ನಿರ್ಬಂಧದ ನಡುವೆಯೂ ಸರ್ಕಾರಿ ಮೈದಾನದಲ್ಲಿ ಮೊಳಗಿತು RSS ಗೀತೆ, ಪಥಸಂಚಲನ,
ಸರ್ಕಾರಿ ಸ್ಥಳಗಳಲ್ಲಿ ಯಾವುದೇ ಸಂಘ ಸಂಸ್ಥೆ ಕಾರ್ಯಚಟುವಟಿಕೆಗಳಿಗೆ ಬ್ರೇಕ್ ಹಾಕಲಾಗಿದೆ. ಸರ್ಕಾರ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಆರ್‌ಎಸ್‌ಎಸ್ (RSS) ಚಟುವಟಿಕೆಗಳಿಗೆ ಮೂಗುದಾರ ಹಾಕಲೆಂದೇ ಸಿದ್ದರಾಮಯ್ಯ ಸರ್ಕಾರ ಮೊನ್ನೇ ನಡೆದ ಸಚಿವ ಸಂಪುಟದಲ್ಲಿ ಈ ತೀರ್ಮಾನ ತೆಗೆದುಕೊಂಡಿದೆ. ಇದರ ನಡುವೆಯೂ ತುಮಕೂರಿನ ಜ್ಯೂನಿಯರ್ ಕಾಲೇಜು ಮೈದಾನದಿಂದಲೇ ಆರ್ ಎಸ್ಎಸ್ ಗೀತೆ ಮೊಳಗಿದೆ. ಸರ್ಕಾರಿ ಮೈದಾನದಿಂದಲೇ ಪಥಸಂಚಲನವೂ ಸಹ ಶುರುವಾಗಿದೆ. ಈ ಪಥಸಂಚಲನದಲ್ಲಿ ಬಿಜೆಪಿ ಶಾಸಕ ಸುರೇಶ್ ಗೌಡ, ಜ್ಯೋತಿಗಣೇಶ್ ಹಾಗೂ ಮಾಜಿ ಸಚಿವ ಸೊಗಡು ಶಿವಣ್ಣ ಸಹ ಭಾಗಿಯಾಗಿದ್ದಾರೆ.
ತುಮಕೂರು, (ಅಕ್ಟೋಬರ್ 18): ಸರ್ಕಾರಿ ಸ್ಥಳಗಳಲ್ಲಿ ಯಾವುದೇ ಸಂಘ ಸಂಸ್ಥೆ ಕಾರ್ಯಚಟುವಟಿಕೆಗಳಿಗೆ ಬ್ರೇಕ್ ಹಾಕಲಾಗಿದೆ. ಸರ್ಕಾರ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಆರ್‌ಎಸ್‌ಎಸ್ (RSS) ಚಟುವಟಿಕೆಗಳಿಗೆ ಮೂಗುದಾರ ಹಾಕಲೆಂದೇ ಸಿದ್ದರಾಮಯ್ಯ ಸರ್ಕಾರ ಮೊನ್ನೇ ನಡೆದ ಸಚಿವ ಸಂಪುಟದಲ್ಲಿ ಈ ತೀರ್ಮಾನ ತೆಗೆದುಕೊಂಡಿದೆ. ಇದರ ನಡುವೆಯೂ ತುಮಕೂರಿನ ಜ್ಯೂನಿಯರ್ ಕಾಲೇಜು ಮೈದಾನದಿಂದಲೇ ಆರ್ ಎಸ್ಎಸ್ ಗೀತೆ ಮೊಳಗಿದೆ. ಸರ್ಕಾರಿ ಮೈದಾನದಿಂದಲೇ ಪಥಸಂಚಲನವೂ ಸಹ ಶುರುವಾಗಿದೆ. ಈ ಪಥಸಂಚಲನದಲ್ಲಿ ಬಿಜೆಪಿ ಶಾಸಕ ಸುರೇಶ್ ಗೌಡ, ಜ್ಯೋತಿಗಣೇಶ್ ಹಾಗೂ ಮಾಜಿ ಸಚಿವ ಸೊಗಡು ಶಿವಣ್ಣ ಸಹ ಭಾಗಿಯಾಗಿದ್ದಾರೆ.

