ಸ್ಕೂಟಿ​ ಡಿಕ್ಕಿಯೊಳಗೆ ಹಾವು ಪ್ರತ್ಯಕ್ಷ, ಬೆಚ್ಚಿಬಿದ್ದ ಚಾಲಕ, ಮುಂದೇನಾಯ್ತು..?

ಸ್ಕೂಟಿ​ ಡಿಕ್ಕಿಯೊಳಗೆ ಹಾವು ಪ್ರತ್ಯಕ್ಷ, ಬೆಚ್ಚಿಬಿದ್ದ ಚಾಲಕ, ಮುಂದೇನಾಯ್ತು..?

TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Nov 17, 2024 | 3:24 PM

ಆ್ಯಕ್ಟಿವಾ ಸ್ಕೂಟಿಯಲ್ಲಿ ಸೇರಿಕೊಂಡಿದ್ದ ಹಾವನ್ನು ಕೊನೆಗೂ ಹೊರ ತೆಗೆಯಲಾಗಿದೆ. ಸ್ಕೂಟಿ ಡಿಕ್ಕಿ ತೆಗೆದಾಗ ಏಕಾಏಕಿ ಹಾವು ಕಾಣಿಸಿಕೊಂಡಿದೆ.

ದಾವಣಗೆರೆ, (ನವೆಂಬರ್ 17): ಆ್ಯಕ್ಟಿವಾ ಸ್ಕೂಟಿಯಲ್ಲಿ ಸೇರಿಕೊಂಡಿದ್ದ ಹಾವನ್ನು ಕೊನೆಗೂ ಹೊರ ತೆಗೆಯಲಾಗಿದೆ. ಸ್ಕೂಟಿ ಡಿಕ್ಕಿಯನ್ನು ತೆಗೆದಾಗ ಹಾವು ಕಾಣಿಸಿಕೊಂಡಿದೆ. ಇದರಿಂದ ಗಾಬರಿಯಾದ ಚಾಲಕ ಕೂಡಲೇ ಸ್ನೇಕ್ ಬಸಣ್ಣ ಅವರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾನೆ. ಇನ್ನು ಈ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಸ್ನೇಕ್ ಬಸಣ್ಣ, ಸ್ಕೂಟಿಯೊಳಗೆ ಸೇರಿಕೊಂಡಿದ್ದ ಹಾವನ್ನು ಹೊರ ತೆಗೆದಿದ್ದಾರೆ. ಇದರಿಂದ ಚಾಲಕ ನಿಟ್ಟುಸಿರುಬಿಟ್ಟಿದ್ದಾನೆ. ದಾವಣಗೆರೆ ನಗರದ ಅಣ್ಣಾ ನಗರದಲ್ಲಿ ಈ ಘಟನೆ ನಡೆದಿದೆ. ಆದ್ರೆ, ಹಾವು ಅದು ಹೇಗೆ ಸ್ಕೂಟಿಯೊಳಗೆ ಹೋಗಿದೆ ಎನ್ನುವುದೇ ಚಾಲಕನಿಗೆ ತಿಳಿಯದಂತಾಗಿದೆ.