‘ಕಾಂತಾರ’ ರಾಣಿ ಪ್ರಗತಿ ಶೆಟ್ಟಿಗೆ ಕಾಡುತ್ತಿದೆ ಚಿತ್ರೀಕರಣದ ನೆನಪು, ಕಾಂತಾರ 2 ನಲ್ಲಿ ಪತ್ನಿಗೆ ಮರು ಅವಕಾಶ ಕೊಡ್ತಾರಾ ರಿಷಬ್?

Kantara: ರಿಷಬ್ ಶೆಟ್ಟಿ ನಿರ್ದೇಶಿಸಿರುವ ಕಾಂತಾರ ಸಿನಿಮಾದ ಸಣ್ಣ ಪಾತ್ರದಲ್ಲಿ ರಿಷಬ್​ರ ಪತ್ನಿ ಪ್ರಗತಿ ಶೆಟ್ಟಿ ನಟಿಸಿದ್ದಾರೆ. ರಿಷಬ್​ರ ಇಬ್ಬರು ಮಕ್ಕಳೂ ಸಹ ಕಾಂತಾರ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಕಾಂತಾರ 2 ನಲ್ಲೂ ಪ್ರಗತಿ ಶೆಟ್ಟಿಗೆ ನಟಿಸಲು ಸಿಗಲದೆಯೇ ಅವಕಾಶ?

'ಕಾಂತಾರ' ರಾಣಿ ಪ್ರಗತಿ ಶೆಟ್ಟಿಗೆ ಕಾಡುತ್ತಿದೆ ಚಿತ್ರೀಕರಣದ ನೆನಪು, ಕಾಂತಾರ 2 ನಲ್ಲಿ ಪತ್ನಿಗೆ ಮರು ಅವಕಾಶ ಕೊಡ್ತಾರಾ ರಿಷಬ್?
ಕಾಂತಾರ ಸಿನಿಮಾದಲ್ಲಿ ಪ್ರಗತಿ ಶೆಟ್ಟಿ
Follow us
ಮಂಜುನಾಥ ಸಿ.
|

Updated on: Apr 26, 2023 | 11:08 PM

ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ (Kantara) ಸಿನಿಮಾ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಸೂಪರ್ ಡೂಪರ್ ಹಿಟ್ ಸಿನಿಮಾ ಎನಿಸಿಕೊಂಡಿದೆ. ರಿಷಬ್ ಶೆಟ್ಟಿ ಪಾತ್ರವೇ ಅಲ್ಲದೆ ಸಿನಿಮಾದಲ್ಲಿ ಕಾಣಿಸಿಕೊಂಡ ಹಲವು ಪಾತ್ರಗಳು ಪ್ರೇಕ್ಷಕನ ಸ್ಮೃತಿಪಟಲದಲ್ಲಿ ಅಚ್ಚೊತ್ತಿವೆ. ಸಿನಿಮಾದಲ್ಲಿ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ (Pragathi Shetty) ಸಹ ನಟಿಸಿದ್ದು ಅವರನ್ನು ಹೆಚ್ಚು ಮಂದಿ ಗುರುತು ಹಿಡಿದಿರಲಕ್ಕಿಲ್ಲ. ಆದರೆ ಈಗ ಸ್ವತಃ ಪ್ರಗತಿ ಶೆಟ್ಟಿಯವರೇ ಕಾಂತಾರ ಸಿನಿಮಾದ ತಮ್ಮ ಫೋಟೊಗಳನ್ನು ಹಂಚಿಕೊಂಡಿದ್ದು, ಚಿತ್ರೀಕರಣದ ನೆನಪು ಕಾಡುತ್ತಿದೆ ಎಂದಿದ್ದಾರೆ.

ಕಾಂತಾರ ಸಿನಿಮಾದ ಕತೆ ಪ್ರಾರಂಭವಾಗುವುದೇ ರಾಜ ನೆಮ್ಮದಿಗಾಗಿ ಅರಸುವ ಕತೆಯಿಂದ. ರಾಜನ ಪತ್ನಿ ಅಂದರೆ ರಾಣಿಯ ಪಾತ್ರದಲ್ಲಿ ರಿಷಬ್ ಶೆಟ್ಟಿಯ ಪತ್ನಿ ಪ್ರಗತಿ ಶೆಟ್ಟಿ ಅಭಿನಯಿಸಿದ್ದಾರೆ. ಸಿನಿಮಾದಲ್ಲಿ ಕೆಲವು ದೃಶ್ಯಗಳಲ್ಲಿ ಮಾತ್ರವೇ ಪ್ರಗತಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ ಕಾಂತಾರ ಸಿನಿಮಾದಲ್ಲಿ ಪ್ರಗತಿ ಶೆಟ್ಟಿ ಮಾತ್ರವೇ ಅಲ್ಲದೆ ಅವರ ಇಬ್ಬರು ಮುದ್ದು ಮಕ್ಕಳು ಸಹ ಕಾಣಿಸಿಕೊಂಡಿದ್ದಾರೆ. ಒಟ್ಟಾರೆ ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿಯ ಕುಟುಂಬ ಸದಸ್ಯರೆಲ್ಲರೂ ಇದ್ದಾರೆ.

ಕಾಂತಾರ ಸಿನಿಮಾದಲ್ಲಿನ ತಮ್ಮ ಪಾತ್ರದ ಚಿತ್ರಗಳನ್ನು ಪ್ರಗತಿ ಶೆಟ್ಟಿ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಕಾಂತಾರ ಸಿನಿಮಾದೊಂದಿಗೆ ನನ್ನ ಅನುಭವ ನಿಜವಾಗಿಯೂ ಅವಿಸ್ಮರಣೀಯವಾದದ್ದು. ಏಕೆಂದರೆ ಇದು ನಮ್ಮ ಎರಡನೇ ಮಗುವು ಭೂಮಿಗೆ ಬರುವ ಮೊದಲು ಪ್ರಾರಂಭವಾಯಿತು ಮತ್ತು ನನ್ನ ಇಬ್ಬರೂ ಮಕ್ಕಳ ಅದ್ಭುತ ಡೆಬ್ಯೂಟ್ ಆಗಿ ಮುಂದುವರೆಯಿತು. ಕಾಂತಾರ ಸಿನಿಮಾದ ಪ್ರಯಾಣದಲ್ಲಿ ನಟಿಯಾಗಿ ಹಾಗೂ ವಸ್ತ್ರ ವಿನ್ಯಾಸಕಿಯಾಗಿ ಎರಡು ಪಾತ್ರಗಳನ್ನು ನಿರ್ವಹಿಸುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಚಿತ್ರೀಕರಣದ ನೆನಪುಗಳು ಸದಾ ಸ್ಮರಣೀಯವಾಗಿರುತ್ತವೆ ಎಂದಿದ್ದಾರೆ.

ಇದೀಗ ರಿಷಬ್ ಶೆಟ್ಟಿ ಕಾಂತಾರ 2 ಸಿನಿಮಾದ ತಯಾರಿಯಲ್ಲಿದ್ದಾರೆ. ಕಾಂತಾರ ಸಿನಿಮಾದ ನಡೆದ ಕಾಲಘಟ್ಟಕ್ಕೂ ಹಿಂದಿನ ಕತೆಯನ್ನು ಈ ಸಿನಿಮಾ ಒಳಗೊಂಡಿರಲಿದೆ. ಕಾಂತಾರ ಸಿನಿಮಾದಲ್ಲಿ ಪ್ರಗತಿ ಶೆಟ್ಟಿಗೆ ಹೆಚ್ಚಿನ ಅವಕಾಶ ಇರಲಿಲ್ಲ ಕೆಲವೇ ದೃಶ್ಯಗಳಲ್ಲಿ ಮಾತ್ರವೇ ಅವರು ಕಾಣಿಸಿಕೊಂಡಿದ್ದರು. ಇದೀಗ ಕಾಂತಾರ 2 ಸಿನಿಮಾದಲ್ಲಿ ಅವರಿಗೆ ಹೆಚ್ಚಿನ ಅವಕಾಶ ಇರಲಿದೆಯೇ ಕಾದು ನೋಡಬೇಕಿದೆ.

ಕಾಂತಾರ ಸಿನಿಮಾವನ್ನು ರಿಷಬ್ ಶೆಟ್ಟಿ ನಿರ್ದೇಶನ ಮಾಡಿ ನಾಯಕನಾಗಿಯೂ ನಟಿಸಿದ್ದರು. ಸಿನಿಮಾವನ್ನು ಹೊಂಬಾಳೆ ಫಿಲಮ್ಸ್​ನ ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ್ದರು. ಸಿನಿಮಾಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದರು. ಪ್ರಗತಿ ಶೆಟ್ಟಿಯವರು ಸಿನಿಮಾದ ಪಾತ್ರಗಳಿಗೆ ವಸ್ತ್ರ ವಿನ್ಯಾಸ ಮಾಡಿದ್ದರು. ಸಪ್ತಮಿ ಗೌಡ ನಾಯಕಿಯಾಗಿ ನಟಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ