ಕೆಲಸ ಕೇಳ್ಕೊಂಡು ಟಿವಿ9 ಕಚೇರಿಗೂ ಬಂದಿದ್ದೆ! ಆ ದಿನಗಳಲ್ಲಿ ಪಟ್ಟ ಕಷ್ಟಗಳ ಬಗ್ಗೆ ರಿಷಬ್ ಶೆಟ್ಟಿ ಹೇಳಿದ್ದೇನು ನೋಡಿ
Rishab Shetty Interview: ‘ಕಾಂತಾರ: ಚಾಪ್ಟರ್ 1’ ಸಿನಿಮಾ ಅಕ್ಟೋಬರ್ 02 ರಂದು ಬಿಡುಗಡೆಯಾಗಲಿದ್ದು, ಈ ಬಗ್ಗೆ ಖ್ಯಾತ ನಟ, ನಿರ್ದೇಶಕ ರಿಷಬ್ ಶೆಟ್ಟಿ ಟಿವಿ9 ಕನ್ನಡ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಇದೇ ವೇಳೆ, ತಮ್ಮ ಹಿಂದಿನ ಕಷ್ಟದ ದಿನಗಳನ್ನು ನೆನಪಿಸಿಕೊಂಡ ರಿಷಬ್ ಶೆಟ್ಟಿ, ಟಿವಿ9 ಕಚೇರಿಗೂ ಕೆಲಸ ಕೇಳಿಕೊಂಡು ಬಂದಿದ್ದೆ ಎಂಬ ಅಚ್ಚರಿಯ ವಿಚಾರ ಬಹಿರಂಗಪಡಿಸಿದ್ದಾರೆ.
ಅಕ್ಟೋಬರ್ 02 ರಂದು ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆಯಾಗಲಿದ್ದು, ಈ ಹಿನ್ನೆಲೆಯಲ್ಲಿ ‘ಟಿವಿ9’ ಸ್ಟುಡಿಯೋಗೆ ಆಗಮಿಸಿ ವಿಶೇಷ ಸಂದರ್ಶನ ನೀಡಿದ ನಟ, ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ ಸಿನಿ ಪಯಣದ ಆರಂಭದ ದಿನಗಳ ಕುರಿತು ಮಾತನಾಡಿದ್ದಾರೆ. ಉದ್ಯೋಗದ ಅವಕಾಶಗಳಿಗಾಗಿ ‘ಟಿವಿ9’ ಕಚೇರಿಗೂ ಅಲೆದಿದ್ದನ್ನು ಅವರು ನೆನಪಿಸಿಕೊಂಡಿದ್ದಾರೆ. ತಮ್ಮ ಆ ಹತಾಶೆಯ ದಿನಗಳನ್ನು ಸ್ಮರಿಸಿದ ರಿಷಬ್ ಶೆಟ್ಟಿ, ‘‘ಆಡು ಮುಟ್ಟಿದ ಸೊಪ್ಪಿಲ್ಲ, ನಾವು ಬಡಿಯದೇ ಇರುವ ಬಾಗಿಲು ಇಲ್ಲ’’ ಎಂಬಂತೆ ಎಲ್ಲ ಬಾಗಿಲುಗಳನ್ನು ತಟ್ಟಿದ್ದಾಗಿ ಹೇಳಿದ್ದಾರೆ. ಜೀವನದಲ್ಲಿ ನಾವು ಕಂಡುಕೊಳ್ಳುವ ಪ್ರತಿಯೊಂದು ಅನುಭವವೂ ನಟನೆಗೆ ಸಹಾಯಕವಾಗುತ್ತದೆ, ಅದು ಪಾತ್ರಗಳಿಗೆ ಜೀವ ತುಂಬಲು ನೆರವಾಗುತ್ತದೆ. ಜೀವನಾನುಭವವಿಲ್ಲದೆ ನಾವು ಹೇಳುವ ಮಾತು, ಬರೆಯುವ ಕಥೆ, ಮಾಡುವ ನಟನೆ ಜನರನ್ನು ತಲುಪುವುದಿಲ್ಲ ಎಂದು ಅಭಿಪ್ರಾಯಪ್ಟರು.
ಮತ್ತಷ್ಟು ವಿಡಿಯೋಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
