ರಿಷಬ್​ ಶೆಟ್ಟಿ ನ್ಯಾಷನಲ್ ಅವಾರ್ಡ್ ಪಡೆದಿದ್ದಕ್ಕೆ ನಟ ಯಶ್ ನೀಡಿದ ಮೊದಲ ಪ್ರತಿಕ್ರಿಯೆ ಏನು?

Edited By:

Updated on: Aug 16, 2024 | 7:23 PM

‘ಹೊಂಬಾಳೆ ಫಿಲ್ಮ್ಸ್​’ ನಿರ್ಮಾಣ ಮಾಡಿದ ‘ಕಾಂತಾರ’ ಹಾಗೂ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾಗಳಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ‘ಕಾಂತಾರ’ ಚಿತ್ರದಲ್ಲಿನ ಅಭಿನಯಕ್ಕೆ ರಿಷಬ್​ ಶೆಟ್ಟಿ ಅವರು ‘ಅತ್ಯುತ್ತಮ ನಟ’ ನ್ಯಾಷನಲ್​ ಅವಾರ್ಡ್​ ಪಡೆದುಕೊಂಡಿದ್ದಾರೆ. ಈ ಖುಷಿಯಲ್ಲಿ ಯಶ್​ ಅವರು ನೀಡಿದ ಮೊದಲ ಪ್ರತಿಕ್ರಿಯೆ ಏನು ಎಂಬ ಬಗ್ಗೆ ರಿಷಬ್​ ಶೆಟ್ಟಿ ಮಾತನಾಡಿದ ವಿಡಿಯೋ ಇಲ್ಲಿದೆ..

70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಕನ್ನಡದ ಸಿನಿಮಾಗಳು ಶೈನ್​ ಆಗಿವೆ. ರಿಷಬ್​ ಶೆಟ್ಟಿ ಅವರಿಗೆ ‘ಕಾಂತಾರ’ ಸಿನಿಮಾದಲ್ಲಿನ ನಟನೆಗಾಗಿ ​‘ಅತ್ಯುತ್ತಮ ನಟ’ ರಾಷ್ಟ್ರ ಪ್ರಶಸ್ತಿ ಒಲಿದಿದೆ. ಈ ಸುದ್ದಿ ತಿಳಿದು ನಟ ‘ರಾಕಿಂಗ್ ಸ್ಟಾರ್​’ ಯಶ್​ ಅವರು ದೂರವಾಣಿ ಮೂಲಕ ರಿಷಬ್​ ಶೆಟ್ಟಿಗೆ ಅಭಿನಂದನೆ ತಿಳಿಸಿದರು. ಆ ಬಗ್ಗೆ ರಿಷಬ್​ ಮಾತನಾಡಿದ್ದಾರೆ. ‘ಯಶ್​ ಅವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿನಿಮಾಗೆ ತುಂಬ ದೊಡ್ಡ ಬೆಂಬಲ ನೀಡಿದ್ದರು. ಸಿನಿಮಾ ನೋಡಿ ನನಗೆ ವಿಶ್​ ಮಾಡಿದ್ದರು. ಜನರಿಗೆ ಆ ಸಿನಿಮಾ ತಲುಪಲು ಅವರ ಕೊಡುಗೆ ಇತ್ತು. ಆ ಫೀಲಿಂಗ್​ ಇಂದಿಗೂ ಅವರ ಮೇಲಿದೆ. ಇಂದು ಅವರು ಶೂಟಿಂಗ್​ನಲ್ಲಿ ಇದ್ದರಂತೆ. ರಾಷ್ಟ್ರ ಪ್ರಶಸ್ತಿ ಬಂದ ತಕ್ಷಣ ಫೋನ್​ ಮಾಡಿ ವಿಶ್​ ಮಾಡಿದರು. ಖುಷಿ ಆಯಿತು, ತುಂಬ ಹೆಮ್ಮೆ ಎನಿಸುತ್ತಿದೆ ಅಂತ ಹೇಳಿದರು. ‘ಕೆಜಿಎಫ್​ 2’ ಸಿನಿಮಾಗೆ ಪ್ರಶಸ್ತಿ ಬಂದಿದ್ದಕ್ಕೆ ನಾನು ಅವರಿಗೆ ವಿಶ್​ ಮಾಡಿದೆ’ ಎಂದು ರಿಷಬ್​ ಶೆಟ್ಟಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮಾಲತೇಶ ಜಗ್ಗೀನ್

ಮಾಲತೇಶ ಜಗ್ಗೀನ್. Tv9 ಕನ್ನಡ ವಾಹಿನಿ ಫಿಲಂ ಬ್ಯೂರೋ ಮುಖ್ಯಸ್ಥನಾಗಿ ಕೆಲಸ ಮಾಡ್ತಿದ್ದಾರೆ. ಮಾಲತೇಶ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕು ಹೊಳಲು ಗ್ರಾಮದವರು. ಕಳೆದ 15 ವರ್ಷಗಳಲ್ಲಿ ಮಾಧ್ಯಮ ಲೋಕದ ವಿವಿಧ ವಿಭಾಗಗಳಲ್ಲಿ ವರದಿಗಾರಿಕೆ ಮಾಡಿದ ಅನುಭವ ಇದೆ. ಸಿನಿಮಾ ವಿಭಾಗದ ಜೊತೆ ರಾಜಕೀಯ, ಮೆಟ್ರೋ, ಕ್ರೈಂ ವಿಭಾಗದಲ್ಲೂ ಕೆಲವು ಸನ್ನಿವೇಶಗಳಲ್ಲಿ ವರದಿಗಾರಿಕೆ ಮಾಡಿದ್ದಾರೆ. ಹಾವೇರಿಯ ಕೆಎಫ್ ಚಾನಲ್ , ನಂತರ ಬೆಂಗಳೂರಿನ ಸಮಯ ನ್ಯೂಸ್, ಜನಶ್ರಿ ನ್ಯೂಸ್, ಪಬ್ಲಿಕ್ ಟಿವಿ ಸೇರಿದಂತೆ ವಿವಿಧ ವಾಹಿನಿಗಳಲ್ಲಿ ಕೆಲಸ ಮಾಡಿದ ಅನುಭವ ಇದೆ. Tv9kannada ನ್ಯೂಸ್ ಚಾನಲ್ ನಲ್ಲಿ ಕಳೆದ 10 ವರ್ಷಗಳಿಂದ ಇದ್ದಾರೆ. ಕಲೆ, ಸಾಹಿತ್ಯ, ಸಿನಿಮಾ, ಕ್ರಿಡೆ ಆಸಕ್ತಿ ವಿಷಯಗಳು.

Read More