ದರ್ಶನ್ ಮತ್ತು ವಿಲ್ಸನ್ ಗಾರ್ಡನ್ ನಾಗನ ನಡುವೆ ಸ್ನೇಹ ಕುದುರಿದ ಹಿಂದಿದೆ ಹಣದ ಡೀಲ್!

ಅರುಣ್​ ಕುಮಾರ್​ ಬೆಳ್ಳಿ

Updated on: Aug 30, 2024 | 11:10 AM

ತನ್ನ ಜೊತೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಹತ್ತು ಜನಕ್ಕೆ ಪ್ರತಿ ತಿಂಗಳು ತಲಾ ₹ 25,000 ಹಣ ಸಿಗುವ ವ್ಯವಸ್ಥೆಯನ್ನು ದರ್ಶನ್ ಅಣತಿ ಮೇರೆಗೆ ವಿಲ್ಸನ್ ಗಾರ್ಡನ್ ನಾಗ ಮಾಡಿದ್ದನಂತೆ. ಅಂದರೆ ದರ್ಶನ್ ತನ್ನ ಆಪ್ತರ ಮೂಲಕ ನಾಗನ ಆಪ್ತರಿಗೆ ಹಣ ಸಂದಾಯವಾಗುವಂತೆ ಫೋನಲ್ಲಿ ಹೇಳುತ್ತಿದ್ದರು!

ಬೆಂಗಳೂರು: ನಗರದ ಸೆಂಟ್ರಲ್ ಜೈಲಿನಲ್ಲಿ ಬೇರೆ ಬೇರೆ ಕೊಲೆ ಪ್ರಕರಣಗಳಲ್ಲಿ ಅರೋಪಿಗಳಾಗಿರುವ ನಟ ದರ್ಶನ್ ಮತ್ತು ಕುಖ್ಯಾತ ಹ್ಯಾಬಿಚುಯಲ್ ಅಫೆಂಡರ್ ವಿಲ್ಸನ್ ಗಾರ್ಡನ್ ನಾಗನ ನಡುವೆ ಬೆಳೆದ ದೋಸ್ತಿ ಹಿಂದೆ ದೊಡ್ಡ ಕಹಾನಿ ಇದೆ ಮತ್ತು ದೊಡ್ಡ ಮೊತ್ತದ ಹಣ ಕೂಡ ಕೈ ಬದಲಾಗಿದೆ. ದರ್ಶನ್ ಗೆ ಜೈಲಿನ ಒಳಗೆ ಎಲ್ಲ ಸವಲತ್ತು ಪಡೆಯುವ ಮತ್ತು ಕೊಲೆ ಆರೋಪದಿಂದ ಮುಕ್ತ ಮಾಡುವ ಡೀಲ್ ನಾಗನ ಜೊತೆ ನಡೆದಿತ್ತಂತೆ. ವಿವರವಾದ ವರದಿ ಇಲ್ಲಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಪತ್ನಿ ಭೇಟಿ ಬಳಿಕ ದರ್ಶನ್ ಓಡುತ್ತಿದ್ದುದು ವಿಲ್ಸನ್ ​ಗಾರ್ಡನ್​ ನಾಗನ ಬಳಿ; ಕಾರಣವೇನು?

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.