ಅನುಶ್ರೀ ಪತಿಯನ್ನು ಮೊದಲು ನೋಡಿದ್ದೆ, ಪರಿಚಯವಿರಲಿಲ್ಲ, ಬಹಳ ಒಳ್ಳೇ ಹುಡುಗ: ಶಿವರಾಜ್ ಕುಮಾರ್

Updated on: Aug 28, 2025 | 4:01 PM

ಸಂಸಾರದಲ್ಲಿ ಗಂಡ ಹೆಂಡತಿಯ ನಡುವೆ ಜಗಳ ಇರಬೇಕು ಆದರೆ ಅವು ಪ್ರೀತಿಯ ಜಗಳಗಳಾಗಿರಬೇಕು, ಚೆನ್ನಾಗಿ ನಗ್​ನಗ್ತಾ ಇರಿ ಅಂತ ಹಾರೈಸಿದ್ದೇನೆ ಎಂದು ಹೇಳಿದ ಶಿವರಾಜ್ ಕುಮಾರ್ ತಮ್ಮ ಹೊಸ ಪ್ರಾಜೆಕ್ಟ್ ಗಳ ಬಗ್ಗೆ ಮಾತಾಡಿದರು. ಜೈಲರ್ 2 ಸಿನಿಮಾದ ಶೂಟಿಂಗ್ ಸೆಪ್ಟಂಬರ್ ನಲ್ಲ್ಲಿ ಶುರುವಾಗಲಿದೆ, ಕೆಲದಿನಗಳ ಕಾಲ ಗಡ್ಡ ಬೆಳೆಸಿದ್ದೆ, ಅದರೆ ಸ್ವಲ್ಪ ಸ್ಮಾರ್ಟ್ ಆಗಿ ಕಾಣಲಿ ಅಂತ ಶೇವ್ ಮಾಡಿದ್ದೇನೆ ಎಂದು ಶಿವರಾಜ್ ಕುಮಾರ್ ನಗುತ್ತಾ ಹೇಳಿದರು.

ಬೆಂಗಳೂರು, ಆಗಸ್ಟ್ 28: ನಟ ಶಿವರಾಜ್ ಕುಮಾರ್ (Shivaraj Kumar) ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ, ಅದರಲ್ಲಿ ಎರಡು ಮಾತಿಲ್ಲ. ಅವರ ನಡಿಗೆ ಮತ್ತು ಮಾತಿನಲ್ಲಿ ಮೊದಲಿನ ಆತ್ಮವಿಶ್ವಾಸ ನಿಚ್ಚಳವಾಗಿ ಕಾಣಿಸುತ್ತಿದೆ. ನಟಿ ಮತ್ತು ಆ್ಯಂಕರ್ ಅನುಶ್ರೀ ಮದುವೆಗೆ ತಮ್ಮ ಪತ್ನಿಯೊಂದಿಗೆ ಭಾಗಿಯಾದ ಅವರು ಮಾಧ್ಯಮಗಳೊಂದಿಗೆ ಲವಲವಿಕೆಯಿಂದ ಮಾತಾಡಿದರು. ಸಹಜವಾಗೇ ಮಾತು ಅನುಶ್ರೀ ಮೇಲೆ ಕೇಂದ್ರೀಕೃತವಾಗಿತ್ತು ಮತ್ತು ವೃತ್ತಿಬದುಕಿನಲ್ಲಿ ಅವರು ಮಾಡಿದ ಸಾಧನೆಯನ್ನು ಶಿವರಾಜ್ ಕುಮಾರ್ ಮನಸಾರೆ ಕೊಂಡಾಡಿದರು. ಅವರಿಗೆ ನಾನೇ ಹುಡುಗನ ನೋಡ್ತೀನಿ ಅಂತ ಹೇಳಿದ್ದೆ, ಅದರೆ ಆಗಲಿಲ್ಲ, ರೋಷನ್ ಬಗ್ಗೆ ಹೆಚ್ಚು ಪರಿಚಯವಿಲ್ಲ, ಅದರೆ ಒಳ್ಳೆಯ ಹುಡುಗ ಎಂದ ಶಿವರಾಜ್ ಕುಮಾರ್, ಅನುಶ್ರೀ ಬಹಳ ಕಷ್ಟಪಟ್ಟು ಈ ಹಂತ ತಲುಪಿದ್ದಾರೆ, ಅವರ ಪಯಣ ಅದ್ಭುತವಾದದ್ದು, ಅದನ್ನು ಮಾಧ್ಯಮದವರು ಅಪ್ರಿಸಿಯೇಟ್ ಮಾಡಬೇಕು, ಖುಷಿಯಾಗಿರಿ ಅಂತ ಹಾರೈಸಿದ್ದೇನೆ ಎಂದರು.

ಇದನ್ನೂ ಓದಿ:   ಇಂದು ಆ್ಯಂಕರ್ ಅನುಶ್ರೀ ಮದುವೆ; ಮುಹೂರ್ತ, ವಿವಾಹ ವಿಶೇಷತೆಗಳ ಬಗ್ಗೆ ಇಲ್ಲಿದೆ ವಿವರ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ