AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತ್ನಿ ಭೇಟಿ ಬಳಿಕ ದರ್ಶನ್ ಓಡುತ್ತಿದ್ದುದು ವಿಲ್ಸನ್ ​ಗಾರ್ಡನ್​ ನಾಗನ ಬಳಿ; ಕಾರಣವೇನು?

ಪರಪ್ಪನ ಅಗ್ರಹಾರ ಜೈಲಿನಲ್ಲಿ ಐಷಾರಾಮಿಯಾಗಿ ಬದುಕುತ್ತಿದ್ದ ನಟ ದರ್ಶನ್‌ ಹಾಗೂ ಗ್ಯಾಂಗ್‌ಗೆ ಸಂಕಷ್ಟ ಫಿಕ್ಸ್‌ ಆಗಿದೆ. ಹಿಂಡಲಗಾ ಜೈಲಿನ ʼಅಂದೇರಿʼ ಸೆಲ್‌ಗಳಿಗೆ ಈ ಹಿಂಡು ಶಿಫ್ಟ್‌ ಆಗುವುದು ಬಹುತೇಕ ಖಚಿತವಾಗಿದೆ. ಈ ಮಧ್ಯೆ ದರ್ಶನ್ ಕಳ್ಳಾಟ ಬಯಲಾಗಿದೆ.

ಪತ್ನಿ ಭೇಟಿ ಬಳಿಕ ದರ್ಶನ್ ಓಡುತ್ತಿದ್ದುದು ವಿಲ್ಸನ್ ​ಗಾರ್ಡನ್​ ನಾಗನ ಬಳಿ; ಕಾರಣವೇನು?
ಪತ್ನಿ ಭೇಟಿ ಬಳಿಕ ದರ್ಶನ್ ಓಡುತ್ತಿದ್ದುದು ವಿಲ್ಸನ್​ಗಾರ್ಡನ್​ ನಾಗನ ಬಳಿ; ಕಾರಣವೇನು?
ರಾಜೇಶ್ ದುಗ್ಗುಮನೆ
|

Updated on:Aug 27, 2024 | 8:21 AM

Share

ನಟ ದರ್ಶನ್ ಅವರು ತಪ್ಪಿನ ಮೇಲೆ ತಪ್ಪನ್ನು ಮಾಡುತ್ತಿದ್ದಾರೆ. ಅವರು ರೌಡಿಶೀಟರ್​ಗಳ ಜೊತೆ ಆರಾಮಾಗಿ ಕುಳಿತು ಸಿಗರೇಟ್ ಸೇದುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಸೆನ್ಸೇಷನ್ ಸೃಷ್ಟಿ ಮಾಡಿತ್ತು. ಇದನ್ನು ಬೆನ್ನು ಹತ್ತಿ ಹೋದಾಗ ಸಾಕಷ್ಟು ವಿಚಾರಗಳು ಬಯಲಿಗೆ ಬಂದಿವೆ. ಜೈಲಿಗೆ ಮದ್ಯ, ಬಿರಿಯಾನಿ ಎಲ್ಲವೂ ಬರುತ್ತದೆ ಅನ್ನೋ ವಿಚಾರ ಗೊತ್ತಾಗಿದೆ. ಈ ಮಧ್ಯೆ ದರ್ಶನ್ ಮಾಡುತ್ತಿದ್ದ ಕಳ್ಳಾಟಗಳು ಕೂಡ ಒಂದೊಂದೇ ಬಯಲಾಗುತ್ತಿದೆ.

ಪರಪ್ಪನ ಅಗ್ರಹಾರ ಜೈಲಿನ ಸೆಕ್ಯೂರಿಟಿ 3ರಲ್ಲಿ ನಟ ದರ್ಶನ್ ಅವರನ್ನು ಇಡಲಾಗಿದೆ. ವಿಸಿಟರ್​ಗಳು ಬಂದಾಗ ಮೂರನೇ ಬ್ಯಾರಕ್​ನಿಂದ ದರ್ಶನ್ ಹೊರ ಬರುತ್ತಿದ್ದರು. ಪತ್ನಿ ಹಾಗೂ ಇತರರನ್ನು ಭೇಟಿ ಆದ ಬಳಿಕ ದರ್ಶನ್ ನೇರವಾಗಿ ತೆರಳುತ್ತಿದ್ದುದು ವಿಲ್ಸನ್ ಗಾರ್ಡ್​ ನಾಗನ ಬಳಿ. ಈತನನ್ನು ಸೆಕ್ಯೂರಿಟಿ 1ರ ಬ್ಯಾರಾಕ್​ನಲ್ಲಿ ಇಡಲಾಗಿದೆ.

ದರ್ಶನ್ ಅವರು ಅಧಿಕಾರಿಗಳ ಕಣ್ಣು ತಪ್ಪಿಸಿ ನಾಗನ ಬ್ಯಾರಕ್ ಕಡೆ ಓಡುತ್ತಿದ್ದರು. ನಾಗನ ಜೊತೆ ಹರಟೆ ಹೊಡೆಯುವಾಗ ಅಧಿಕಾರಿಗಳು ಬಂದು ಇಲ್ಲಿ ಇರೋ ಹಾಗಿಲ್ಲ ಎಂದರೆ ಒಂದೆರಡು ನಿಮಿಷ ತಡೆಯಿರಿ ಎಂದು ನಾಗ ಹೇಳುತ್ತಿದ್ದನಂತೆ. ಜೈಲಿನ ಅಧಿಕಾರಿಗಳು ಹೇಳಿದರೂ ದರ್ಶನ್ ಹೋಗುತ್ತಿರಲಿಲ್ಲ. ದರ್ಶನ್​ನ ಕರೆಸಿಕೊಳ್ಳಲು ನಾಗನ ಕುಮ್ಮಕ್ಕು ಕೂಡ ಇದೆ ಎನ್ನಲಾಗಿದೆ.

ಇದನ್ನೂ ಓದಿ: 3 ಪ್ರಕರಣಗಳ ಪೈಕಿ ಎರಡರಲ್ಲಿ ದರ್ಶನ್​ A1; ಕುಖ್ಯಾತ ರೌಡಿಗಳ ಜತೆ ದಾಸನ ಕೇಸ್

ಇನ್ನು, ದರ್ಶನ್ ಮಾಡಿಕೊಂಡ ಎಡವಟ್ಟಿನಿಂದ ಅವರನ್ನು ಈಗ ಬೆಂಗಳೂರಿನ ಕೇಂದ್ರ ಕಾರಾಗೃಹದಿಂದ ಬೆಳಗಾವಿಯ ಹಿಂಡಲಗಾ ಜೈಲಿನ ‘ಅಂದೇರಿʼ ಸೆಲ್‌ಗಳಿಗೆ ಶಿಫ್ಟ್ ಮಾಡಲು ಚಿಂತನೆ ನಡೆದಿದೆ. ದರ್ಶನ್ ಅವರ ಸಂಪೂರ್ಣ ಗ್ಯಾಂಗ್ ಇಲ್ಲಿಗೆ ತೆರಳಲಿದೆ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:04 am, Tue, 27 August 24

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More