AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವಸ್ಥಾನದ ಬಾಗಿಲಲ್ಲಿ ನಿಲ್ಲಿಸಿ ಜಾತಿ ಪ್ರಮಾಣಪತ್ರ ಕೇಳಿದ್ರು: ನಟಿ ನಮಿತಾಗೆ ಅವಮಾನ

ಕನ್ನಡದ ಸಿನಿಮಾಗಳಲ್ಲೂ ನಟಿಸಿ ಫೇಮಸ್​ ಆಗಿರುವ ಬಹುಭಾಷಾ ನಟಿ ನಮಿತಾ ಅವರು ಮಧುರೈ ಮೀನಾಕ್ಷಿ ದೇವಸ್ಥಾನಕ್ಕೆ ತೆರಳಿದ್ದಾಗ ಈ ರೀತಿ ಆಗಿದೆ. ಪತಿಯ ಜೊತೆ ಬಂದ ನಮಿತಾಗೆ ಜಾತಿ ಪ್ರಮಾಣಪತ್ರ ಕೇಳಲಾಗಿದೆ. ನೀವು ಹಿಂದೂ ಎಂಬುದನ್ನು ಸಾಬೀತು ಮಾಡಿ ಎಂದು ದೇವಸ್ಥಾನದ ಸಿಬ್ಬಂದಿ ಕೇಳಿದ್ದಾರೆ. ಈ ಬಗ್ಗೆ ನಮಿತಾ-ವೀರೇಂದ್ರ ದಂಪತಿ ಬೇಸರ ವ್ಯಕ್ತಪಡಿಸಿದ್ದಾರೆ.

ದೇವಸ್ಥಾನದ ಬಾಗಿಲಲ್ಲಿ ನಿಲ್ಲಿಸಿ ಜಾತಿ ಪ್ರಮಾಣಪತ್ರ ಕೇಳಿದ್ರು: ನಟಿ ನಮಿತಾಗೆ ಅವಮಾನ
ನಮಿತಾ, ವೀರೇಂದ್ರ ಚೌಧರಿ
ಮದನ್​ ಕುಮಾರ್​
|

Updated on: Aug 26, 2024 | 10:25 PM

Share

ಮಧುರೈನ ಮೀನಾಕ್ಷಿ ದೇವಾಲಯದಲ್ಲಿ ತಮಗೆ ಎದುರಾದ ಅವಮಾನದ ಬಗ್ಗೆ ನಟಿ ನಮಿತಾ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತಿ ವೀರೇಂದ್ರ ಚೌಧರಿ ಜೊತೆ ದೇವಸ್ಥಾನಕ್ಕೆ ತೆರಳಿದ್ದ ನಮಿತಾ ಅವರನ್ನು ದೇವಸ್ಥಾನದ ಬಾಗಿಲಲ್ಲಿ ನಿಲ್ಲಿಸಿ ಜಾತಿ ಪ್ರಮಾಣಪತ್ರ ಕೇಳಲಾಗಿದೆ. ‘ನೀವು ಹಿಂದೂ ಎಂಬುದುನ್ನು ಸಾಬೀತು ಮಾಡಿ. ಜಾತಿ ಪ್ರಮಾಣಪತ್ರ ನೀಡಿ’ ಎಂದು ದೇವಸ್ಥಾನದ ಸಿಬ್ಬಂದಿ ಕೇಳಿದ್ದಾರೆ ಅಂತ ನಮಿತಾ ಮತ್ತು ವೀರೇಂದ್ರ ಹೇಳಿದ್ದಾರೆ. ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ದೇವರ ದರ್ಶನ ಪಡೆಯಲು ದೇವಸ್ಥಾನಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ.

ನಮಿತಾ ಮತ್ತು ಅವರ ಪತಿ ವೀರೇಂದ್ರ ಚೌಧರಿ ಅವರು ಮಾಸ್ಕ್​ ಧರಿಸಿ ದೇವಸ್ಥಾನಕ್ಕೆ ಹೋಗಿದ್ದರು. ತಾವು ದೇವಸ್ಥಾನಕ್ಕೆ ತೆರಳುವುದರ ಬಗ್ಗೆ ಒಂದು ದಿನ ಮುಂಚೆಯೇ ಸ್ಥಳೀಯ ಪೊಲೀಸರಿಗೆ ತಿಳಿಸಿದ್ದರು. ಜನರು ತಮ್ಮನ್ನು ಗುರುತಿಸಿದರೆ ಜನಜಂಗುಳಿ ಆಗಬಹುದು ಎಂಬ ಕಾರಣದಿಂದ ಅವರು ಮಾಸ್ಕ್​ ಧರಿಸಿದ್ದರು. ದಂಪತಿಯನ್ನು 20 ನಿಮಿಷಗಳ ಕಾಲ ಕಾಯಿಸಿ, ಜಾತಿ ಪ್ರಮಾಣಪತ್ರವನ್ನು ಹೇಳಿದ ಬಳಿಕವೇ ದೇವಸ್ಥಾನದ ಒಳಗೆ ಬಿಡಲಾಗಿದೆ. ‘ಈ ರೀತಿ ಬೇರೆ ಎಲ್ಲಿಯೂ ಆಗಿಲ್ಲ’ ಎಂದು ನಮಿತಾ ಹೇಳಿದ್ದಾರೆ.

‘ನಾವು ಹಿಂದೂಗಳು ಎಂಬುದನ್ನು ಸಾಬೀತು ಮಾಡಲು ಪ್ರಮಾಣಪತ್ರ ಕೇಳಿದರು. ಜಾತಿ ಪ್ರಮಾಣಪತ್ರವನ್ನೂ ತೋರಿಸಿ ಎಂದರು. ದೇಶದ ಬೇರೆ ಯಾವುದೇ ದೇವಸ್ಥಾನದಲ್ಲೂ ಇಂಥ ಅನುಮನ ನಮಗೆ ಆಗಿಲ್ಲ. ನಾನು ಹಿಂದೂ ಕುಟುಂಬದಲ್ಲಿ ಹುಟ್ಟಿದವಳು. ನಮ್ಮ ಮದುವೆ ನಡೆದಿದ್ದು ತಿರುಪತಿಯಲ್ಲಿ. ನನ್ನ ಮಕ್ಕಳಿಗೆ ಕೃಷ್ಣನ ಹೆಸರು ಇಟ್ಟಿದ್ದೇವೆ. ಇದನ್ನೆಲ್ಲ ತಿಳಿಸಿದ ನಂತರವೂ ನಮ್ಮ ಜೊತೆ ದೇವಸ್ಥಾನದ ಸಿಬ್ಬಂದಿ ವರಟಾಗಿ ನಡೆದುಕೊಂಡು. ಜಾತಿ ಪ್ರಮಾಣಪತ್ರ ಕೇಳಿದರು’ ಎಂದು ಮಾಧ್ಯಮಗಳ ಎದುರು ನಮಿತಾ ಆ ಘಟನೆಯನ್ನು ವಿವರಿಸಿದ್ದಾರೆ.

ಇದನ್ನೂ ಓದಿ: ‘ಜಾತಿಗಾಗಿ ಮರ್ಯಾದಾ ಹತ್ಯೆ ನಡೆದರೆ ಅದು ಹಿಂಸೆ ಅಲ್ಲ’: ನಟನ ಶಾಕಿಂಗ್​ ಹೇಳಿಕೆ ವೈರಲ್​

‘ನಾನು ಅನೇಕ ದೇವಾಲಯಗಳಿಗೆ ಹೋಗಿದ್ದೇನೆ. ದಕ್ಷಿಣ ಭಾರತದಲ್ಲಿ ತಿರುಪತಿಗೂ ಹೋಗಿದ್ದೇನೆ. ಈ ರೀತಿ ಯಾರೂ ಕೂಡ ಪ್ರಶ್ನೆ ಮಾಡಿಲ್ಲ. ಮೀನಾಕ್ಷಿ ಅಮ್ಮನ್ ದೇವಸ್ಥಾನದವರು ಮಾತ್ರ ಯಾಕೆ ಜಾತಿ ಮತ್ತು ಧರ್ಮದ ಪ್ರಮಾಣಪತ್ರ ಕೇಳಿದ್ದಾರೆ ಎಂಬುದು ನಮಗೆ ತಿಳಿದಿಲ್ಲ. ಈ ಒಟ್ಟಾರೆ ಪ್ರಕರಣದ ಬಗ್ಗೆ ಶೀಘ್ರದಲ್ಲೇ ದೇವಸ್ಥಾನದ ಆಡಳಿತ ಮಂಡಳಿ ಕಡೆಯಿಂದ ಅಧಿಕೃತ ಹೇಳಿಕೆ ಹೊರಬರುವ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ