Loading video

ಕಾಡುಗೋಡಿ ಠಾಣೆ ವ್ಯಾಪ್ತಿಯಲ್ಲಿ ರೌಡಿಶೀಟರ್ ಪುನೀತ್ ಹತ್ಯೆ, ಹೆಚ್ಚಿನ ವಿವರ ನೀಡದ ಪೊಲೀಸ್ ಇನ್ಸ್​ಪೆಕ್ಟರ್

Updated on: Jun 11, 2025 | 11:03 AM

ಪುನೀತ್ ಮತ್ತು ಶ್ರೀಕಾಂತ್ ರೌಡಿಶೀಟರ್​ಗಳಾ? ಅವರ ಅಪರಾಧಿಕ ಹಿನ್ನೆಲೆ ಏನು ಅನ್ನೋದು ತನಿಖೆಯ ನಂತರವೇ ಗೊತ್ತಾಗಬೇಕು, ಈಗಷ್ಟೇ ಪ್ರಕರಣ ದಾಖಲಾಗಿದೆ ಎಂದು ನಿನ್ನೆ ರಾತ್ರಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಪೊಲೀಸ್ ಇನ್ಸ್​ಪೆಕ್ಟರ್ ಹೇಳುತ್ತಾರೆ. ರಸ್ತೆಗಳಲ್ಲಿ ಸಿಸಿಟಿವಿ ಕೆಮೆರಾಗಳಿರುತ್ತವೆ ತಮ್ಮ ಕೃತ್ಯ ಕೆಮೆರಾದಲ್ಲಿ ಸೆರೆಯಾಗುತ್ತದೆ ಎಂದು ಗೊತ್ತಿದ್ದರೂ ರೌಡಿಗಳು ಕೊಲೆ ನಡೆಸೋದು ಕಾನೂನಿನ (ಪೊಲೀಸರು) ಬಗ್ಗೆ ಭಯ ಇಲ್ಲದಿರೋದು ಸ್ಪಷ್ಟವಾಗುತ್ತದೆ.

ಬೆಂಗಳೂರು, ಜೂನ್ 11: ಮಚ್ಚು ಹಿಡಿದವನು ಮಚ್ಚಿನಿಂದಲೇ ಅಂತ್ಯ ಕಾಣುತ್ತಾನೆ ಅನ್ನೋ ಮಾತು ಅಪರಾಧ ಜಗತ್ತಿನಲ್ಲಿ ಪ್ರಚಲಿತ. ಎಷ್ಟೋ ರೌಡಿಗಳು ಜೈಲಿಗೆ ಹೋಗಿ ಸಜೆ ಮುಗಿಸಿ ಹೊರಗಡೆ ಬಂದು ಸಜ್ಜನನಂತೆ ಬದುಕಲಾರಂಭಿಸಿದರೂ ಕರ್ಮ ಅವನನ್ನು ಹಿಂಬಾಲಿಸುತ್ತದೆ. ನಿನ್ನೆ ರಾತ್ರಿ ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪುನೀತ್ ಹೆಸರಿನ ರೌಡಿಯೊಬ್ಬನನ್ನು ಕೊಚ್ಚಿ ಹಾಕಲಾಗಿದೆ. ಅವನು ಸ್ಥಳದಲ್ಲೇ ಕೊನೆಯುಸಿರೆಳೆದರೆ ಅವನೊಂದಿಗಿದ್ದ ಸ್ನೇಹಿತ ಆಸ್ಪತ್ರೆಯೊಂದರಲ್ಲಿ ಗಂಭೀರ ಗಾಯಗಳೊಂದಿಗೆ ಜೀವನ್ಮರಣದ ಹೋರಾಟದಲ್ಲಿದ್ದಾನೆ. ಶ್ರೀಕಾಂತ್ ಮತ್ತವನ ತಂಡ ಪುನೀತ್ ಮತ್ತು ಅವನ ಸ್ನೇಹಿತನ ಮೇಲೆ ಮಚ್ಚುಗಳಿಂದ ಹಲ್ಲೆ ನಡೆಸಿದೆ ಎಂದು ಮಾಧ್ಯಮಗಳೊಂದಿಗೆ ಮಾತಾಡಿರುವ ಕಾಡುಗೋಡಿ ಪೊಲೀಸ್ ಇನ್ಸ್​ಪೆಕ್ಟರ್ ಹೇಳುತ್ತಾರೆ.

ಇದನ್ನೂ ಓದಿ: ಬಾಗಪ್ಪ ಹರಿಜನ ಕೊಲೆ ರಹಸ್ಯ ಬಯಲು: ಹತ್ಯೆಯಾದ ವಕೀಲ ರವಿಯ ಪತ್ನಿ, ಆಸ್ತಿ ಮೇಲೆ ಕಣ್ಣಾಕಿದ್ದ ನಟೋರಿಯಸ್​ ರೌಡಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ