‘ಕಾಂತಾರ: ಚಾಪ್ಟರ್ 1’ ನೋಡಿ ಚಿತ್ರಮಂದಿರದಲ್ಲೇ ಬಟ್ಟೆ ಹರಿದುಕೊಂಡ ಅಭಿಮಾನಿ
ಅಕ್ಟೋಬರ್ 2ರಂದು ‘ಕಾಂತಾರ: ಚಾಪ್ಟರ್ 1’ ಚಿತ್ರ ಬಿಡುಗಡೆ ಆಗಿದೆ. ಮೊದಲ ದಿನ ಈ ಸಿನಿಮಾವನ್ನು ವೀಕ್ಷಿಸಿದ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಕೆಲವರಿಗೆ ಈ ಚಿತ್ರ ಬಹಳ ಇಷ್ಟ ಆಗಿದೆ. ‘ಕಾಂತಾರ: ಚಾಪ್ಟರ್ 1’ ನೋಡಿದ ಬಳಿಕ ಮೈಮೇಲೆ ದೈವ ಬಂದಂತೆ ರಿಷಬ್ ಶೆಟ್ಟಿ ಹಾಗೆಯೇ ಕೆಲವರು ಅನುಕರಣೆ ಮಾಡುತ್ತಿದ್ದಾರೆ.
ಎಲ್ಲ ಕಡೆಗಳಲ್ಲಿ ‘ಕಾಂತಾರ: ಚಾಪ್ಟರ್ 1’ (Kantara Chapter 1) ಸಿನಿಮಾ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಮೊದಲ ದಿನ ಸಿನಿಮಾ ನೋಡಿದ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಕೆಲವರಿಗೆ ಈ ಸಿನಿಮಾ ವಿಪರೀತ ಇಷ್ಟ ಆಗಿದೆ. ಸಿನಿಮಾ ನೋಡಿದ ಬಳಿಕ ಮೈಮೇಲೆ ದೈವ ಬಂದಂತೆ ರಿಷಬ್ ಶೆಟ್ಟಿ (Rishab Shetty) ರೀತಿಯೇ ಕೆಲವರು ಅನುಕರಣೆ ಮಾಡುತ್ತಿದ್ದಾರೆ. ಆದರೆ ಇಲ್ಲೊಬ್ಬ ಅಭಿಮಾನಿ ತನ್ನ ಬಟ್ಟೆ ಹರಿದುಕೊಂಡಿದ್ದಾನೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾವನ್ನು ನೋಡಿ ಚಿತ್ರಮಂದಿರದಿಂದ ಹೊರಬಂದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವಾಗ ಈ ರೀತಿ ವರ್ತಿಸಿದ್ದಾನೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
