ಅಮೆರಿಕನ್ನಡಿಗರಿಗೆ ಧನ್ಯವಾದ ಹೇಳಿದ ರಿಷಬ್ ಪತ್ನಿ ಪ್ರಗತಿ ಶೆಟ್ಟಿ
Rishab-Pragathi: ಪತಿ ರಿಷಬ್ ಶೆಟ್ಟಿ ಜೊತೆ ವಾಷಿಂಗ್ಟನ್ನಲ್ಲಿ ಕನ್ನಡಿಗರು ನೀಡಿದ ಪ್ರಶಸ್ತಿ ಪಡೆದ ಪ್ರಗತಿ ಶೆಟ್ಟಿ, ಅಲ್ಲಿನ ಕನ್ನಡಿಗರನ್ನು ಮನಸಾರೆ ಹೊಗಳಿದ್ದಾರೆ.
ಅಮೆರಿಕಾದ (America) ವಾಷಿಂಗ್ಟನ್ ನಗರದ ಪ್ಯಾರಾಮೌಂಟ್ ಥಿಯೇಟರ್ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ (Rishab Shetty) ಹಾಗೂ ಅವರ ಪತ್ನಿ ಪ್ರಗತಿ ಶೆಟ್ಟಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಶ್ವ ಶ್ರೇಷ್ಠ ಕನ್ನಡಿಗ 2023 ಪ್ರಶಸ್ತಿಯನ್ನು ರಿಷಬ್ಗೆ ನೀಡಲಾಯ್ತು. 1800 ಕ್ಕೂ ಹೆಚ್ಚು ಜನ ಭಾಗಿಯಾಗಿದ್ದ ಸಮಾರಂಭದಲ್ಲಿ ರಿಷಬ್ ಜೊತೆ ಪ್ರಶಸ್ತಿ ಸ್ವೀಕರಿಸಿದ ಪತ್ನಿ ಪ್ರಗತಿ ಶೆಟ್ಟಿ ಅಮೆರಿಕ ಕನ್ನಡಿಗರ ಬಗ್ಗೆ ಹೆಮ್ಮೆಯಿಂದ ಮಾತನಾಡಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ