ಉಡುಪಿಯಲ್ಲಿ ವರುಣಾರ್ಭಟ: ಪ್ರವಾಹದಲ್ಲಿ ಸಿಲುಕಿದವರ ರೋಚಕ ರಕ್ಷಣಾ ಕಾರ್ಯಾಚರಣೆ
[lazy-load-videos-and-sticky-control id=”8grwzxBbftw”] ಉಡುಪಿ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದ ಸುವರ್ಣಾ ನದಿ ಉಕ್ಕಿಹರಿಯುತ್ತಿದೆ. ಇದರಿಂದಾಗಿ ನದಿ ದಡದಲ್ಲಿರುವ ಜಲವಿದ್ಯುತ್ ಯೋಜನೆ ಘಟಕದಲ್ಲಿ ಇಬ್ಬರು ಸಿಬ್ಬಂದಿಗಳು ಸಿಕ್ಕಿಹಾಕಿಕೊಂಡಿದ್ದಾರೆ. ಹಿರಿಯಡ್ಕದ ಬಜೆ ಸಮೀಪ ಅಣೆಕಟ್ಟಿನ ಪಕ್ಕದಲ್ಲಿ ಈ ಘಟಕವಿದ್ದು, ಇಬ್ಬರು ಸಿಬ್ಬಂದಿಗಳು ಪಂಪ್ ಹೌಸ್ನಲ್ಲಿ ರಾತ್ರಿ ಮಲಗಿದ್ದಾರೆ. ಆದರೆ ರಾತ್ರಿ ಇದಕ್ಕಿದ್ದಂತೆ, ಸುವರ್ಣಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಪಂಪ್ ಹೌಸ್ನ ನಾಲ್ಕು ಮೂಲೆಯಲ್ಲೂ ನೀರು ಆವರಿಸಿದೆ. ಹೀಗಾಗಿ ಸಿಬ್ಬಂದಿ ತಮ್ಮ ಜೀವ ಉಳಿಸಿಕೊಳ್ಳಲು […]
[lazy-load-videos-and-sticky-control id=”8grwzxBbftw”]
ಉಡುಪಿ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದ ಸುವರ್ಣಾ ನದಿ ಉಕ್ಕಿಹರಿಯುತ್ತಿದೆ. ಇದರಿಂದಾಗಿ ನದಿ ದಡದಲ್ಲಿರುವ ಜಲವಿದ್ಯುತ್ ಯೋಜನೆ ಘಟಕದಲ್ಲಿ ಇಬ್ಬರು ಸಿಬ್ಬಂದಿಗಳು ಸಿಕ್ಕಿಹಾಕಿಕೊಂಡಿದ್ದಾರೆ.
ಹಿರಿಯಡ್ಕದ ಬಜೆ ಸಮೀಪ ಅಣೆಕಟ್ಟಿನ ಪಕ್ಕದಲ್ಲಿ ಈ ಘಟಕವಿದ್ದು, ಇಬ್ಬರು ಸಿಬ್ಬಂದಿಗಳು ಪಂಪ್ ಹೌಸ್ನಲ್ಲಿ ರಾತ್ರಿ ಮಲಗಿದ್ದಾರೆ. ಆದರೆ ರಾತ್ರಿ ಇದಕ್ಕಿದ್ದಂತೆ, ಸುವರ್ಣಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಪಂಪ್ ಹೌಸ್ನ ನಾಲ್ಕು ಮೂಲೆಯಲ್ಲೂ ನೀರು ಆವರಿಸಿದೆ.
ಹೀಗಾಗಿ ಸಿಬ್ಬಂದಿ ತಮ್ಮ ಜೀವ ಉಳಿಸಿಕೊಳ್ಳಲು ಜನರೇಟರ್ ಮೇಲೆ ಹತ್ತಿ ಕುಳಿತಿದ್ದಾರೆ. ನದಿಯ ಭೋರ್ಗರೆತದ ಕಾರಣದಿಂದಾಗಿ ಕಾರ್ಯಾಚರಣೆ ವಿಳಂಬವಾಗಿದ್ದು, ರಕ್ಷಣಾ ಸಿಬ್ಬಂದಿ ಪ್ರವಾಹ ತಗ್ಗಿದ ಬಳಿಕೆ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಲು ತೀರ್ಮಾನಿಸಿದ್ದಾರೆ.
ಮಲ್ಪೆಯಲ್ಲಿ 3 ಬೋಟ್ ಮುಳುಗಡೆ ಜಿಲ್ಲೆಯಲ್ಲಿ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಮಲ್ಪೆಯಲ್ಲಿ 3 ಬೋಟ್ಗಳು ಮುಳುಗಡೆಯಾಗಿವೆ. ಹೀಗಾಗಿ, ಮೀನುಗಾರರು ಕಲ್ಲು ಬಂಡೆಯ ಮೇಲೆ ಆಶ್ರಯ ಪಡೆದು ಬಳಿಕ ಸುರಕ್ಷಿತವಾಗಿ ದಡ ಸೇರಿದ್ದಾರೆ. ಬೋಟ್ಗಳು ಮುಳುಗಡೆಯಾಗಿದ್ದರಿಂದ ಮೀನುಗಾರರಿಗೆ ಲಕ್ಷಾಂತರ ರೂ ನಷ್ಟವುಂಟಾಗಿದೆ.
ಅಗತ್ಯವಿರುವ ಸ್ಥಳಗಳಿಗೆ NDRF ತಂಡವನ್ನು ರವಾನಿಸುವಂತೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ DC ಗೆ ಸೂಚನೆ ನೀಡಿದ್ದಾರೆ. ಜೊತೆಗೆ, ನೆರೆಪೀಡಿತ ಕುಕ್ಕೆಹಳ್ಳಿ ಹಾಗೂ ಇನ್ನಿತರ ಕಡೆಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಪ್ರವಾಹದಲ್ಲಿ ಸಿಲುಕಿದ್ದವರ ರಕ್ಷಣೆ ಕಲ್ಸಂಕ ಬೈಲಕೆರೆಯಲ್ಲಿ ಪ್ರವಾಹದಲ್ಲಿ ಸಿಲುಕಿದ್ದವರನ್ನು ಕ್ರೇನ್ ಮೂಲಕ ರಕ್ಷಣೆ ಮಾಡಲಾಗಿದೆ. ಪ್ರವಾಹದಲ್ಲಿ ಸಿಲುಕಿದ್ದ ವೃದ್ಧರು, ಮಹಿಳೆಯರು ಹಾಗೂ ಮಕ್ಕಳನ್ನ ನಗರಸಭೆ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.
Published On - 12:09 pm, Sun, 20 September 20