- Kannada News Photo gallery 'Pushpaka' RLV landing trial successful at ISRO premises near Challakere, Chitradurga
ಇಸ್ರೋದಿಂದ ‘ಪುಷ್ಪಕ’ ಆರ್ಎಲ್ವಿ ಲ್ಯಾಂಡಿಂಗ್ ಪ್ರಯೋಗ ಯಶಸ್ವಿ
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಬಳಿಯ ಎಟಿಆರ್ನಲ್ಲಿ (ಎರೊನೆಟಿಕಲ್ ಟೆಸ್ಟ್ ರೇಂಜ್) ಇಸ್ರೋದ ‘ಪುಷ್ಪಕ’ ಆರ್ಎಲ್ವಿ (ಮರು ಬಳಕೆ ಉಡಾವಣ ವಾಹನ) ಲ್ಯಾಂಡಿಂಗ್ ಪ್ರಯೋಗ ಯಶಸ್ವಿಯಾಗಿದೆ. ಈ ಬಗ್ಗೆ ಇಸ್ರೋ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.
Updated on: Mar 22, 2024 | 10:02 AM

ಇಸ್ರೋದಿಂದ ‘ಪುಷ್ಪಕ’ ಆರ್ಎಲ್ವಿ (ಮರು ಬಳಕೆ ಉಡಾವಣ ವಾಹನ) ಲ್ಯಾಂಡಿಂಗ್ ಪ್ರಯೋಗ ಯಶಸ್ವಿಯಾಗಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಬಳಿಯ ಎಟಿಆರ್ನಲ್ಲಿ (ಎರೊನೆಟಿಕಲ್ ಟೆಸ್ಟ್ ರೇಂಜ್) ಯಶಸ್ವಿ ಪ್ರಯೋಗ ಮಾಡಲಾಗಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಇಸ್ರೋ ಮಾಹಿತಿ ಹಂಚಿಕೊಂಡಿದೆ. ಕರ್ನಾಟಕದ ಚಿತ್ರದುರ್ಗದ ಏರೋನಾಟಿಕಲ್ ಟೆಸ್ಟ್ ರೇಂಜ್ನಲ್ಲಿ (ATR) ನಡೆಸಲಾದ ಸರಣಿಯ ಎರಡನೆಯ RLV LEX-02 ಲ್ಯಾಂಡಿಂಗ್ ಪ್ರಯೋಗ ಇಂದು ಬೆಳಿಗ್ಗೆ 7 ಗಂಟೆಗೆ ನಡೆಸಲಾಗಿದೆ. ಆ ಮೂಲಕ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನ (RLV) ತಂತ್ರಜ್ಞಾನದ ಕ್ಷೇತ್ರದಲ್ಲಿ ಇಸ್ರೋ ಪ್ರಮುಖ ಮೈಲಿಗಲ್ಲನ್ನು ಸಾಧಿಸಿದೆ.

RLV-LEX-01 ಮಿಷನ್ ಕಳೆದ ವರ್ಷ ಪೂರ್ಣಗೊಂಡ ನಂತರ, RLV-LEX-02ನ ಲ್ಯಾಂಡಿಂಗ್ ಸಾಮರ್ಥ್ಯವನ್ನು ಪರಿಶೀಲಿಸಲಾಯಿತು. ಅದರಂತೆ ಯಶಸ್ವಿಯಾಗಿ ರನ್‌ವೇ ಮೇಲೆ ಇಳಿದಿದೆ. ಪುಷ್ಪಕ್ ಎಂಬ ವಾಹವನ್ನು ಭಾರತೀಯ ವಾಯುಪಡೆಯ ಚಿನೂಕ್ ಹೆಲಿಕಾಪ್ಟರ್ ಮೂಲಕ ಮೇಲಕ್ಕೆ ಕೊಂಡೊಯ್ಯಲಾಯಿತು. ಬಳಿಕ 4.5 ಕಿಮೀ ಎತ್ತರದಿಂದ ಅದನ್ನು ಲ್ಯಾಂಡಿಗ್ಗೆ ಬಿಡಲಾಯಿತು. ಇದು ರನ್‌ವೇಯಲ್ಲಿ ನಿಖರವಾಗಿ ಇಳಿಯಿತು ಮತ್ತು ಬ್ರೇಕ್ ಪ್ಯಾರಾಚೂಟ್, ಲ್ಯಾಂಡಿಂಗ್ ಗೇರ್ ಬ್ರೇಕ್‌ಗಳು ಮತ್ತು ನೋಸ್ ವೀಲ್ ಸ್ಟೀರಿಂಗ್ ಸಿಸ್ಟಮ್ ಅನ್ನು ಬಳಸಿಕೊಂಡು ನಿಲ್ಲಿಸಿತು.

ಈ ಎರಡನೇ ಮಿಷನ್‌ನೊಂದಿಗೆ, ನ್ಯಾವಿಗೇಷನ್, ಕಂಟ್ರೋಲ್ ಸಿಸ್ಟಮ್ಸ್, ಲ್ಯಾಂಡಿಂಗ್ ಗೇರ್ ಮತ್ತು ಡಿಸೆಲರೇಶನ್ ಸಿಸ್ಟಮ್‌ಗಳಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳನ್ನು ಇಸ್ರೋ ಮರು-ಮೌಲ್ಯಮಾಪನ ಮಾಡಿದೆ. ಇದು ಆಸ್ಪೇಸ್ ರಿಟರ್ನ್ ವಾಹನದ ಹೆಚ್ಚಿನ-ವೇಗದ ಸ್ವಾಯತ್ತ ಲ್ಯಾಂಡಿಂಗ್ ಅನ್ನು ನಿರ್ವಹಿಸಲು ಅವಶ್ಯಕವಾಗಿದೆ.

ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (VSSC) ಜೊತೆಗೆ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ ಸೆಂಟರ್ (LPSC) ಮತ್ತು ISRO ಇನರ್ಷಿಯಲ್ ಸಿಸ್ಟಮ್ಸ್ ಯುನಿಟ್ (llSU) ಮೂಲಕ ಈ ಕಾರ್ಯಾಚರಣೆಯನ್ನು ಸಾಧಿಸಲಾಗಿದೆ. IAF, ADE, ADRDE ಮತ್ತು CEMILAC ಸೇರಿದಂತೆ ವಿವಿಧ ಏಜೆನ್ಸಿಗಳ ಸಹಯೋಗವು ಈ ಕಾರ್ಯಾಚರಣೆಯ ಯಶಸ್ಸಿಗೆ ಕಾರಣವಾಗಿದೆ ಎಂದು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಹೇಳಿದರು.

ಈ ಯಶಸ್ಸಿನ ಮೂಲಕ, ಎಸ್‌ಆರ್‌ಒ ಟೆನಿನಲ್ ಹಂತದ ಕುಶಲತೆ, ಲ್ಯಾಂಡಿಂಗ್ ಮತ್ತು ಇಂಧನ ನಿರ್ವಹಣೆಯನ್ನು ಸಂಪೂರ್ಣ ಸ್ವಾಯತ್ತ ಕ್ರಮದಲ್ಲಿ ಕರಗತ ಮಾಡಿಕೊಳ್ಳಬಹುದು, ಇದು ಭವಿಷ್ಯದ ಕಕ್ಷೀಯ ಮರುಪ್ರವೇಶ ಕಾರ್ಯಾಚರಣೆಗಳ ಕಡೆಗೆ ನಿರ್ಣಾಯಕ ಹೆಜ್ಜೆಯಾಗಿದೆ ಎಂದು ಲ್ಯಾಂಡಿಂಗ್ ಎಕ್ಸ್‌ಪೆರಿಮೆನ್‌ನ ನಿರ್ದೇಶಕ ವಿಎಸ್‌ಎಸ್‌ಸಿ ಡಾ ಎಸ್ ಉನ್ನಿಕೃಷ್ಣನ್ ನಾಯರ್ ಹೇಳಿದರು.









