Kantara: ‘ನೋ ಕಮೆಂಟ್ಸ್ ಅಂತ ರಿಷಬ್ ಎಸ್ಕೇಪ್ ಆಗಬಾರದು’; ಭೂತಕೋಲ ಚರ್ಚೆ ಬಗ್ಗೆ ಚೇತನ್ ಪ್ರತಿಕ್ರಿಯೆ
Bhoota Kola | Chetan Ahimsa: ಭೂತಕೋಲವು ಹಿಂದೂ ಧರ್ಮಕ್ಕೆ ಸೇರಿದ್ದಲ್ಲ ಎಂದು ಚೇತನ್ ಹೇಳಿರುವ ವಿಚಾರ ವಿವಾದಕ್ಕೆ ಕಾರಣ ಆಗಿದೆ. ರಿಷಬ್ ವರ್ಸಸ್ ಚೇತನ್ ವಾಗ್ವಾದ ಮುಂದುವರಿದಿದೆ.
ನಟ ಚೇತನ್ ಕುಮಾರ್ (Chetan Ahimsa) ಅವರು ಭೂತಕೋಲ (Bhoota Kola) ಬಗ್ಗೆ ಎತ್ತಿರುವ ಪ್ರಶ್ನೆಯಿಂದ ಹೊಸ ಚರ್ಚೆ ಹುಟ್ಟಿಕೊಂಡಿದೆ. ‘ಕಾಂತಾರ’ ಸಿನಿಮಾದ ಹಿನ್ನೆಲೆಯಲ್ಲಿ ಈ ಚರ್ಚೆ ಆರಂಭ ಆಗಿದೆ. ಚೇತನ್ ಅವರ ಮಾತುಗಳಿಗೆ ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಅವರು ‘ನೋ ಕಮೆಂಟ್ಸ್’ ಎಂದು ಹೇಳಿದ್ದಾರೆ. ಈ ರೀತಿ ಎಸ್ಕೇಪ್ ಆಗುವುದು ಸರಿಯಲ್ಲ ಎಂಬುದು ಚೇತನ್ ವಾದ. ಈ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.