ಇಸ್ರೋದಿಂದ ಆರ್​ಎಲ್​ವಿ ಲ್ಯಾಂಡಿಂಗ್ ಪ್ರಯೋಗ ಯಶಸ್ವಿ

| Updated By: ವಿವೇಕ ಬಿರಾದಾರ

Updated on: Jun 23, 2024 | 10:32 AM

ಚಳ್ಳಕೆರೆ ಬಳಿಯ ಎಟಿಆರ್​ನಲ್ಲಿ (ಎರೊನೆಟಿಕಲ್ ಟೆಸ್ಟ್ ರೇಂಜ್) ಇಸ್ರೋದ ‘ಪುಷ್ಪಕ’ ಆರ್​ಎಲ್​ವಿ- ಎಲ್​ಇಎಕ್ಸ್​-3 (ಮರು ಬಳಕೆ ಉಡಾವಣ ವಾಹನ) ಲ್ಯಾಂಡಿಂಗ್ ಪ್ರಯೋಗ ಯಶಸ್ವಿಯಾಗಿದೆ. ಈ ಬಗ್ಗೆ ಇಸ್ರೋ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.

ಚಿತ್ರದುರ್ಗ, ಜೂನ್​ 23: ಚಳ್ಳಕೆರೆ ಬಳಿಯ ಎಟಿಆರ್​ನಲ್ಲಿ (ಎರೊನೆಟಿಕಲ್ ಟೆಸ್ಟ್ ರೇಂಜ್) ಇಸ್ರೋದ ‘ಪುಷ್ಪಕ’ ಆರ್​ಎಲ್​ವಿ-ಎಲ್​ಇಎಕ್ಸ್​-3 (ಮರು ಬಳಕೆ ಉಡಾವಣ ವಾಹನ) ಲ್ಯಾಂಡಿಂಗ್ ಪ್ರಯೋಗ ಯಶಸ್ವಿಯಾಗಿದೆ. ಈ ಬಗ್ಗೆ ಇಸ್ರೋ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಕರ್ನಾಟಕದ ಚಿತ್ರದುರ್ಗದ ಏರೋನಾಟಿಕಲ್ ಟೆಸ್ಟ್ ರೇಂಜ್​ನಲ್ಲಿ (ATR) ನಡೆಸಲಾದ ಸರಣಿಯ ಮೂರನೇಯ RLV LEX-03 ಲ್ಯಾಂಡಿಂಗ್ ಪ್ರಯೋಗ ಇಂದು (ಜೂ.23) ಬೆಳಿಗ್ಗೆ 7.10ಕ್ಕೆ ನಡೆಸಲಾಗಿದೆ. ಆ ಮೂಲಕ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನ (RLV) ತಂತ್ರಜ್ಞಾನದ ಕ್ಷೇತ್ರದಲ್ಲಿ ಇಸ್ರೋ ಪ್ರಮುಖ ಮೈಲಿಗಲ್ಲನ್ನು ಸಾಧಿಸಿದೆ.

RLV-LEX-01 ಮಿಷನ್ ಕಳೆದ ವರ್ಷ ಪೂರ್ಣಗೊಂಡ ನಂತರ, RLV-LEX-02ನ ಲ್ಯಾಂಡಿಂಗ್ ಸಾಮರ್ಥ್ಯವನ್ನು ಪರಿಶೀಲಿಸಲಾಯಿತು. ಇದರ ಬಳಿಕ ಇದೀಗ, RLV-LEX-03 ಪರೀಕ್ಷಿಸಲಾಗಿದ್ದು ಯಶಸ್ವಿಯಾಗಿ ರನ್‌ವೇ ಮೇಲೆ ಇಳಿದಿದೆ. ಪುಷ್ಪಕ್ ಎಂಬ ವಾಹವನ್ನು ಭಾರತೀಯ ವಾಯುಪಡೆಯ ಚಿನೂಕ್ ಹೆಲಿಕಾಪ್ಟರ್ ಮೂಲಕ ಮೇಲಕ್ಕೆ ಕೊಂಡೊಯ್ಯಲಾಯಿತು. ಬಳಿಕ 4.5 ಕಿಮೀ ಎತ್ತರದಿಂದ ಅದನ್ನು ಲ್ಯಾಂಡಿಗ್​ಗೆ ಬಿಡಲಾಯಿತು. ಇದು ರನ್‌ವೇಯಲ್ಲಿ ನಿಖರವಾಗಿ ಇಳಿಯಿತು ಮತ್ತು ಬ್ರೇಕ್ ಪ್ಯಾರಾಚೂಟ್, ಲ್ಯಾಂಡಿಂಗ್ ಗೇರ್ ಬ್ರೇಕ್‌ಗಳು ಮತ್ತು ನೋಸ್ ವೀಲ್ ಸ್ಟೀರಿಂಗ್ ಸಿಸ್ಟಮ್​ ಅನ್ನು ಬಳಸಿಕೊಂಡು ನಿಲ್ಲಿಸಿತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ