ಅರ್ಧ ಜನ ತಿಕ್ಕಲು, ಇನ್ನರ್ಧ ಜನ ಪುಕ್ಕಲು: ಕಾಂಟ್ರವರ್ಸಿ ಮೂಲಕವೇ ವೈಲ್ಡ್ ಕಾರ್ಡ್​ ಸ್ಪರ್ಧಿ ಎಂಟ್ರಿ

ಅರ್ಧ ಜನ ತಿಕ್ಕಲು, ಇನ್ನರ್ಧ ಜನ ಪುಕ್ಕಲು: ಕಾಂಟ್ರವರ್ಸಿ ಮೂಲಕವೇ ವೈಲ್ಡ್ ಕಾರ್ಡ್​ ಸ್ಪರ್ಧಿ ಎಂಟ್ರಿ

ಮದನ್​ ಕುಮಾರ್​
|

Updated on: Nov 17, 2024 | 4:06 PM

ಬಿಗ್ ಬಾಸ್​ ಮನೆಗೆ ಹೊಸ ವೈಲ್ಡ್​ ಕಾರ್ಡ್​ ಸ್ಪರ್ಧಿಗಳ ಎಂಟ್ರಿ ಆಗುತ್ತಿದೆ. ‘ಸೂಪರ್ ಸಂಡೇ ವಿತ್ ಬಾದ್​ಷಾ ಸುದೀಪ’ ಸಂಚಿಕೆಯಲ್ಲಿ ಹೊಸ ಸ್ಪರ್ಧಿಗಳ ಪರಿಚಯ ಮಾಡಿಕೊಡಲಾಗುತ್ತಿದೆ. ಅವರ ಮಾತುಗಳನ್ನು ಕೇಳಿ, ‘ಇವರು ನಿಜವಾದ ಬಿಗ್ ಬಾಸ್ ಸ್ಪರ್ಧಿ’ ಎಂದು ಸುದೀಪ್ ಅವರು ಹೇಳಿದ್ದಾರೆ. ಅದರ ಪ್ರೋಮೋ ಇಲ್ಲಿದೆ.

ಬಿಗ್ ಬಾಸ್ ಮನೆಯ ಒಳಗೆ ಹೋದ ನಂತರ ಕಿರಿಕ್ ಮಾಡಿಕೊಂಡವರು ಅನೇಕರು ಇದ್ದಾರೆ. ಆದರೆ ಈ ಸ್ಪರ್ಧಿ ಮನೆಯೊಳಗೆ ಹೋಗುವುದಕ್ಕೂ ಮುನ್ನವೇ ಕಾಂಟ್ರವರ್ಸಿ ಡೈಲಾಗ್ ಹೇಳಿದ್ದಾರೆ. ‘ಒಳಗೆ ಇರುವವರಲ್ಲಿ ಅರ್ಧ ಜನ ತಿಕ್ಕಲು, ಇನ್ನರ್ಧ ಜನ ಪುಕ್ಕಲು’ ಎಂದು ಅವರು ಹೇಳಿದ್ದಾರೆ. ಈ ಮಾತು ಕೇಳಿ ದೊಡ್ಮನೆ ಸದಸ್ಯರಿಗೆ ಅಸಮಾಧಾನ ಆಗಿದೆ. ಅವರು ಯಾರು ಎಂಬುದು ಭಾನುವಾರದ (ನವೆಂಬರ್​ 17) ಸಂಚಿಕೆಯಲ್ಲಿ ಬಹಿರಂಗ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.