‘ಲಾಫಿಂಗ್ ಬುದ್ಧ’ ಗೆಲುವು ಕೋರಿ ರಿಷಬ್ ಶೆಟ್ಟಿ ದಂಪತಿಯಿಂದ ಚಿತ್ರಮಂದಿರದಲ್ಲಿ ಪೂಜೆ
Rishab Shetty: ರಿಷಬ್ ಶೆಟ್ಟಿ ನಿರ್ಮಾಣ ಮಾಡಿ, ಪ್ರಮೋದ್ ಶೆಟ್ಟಿ ನಾಯಕನಾಗಿ ನಟಿಸಿರುವ ‘ಲಾಫಿಂಗ್ ಬುದ್ಧ’ ಸಿನಿಮಾ ಇಂದು ಬಿಡುಗಡೆ ಆಗಿದೆ. ಸಿನಿಮಾದ ಮೊದಲ ಶೋಗೆ ಮುನ್ನ ರಿಷಬ್ ಶೆಟ್ಟಿ ಮತ್ತು ಅವರ ಪತ್ನಿ ಪ್ರಗತಿ ವೀರೇಶ್ ಚಿತ್ರಮಂದಿರದಲ್ಲಿ ಸ್ಕ್ರೀನ್ ಹಾಗೂ ಪ್ರೊಕೆಕ್ಟರ್ಗೆ ವಿಶೇಷ ಪೂಜೆ ಮಾಡಿದರು.
ರಿಷಬ್ ಶೆಟ್ಟಿ ನಿರ್ಮಾಣ ಮಾಡಿರುವ ‘ಲಾಫಿಂಗ್ ಬುದ್ಧ’ ಸಿನಿಮಾ ಇಂದು (ಆಗಸ್ಟ್ 30) ಬಿಡುಗಡೆ ಆಗಿದೆ. ಸಿನಿಮಾದಲ್ಲಿ ಪ್ರಮೋದ್ ಶೆಟ್ಟಿ ನಾಯಕರಾಗಿ ನಟಿಸಿದ್ದಾರೆ. ದಿಗಂತ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಗೆಲುವು ಕೋರಿ ನಿರ್ಮಾಪಕ ರಿಷಬ್ ಶೆಟ್ಟಿ ಮತ್ತು ಅವರ ಪತ್ನಿ ಪ್ರಗತಿ ಅವರು ಇಂದು (ಆಗಸ್ಟ್ 30) ಮೊದಲ ಶೋ ಪ್ರಾರಂಭಕ್ಕೂ ಮುನ್ನ ಬೆಂಗಳೂರಿನ ವಿರೇಶ್ ಚಿತ್ರಮಂದಿರದಲ್ಲಿ ವಿಶೇಷ ಪೂಜೆ ಮಾಡಿದರು. ಚಿತ್ರಮಂದಿರದ ಸ್ಕ್ರೀನ್, ಪ್ರೊಜೆಕ್ಟರ್ಗಳಿಗೆ ರಿಷಬ್ ದಂಪತಿ ವಿಶೇಷ ಪೂಜೆ ಮಾಡಿದರು. ‘ಲಾಫಿಂಗ್ ಬುದ್ಧ’ ಸಿನಿಮಾ ಹಾಸ್ಯಮಯ ಥ್ರಿಲ್ಲರ್ ಕತೆಯನ್ನು ಒಳಗೊಂಡಿದೆ. ದಡೂತಿ ದೇಹದ ಪೊಲೀಸ್ ಕಾನ್ಸ್ಟೇಬಲ್ನ ವೃತ್ತಿ ಮತ್ತು ಜೀವನದಲ್ಲಿ ನಡೆಯುವ ಘಟನೆಗಳನ್ನು ಇರಿಸಿಕೊಂಡು ಈ ಸಿನಿಮಾ ಮಾಡಲಾಗಿದೆ. ಪ್ರಮೋದ್ ಶೆಟ್ಟಿ ಪೊಲೀಸ್ ಕಾನ್ಸ್ಟೇಬಲ್ ಪಾತ್ರದಲ್ಲಿ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ