ಹೆಚ್ ಡಿ ಕುಮಾರಸ್ವಾಮಿಗೆ ಮಾಡಲು ಕೆಲಸವಿಲ್ಲ, ಸರ್ಕಾರದ ಬಗ್ಗೆ ನೆಗೆಟಿವ್ ಕಾಮೆಂಟ್ ಮಾಡುತ್ತಾ ಕಾಲಹರಣ ಮಾಡುತ್ತಾರೆ: ದಿನೇಶ್ ಗುಂಡೂರಾವ್
ಯೋಜನೆಗಳು ಒಂದೊಂದಾಗಿ ಜಾರಿಗೊಳ್ಳುತ್ತಿರುವುದು ಕುಮಾರಸ್ವಾಮಿಗೆ ಸಹಿಸಲಾಗುತ್ತಿಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಬೆಂಗಳೂರು: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಜೆಡಿಎಸ್ ಶಾಸಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಸರ್ಕಾರದ ವಿರುದ್ಧ ಮಾಡಿರುವ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತಾಡಿದ ಗುಂಡೂರಾವ್, ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಏನೇನು ಮಾಡಿದರು ಅಂತ ಜನಕ್ಕೆ ಗೊತ್ತಿದೆ, ಆದರೆ ಕಾಂಗ್ರೆಸ್ ಜನಪರವಾದ ಮತ್ತು ಪಾರದರ್ಶಕ ಆಡಳಿತ ನೀಡಲು ಸಂಕಲ್ಪ ಮಾಡಿಕೊಂಡಿದೆ ಎಂದು ಹೇಳಿದರು. ರಾಜ್ಯದ ಎಲ್ಲ ಕುಟುಂಬಗಳಿಗೆ ಒಂದಲ್ಲ ಒಂದು ರೀತಿ ನೆರವಾಗುವ ಹಾಗೆ ಯೋಜನೆಗಳನ್ನು ಸರ್ಕಾರ ರೂಪಿಸುತ್ತಿದೆ. ಯೋಜನೆಗಳು ಒಂದೊಂದಾಗಿ ಜಾರಿಗೊಳ್ಳುತ್ತಿರುವಂತೆಯೇ ಕುಮಾರಸ್ವಾಮಿಯವರಿಗೆ ಸಹಿಸಲಾಗುತ್ತಿಲ್ಲ ಮತ್ತು ಅವರಿಗೆ ಮಾಡಲು ಕೆಲಸ ಕೂಡ ಇಲ್ಲ. ಸರ್ಕಾರದ ಬಗ್ಗೆ ಅವರಿಗೆ ಪಾಸಿಟಿವ್ ಕಾಮೆಂಟ್ ಮಾಡುವುದು ಸಾಧ್ಯವಿಲ್ಲದ ಕಾರಣ ಹೀಗೆ ನೆಗೆಟಿವ್ ಹೇಳಿಕೆಗಳನ್ನು ನೀಡುತ್ತಾ ಕಾಲಹರಣ ಮಾಡುತ್ತಾರೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ