪ್ರೇಮಿಗಳಿಂದ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ಇನ್ನು ಈ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಸೌತ್ ಆಫ್ರಿಕಾ ತಂಡವು 489 ರನ್​ ಕಲೆಹಾಕಿದರೆ, ಟೀಮ್ ಇಂಡಿಯಾ 66 ಓವರ್​ಗಳ ಮುಕ್ತಾಯದ ವೇಳೆಗೆ 7 ವಿಕೆಟ್ ನಷ್ಟಕ್ಕೆ 170 ರನ್​ಗಳಿಸಿದೆ. ಸದ್ಯ ಕ್ರೀಸ್​ನಲ್ಲಿ ವಾಷಿಂಗ್ಟನ್ ಸುಂದರ್ ಹಾಗೂ ಕುಲ್ದೀಪ್ ಯಾದವ್ ಬ್ಯಾಟಿಂಗ್ ಮಾಡುತ್ತಿದ್ದಾರೆ.