‘ಕಾಂತಾರ: ಚಾಪ್ಟರ್ 1’ ಶೂಟಿಂಗ್ ವೇಳೆ ರಿಷಬ್ ಶೆಟ್ಟಿ ಅನುಭವಿಸಿದ ಕಷ್ಟ ಒಂದೆರಡಲ್ಲ
ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ‘ಕಾಂತಾರ: ಚಾಪ್ಟರ್ 1’ ಸಿನಿಮಾಗಾಗಿ ಬಹಳ ಕಷ್ಟಪಟ್ಟಿದ್ದಾರೆ. ಚಿತ್ರೀಕರಣದ ವೇಳೆ ಅನುಭವಿಸಿದ ಕಷ್ಟಗಳ ಬಗ್ಗೆ ಅವರು ಟಿವಿ9 ಸಂದರ್ಶನದಲ್ಲಿ ಮಾತನಾಡಿದ್ದಾರೆ. ‘9 ದಿನಗಳ ಕಾಲ ನಾನು ಪೇನ್ ಕಿಲ್ಲರ್ ತೆಗೆದುಕೊಂಡಿದ್ದೆ’ ಎಂದು ಅವರು ಹೇಳಿದ್ದಾರೆ.
ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ‘ಕಾಂತಾರ: ಚಾಪ್ಟರ್ 1’ (Kantara Chapter 1) ಸಿನಿಮಾಗಾಗಿ ಬಹಳ ಕಷ್ಟಪಟ್ಟಿದ್ದಾರೆ. ಚಿತ್ರೀಕರಣದ ವೇಳೆ ಅನುಭವಿಸಿದ ಕಷ್ಟಗಳ ಬಗ್ಗೆ ಅವರು ಟಿವಿ9 ಸಂದರ್ಶನದಲ್ಲಿ ಮಾತನಾಡಿದ್ದಾರೆ. ‘ಪ್ರತಿ ದಿನ ನನಗೆ ಎಣ್ಣೆ ಸ್ನಾನ ಮಾಡಿಸುತ್ತಿದ್ದರು. ಇಲ್ಲ ಅಂದಿದ್ದರೆ ನಾನು ಯಾವತ್ತೋ ಹುಷಾರಿಲ್ಲದೇ ಕುಸಿದು ಬೀಳುತ್ತಿದ್ದೆ ಎನಿಸುತ್ತದೆ. ಒಂದು ದೃಶ್ಯದ ಶೂಟಿಂಗ್ ವೇಳೆ ತುಂಬ ಗಾಯ ಆಗಿತ್ತು. 9 ದಿನಗಳ ಕಾಲ ನಾನು ಪೇನ್ ಕಿಲ್ಲರ್ ತೆಗೆದುಕೊಂಡಿದ್ದೆ. ಬೆಳಗ್ಗೆ ಒಂದು ಪೇನ್ ಕಿಲ್ಲರ್, ಸಂಜೆ ಒಂದು ಪೇನ್ ಕಿಲ್ಲರ್ ತೆಗೆದುಕೊಂಡು ಶೂಟಿಂಗ್ ಮಾಡಿದ್ದೆ’ ಎಂದು ರಿಷಬ್ ಶೆಟ್ಟಿ (Rishab Shetty) ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
