AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿಯ ಸಂಸತ್ ಬಳಿಯ ಸಂಸದರ ಅಪಾರ್ಟ್​ಮೆಂಟ್​​ನಲ್ಲಿ ಬೆಂಕಿ ಅವಘಡ

ದೆಹಲಿಯ ಸಂಸತ್ ಬಳಿಯ ಸಂಸದರ ಅಪಾರ್ಟ್​ಮೆಂಟ್​​ನಲ್ಲಿ ಬೆಂಕಿ ಅವಘಡ

ಸುಷ್ಮಾ ಚಕ್ರೆ
|

Updated on:Oct 18, 2025 | 3:26 PM

Share

ದೆಹಲಿಯಲ್ಲಿ ಸಂಸದರಿಗೆ ಮಂಜೂರು ಮಾಡಲಾದ ಅಪಾರ್ಟ್‌ಮೆಂಟ್‌ನಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಈ ಸ್ಥಳದಲ್ಲಿ ಹಲವಾರು ಅಗ್ನಿಶಾಮಕ ದಳದ ವಾಹನಗಳು ಬೀಡುಬಿಟ್ಟಿವೆ.ದೆಹಲಿಯ ಕಾವೇರಿ ಅಪಾರ್ಟ್‌ಮೆಂಟ್‌ನಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಇದರಲ್ಲಿ ಹಲವಾರು ಲೋಕಸಭಾ ಮತ್ತು ರಾಜ್ಯಸಭಾ ಸಂಸದರಿದ್ದಾರೆ. ದೆಹಲಿಯ ಕಾವೇರಿ ಅಪಾರ್ಟ್‌ಮೆಂಟ್‌ನಲ್ಲಿ ಹಲವಾರು ಸಂಸದರ ವಸತಿ ನಿಲಯಗಳಿವೆ.

ನವದೆಹಲಿ, ಅಕ್ಟೋಬರ್ 18: ದೆಹಲಿಯ (Delhi) ಬಿಶಂಭರ್ ದಾಸ್ ಮಾರ್ಗದಲ್ಲಿರುವ ಕಾವೇರಿ ಅಪಾರ್ಟ್‌ಮೆಂಟ್‌ನಲ್ಲಿ ಇಂದು ಮಧ್ಯಾಹ್ನ ಭಾರಿ ಬೆಂಕಿ ಅವಘಡ (Fire Accident) ಸಂಭವಿಸಿದೆ. ಈ ಅಪಾರ್ಟ್​ಮೆಂಟ್ ಅನ್ನು ಸಂಸದರಿಗೆ ವಾಸ್ತವ್ಯಕ್ಕೆ ನೀಡಲಾಗಿದೆ. ಈ ಅಪಾರ್ಟ್​ಮೆಂಟ್​​ನಲ್ಲಿ ಹಲವು ರಾಜ್ಯಸಭಾ ಮತ್ತು ಲೋಕಸಭಾ ಸಂಸದರು ವಾಸವಾಗಿದ್ದಾರೆ. ಬೆಂಕಿಯನ್ನು ನಂದಿಸಲು ಹಲವಾರು ಅಗ್ನಿಶಾಮಕ ದಳದ ವಾಹನಗಳನ್ನು ನಿಯೋಜಿಸಲಾಗಿದೆ.

ದೆಹಲಿಯ ಕಾವೇರಿ ಅಪಾರ್ಟ್‌ಮೆಂಟ್‌ನಲ್ಲಿ ಹಲವಾರು ಸಂಸದರ ವಸತಿ ನಿಲಯಗಳಿವೆ. “ಟಿಟಿಎಲ್ ಸೇರಿದಂತೆ 14 ವಾಹನಗಳನ್ನು ನಾವು ತಕ್ಷಣ ಕಳುಹಿಸಿದ್ದೇವೆ. ಇಲ್ಲಿಯವರೆಗೆ, ಹೆಚ್ಚಿನ ಹಾನಿ ಸ್ಟಿಲ್ಟ್ ಮಹಡಿಯಲ್ಲಿ ಸಂಭವಿಸಿದೆ. ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಆದರೆ, ನಮ್ಮ ಕೆಲಸ ಇನ್ನೂ ಮುಂದುವರೆದಿದೆ” ಎಂದು ದೆಹಲಿ ಅಗ್ನಿಶಾಮಕ ಸೇವೆಯ ಎಡಿಒ ಭೂಪೇಂದರ್ ಹೇಳಿದ್ದಾರೆ. ಈ ಬೆಂಕಿ ಅಪಘಾತ ಸ್ಥಳೀಯರಲ್ಲಿ ಭಯವನ್ನುಂಟುಮಾಡಿದೆ. ಬೆಂಕಿ ಅವಘಡಕ್ಕೆ ಕಾರಣವೇನೆಂದು ಇನ್ನೂ ತಿಳಿದಿಲ್ಲ. ಇದಲ್ಲದೆ, ಯಾವುದೇ ಸಾವುನೋವು ಅಥವಾ ಯಾವುದೇ ರೀತಿಯ ಹಾನಿ ವರದಿಯಾಗಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Oct 18, 2025 03:23 PM