ಕಾಶಿಯಲ್ಲಿ ಭಕ್ತಿಯಿಂದ ಗಂಗಾ ಆರತಿ ಕಣ್ತುಂಬಿಕೊಂಡ ರಿಷಬ್; ಉತ್ತರದಲ್ಲಿ ಶೆಟ್ರ ಹವಾ ನೋಡಿ
ರಿಷಬ್ ಶೆಟ್ಟಿ ಅವರು ‘ಕಾಂತಾರ: ಚಾಪ್ಟರ್ 1’ ಚಿತ್ರದ ಮೂಕ ದೊಡ್ಡ ಯಶಸ್ಸು ಕಂಡಿರೋದು ಗೊತ್ತೇ ಇದೆ. ಈ ಸಿನಿಮಾ ಸೂಪರ್ ಹಿಟ್ ಆಯಿತು. ಕನ್ನಡ ಮಾತ್ರವಲ್ಲದೆ ಪರಭಾಷೆಯಲ್ಲೂ ಚಿತ್ರ ಗಮನ ಸೆಳೆದಿದೆ. ಉತ್ತರ ಪ್ರದೇಶದಲ್ಲಿ ರಿಷಬ್ ಶೆಟ್ಟಿ ಹವಾ ಹೇಗಿದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ.
ರಿಷಬ್ ಶೆಟ್ಟಿ ಅವರು ‘ಕಾಂತಾರ: ಚಾಪ್ಟರ್ 1’ ಚಿತ್ರದ ಮೂಲಕ ಮೋಡಿ ಮಾಡಿದ್ದಾರೆ ಎಂದರೂ ತಪ್ಪಾಗಲಾರದು. ಅವರು ಈಗ ಕಾಶಿಗೆ ತೆರಳಿದ್ದಾರೆ. ಅಲ್ಲಿ ಅವರು ವಿಶ್ವನಾಥನ ದರ್ಶನ ಮಾಡಿದ್ದಾರೆ. ಇದರ ಜೊತೆಗೆ ಗಂಗೆಯ ತಟದಲ್ಲಿ ಕುಳಿತು ಗಂಗಾ ಆರತಿಯನ್ನು ಕೂಡ ಕಣ್ತುಂಬಿಕೊಂಡರು. ಆ ಸಂದರ್ಭದ ವಿಡಿಯೋ ಲಭ್ಯವಾಗಿದೆ. ಉತ್ತರದಲ್ಲಿ ರಿಷಬ್ನ ಗುರುತಿಸಿದ್ದಾರೆ. ಅಲ್ಲಿಯೂ ದೊಡ್ಡ ಅಭಿಮಾನಿ ಬಳಗ ಅವರಿಗೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.