ಕಮಿಷನರ್ ವಾರ್ನ್ ಮಾಡಿದರೂ ಬುದ್ಧಿ ಕಲಿಯದ ಕೆಲ ಕಿಡಿಗೇಡಿಗಳು: ಬೆಂಗಳೂರಲ್ಲಿ ಮತ್ತೆ ಮರುಕಳಿಸಿದ ರೋಡ್ ರೇಜ್ ಪ್ರಕರಣ
ನಗರದ ಮುಖ್ಯ ರಸ್ತೆಗಳಲ್ಲೇ ಕಾರು ಅಡ್ಡ ಹಾಕುವುದು, ಹಿಂಬಾಲಿಸಿ ಹಲ್ಲೆ ಮಾಡುವುದು ಈ ಹಿಂದೆ ಸಾಕಷ್ಟು ಘಟನೆಗಳು ನಡೆದಿವೆ. ಬಳಿಕ ಪೊಲೀಸರು ಅಂತಹರಿಗೆ ಎಚ್ಚರಿಕೆ ಸಹ ನೀಡಿದ್ದರು. ಆದರೆ ಕಮಿಷನರ್ ವಾರ್ನ್ ಮಾಡಿದರೂ ಕೆಲ ಕಿಡಿಗೇಡಿಗಳು ಬುದ್ಧಿ ಕಲಿತಿಲ್ಲ. ಇದೀಗ ಬೆಂಗಳೂರಲ್ಲಿ ಮತ್ತೆ ರೋಡ್ ರೇಜ್ ಪ್ರಕರಣಗಳು ಮರುಕಳಿಸಿದೆ.
ಬೆಂಗಳೂರು, ಸೆಪ್ಟೆಂಬರ್ 30: ನಗರದ ಮುಖ್ಯ ರಸ್ತೆಗಳಲ್ಲೇ ಕಾರು ಅಡ್ಡ ಹಾಕುವುದು, ಹಿಂಬಾಲಿಸಿ ಹಲ್ಲೆ ಮಾಡುವುದು ಈ ಹಿಂದೆ ಸಾಕಷ್ಟು ಘಟನೆಗಳು ನಡೆದಿವೆ. ಬಳಿಕ ಪೊಲೀಸರು ಅಂತಹರಿಗೆ ಎಚ್ಚರಿಕೆ ಸಹ ನೀಡಿದ್ದರು. ಆದರೆ ಕಮಿಷನರ್ ವಾರ್ನ್ ಮಾಡಿದರೂ ಕೆಲ ಕಿಡಿಗೇಡಿಗಳು ಬುದ್ಧಿ ಕಲಿತಿಲ್ಲ. ಇದೀಗ ಬೆಂಗಳೂರಲ್ಲಿ ಮತ್ತೆ ರೋಡ್ ರೇಜ್ ಪ್ರಕರಣಗಳು (Road rage case) ಮರುಕಳಿಸಿದೆ. ಮಧ್ಯರಾತ್ರಿ ಕಾರ್ಗೆ ಬೈಕ್ ಅಡ್ಡ ತಂದು ನಿಲ್ಲಿಸಿ ದಾದಾಗಿರಿ ಆರೋಪ ಮಾಡಲಾಗಿದೆ. ಅಗರ ಕೆರೆಯಿಂದ ಕೋರಮಂಗಲದವರೆಗೂ ಕಾರನ್ನ ಅಡ್ಡಗಟ್ಟುತ್ತಾ ಬಂದಿದ್ದು, ಕೊನೆಗೆ ಇಳಿದು ಬಂದು ದಾದಾಗಿರಿ ಹಾಕಿರುವುದಾಗಿ ಆರೋಪ ಮಾಡಲಾಗಿದೆ. ಮಧ್ಯರಾತ್ರಿ ಈ ರೀತಿಯ ಘಟನೆಯನ್ನ ನಿರೀಕ್ಷಿಸಿರಲಿಲ್ಲ ಎಂದು ಬೆಂಗಳೂರು ಪೊಲೀಸರಿಗೆ ವಿಡಿಯೋ ಟ್ಯಾಗ್ ಮಾಡಿ ಟ್ವೀಟ್ ಮಾಡಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.