ಶ್ರೀರಂಗಪಟ್ಟಣದ ಆರಾಧನಾ ಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ತಾಯಿಯೊಂದಿಗೆ ತೆರಳುತ್ತಿದ್ದ ಬಾಲನಟ, ರಾಷ್ಟ್ರಪ್ರಶಸ್ತಿ ವಿಜೇತ ರೋಹಿತ್ ಪಾಂಡವಪುರಗೆ ಅಪಘಾತವಾಗಿದೆ. ನಿನ್ನೆ ಈ ಘಟನೆ ನಡೆದಿದ್ದು, ರೋಹಿತ್, ಅವರ ತಾಯಿ ಹಾಗೂ ಇಬ್ಬರು ಉಪನ್ಯಾಸಕರಿಗೆ ಗಂಭೀರ ಗಾಯಗಳಾಗಿವೆ. ರೋಹಿತ್ ಹಾಗೂ ಇತರ ಗಾಯಾಳುಗಳನ್ನು ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ರೋಹಿತ್ರ ದವಡೆ, ತಲೆ ಬುರುಡೆಗೆ ತೀವ್ರ ಪೆಟ್ಟಾಗಿದೆ. ಅಪಘಾತ ನಡೆದಿದ್ದು ಹೇಗೆ? ರೋಹಿತ್ ಆರೋಗ್ಯ ಈಗ ಹೇಗಿದೆ? ಇನ್ನಿತರೆ ಮಾಹಿತಿಗಳನ್ನು ರೋಹಿತ್ರ ಅಜ್ಜಿ ಟಿವಿ9 ಕನ್ನಡದ ಜೊತೆಗೆ ಹಂಚಿಕೊಂಡಿದ್ದಾರೆ. ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ