‘ಇಲ್ಲಿಗೆ ಬರಲು ನಂಗೆ ಧೈರ್ಯ ಸಾಕಾಗಲ್ಲ’: ಕಲಾವಿದರ ಭವನದಲ್ಲಿ ಅಂಬರೀಷ್ ನೆನೆದು ರಾಕ್ಲೈನ್ ಭಾವುಕ
‘ನಿರ್ಮುಕ್ತ’ ಸಿನಿಮಾದ ಆಡಿಯೋ ರಿಲೀಸ್ ಕಾರ್ಯಕ್ರಮ ಕಲಾವಿದರ ಸಂಘದ ಕಟ್ಟಡದಲ್ಲಿ ನಡೆಯಿತು. ವೇಳೆ ರಾಕ್ಲೈನ್ ವೆಂಕಟೇಶ್ ಮಾತನಾಡಿದರು.
ಕನ್ನಡ ಚಿತ್ರರಂಗಕ್ಕೆ ನಟ ಅಂಬರೀಷ್ (Ambareesh) ನೀಡಿದ ಕೊಡುಗೆ ದೊಡ್ಡದು. ಅದೇ ರೀತಿ ಕಲಾವಿದರ ಸಂಘದ ಕಟ್ಟಡ ನಿರ್ಮಾಣಕ್ಕಾಗಿ ಅವರು ಸಾಕಷ್ಟು ಶ್ರಮಿಸಿದ್ದರು. ಅದನ್ನು ಅವರ ಆಪ್ತ ಸ್ನೇಹಿತ ರಾಕ್ಲೈನ್ ವೆಂಕಟೇಶ್ (Rockline Venkatesh) ಅವರು ಮತ್ತೆ ಸ್ಮರಿಸಿದ್ದಾರೆ. ಇತ್ತೀಚೆಗೆ ಸಿನಿಮಾ ಕಾರ್ಯಕ್ರಮದ ಸಲುವಾಗಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಇರುವ ಕಲಾವಿದರ ಸಂಘದ (Kalavidara Sangha) ಕಟ್ಟಡಕ್ಕೆ ರಾಕ್ಲೈನ್ ವೆಂಕಟೇಶ್ ಬಂದಿದ್ದರು. ಆ ವೇಳೆ ವೇದಿಕೆಯಲ್ಲಿ ಅಂಬರೀಷ್ ಕುರಿತು ಮಾತನಾಡುತ್ತ ಅವರು ಭಾವುಕರಾದರು. ‘ಈ ರೀತಿ ಭವ್ಯವಾದ ಕಲಾವಿದರ ಭವನ ಬೇರೆಲ್ಲೂ ಇಲ್ಲ. ಇದನ್ನು ಅಂಬರೀಷ್ ನಮಗಾಗಿ ಕಟ್ಟಿಕೊಟ್ಟರು. ಈ ಕಟ್ಟಡದ ಒಂದೊಂದು ಇಟ್ಟಿಗೆಯಲ್ಲೂ ಅವರು ಇದ್ದಾರೆ. ಹಾಗಾಗಿ ಈ ವೇದಿಕೆಗೆ ಬರುವಾಗ ನನಗೆ ಧೈರ್ಯ ಸಾಕಾಗಲ್ಲ’ ಎಂದು ರಾಕ್ಲೈನ್ ವೆಂಕಟೇಶ್ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.