3 ಪ್ರಕರಣಗಳ ಪೈಕಿ ಎರಡರಲ್ಲಿ ದರ್ಶನ್​ A1; ಕುಖ್ಯಾತ ರೌಡಿಗಳ ಜತೆ ದಾಸನ ಕೇಸ್

ನಟ ದರ್ಶನ್​ ಮೇಲಿನ ಕೇಸ್​ಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿರುವ ದರ್ಶನ್​, ನಟೋರಿಯಸ್​ ರೌಡಿಗಳ ಜೊತೆ ಸೇರಿಕೊಂಡು ಜೈಲಿನ ನಿಯಮಗಳ ಉಲ್ಲಂಘನೆ ಮಾಡಿದ್ದಕ್ಕೆ ಸಂಬಂಧಿಸಿದಂತೆ ಮೂರು ಎಫ್​ಐಆರ್​ ದಾಖಲಾಗಿವೆ. ಆ ಪೈಕಿ ಎರಡು ಕೇಸ್​ನಲ್ಲಿ ದರ್ಶನ್​ ಎ1 ಆಗಿದ್ದಾರೆ. ಇದರಿಂದ ದರ್ಶನ್​ಗೆ ಸಂಕಷ್ಟ ಹೆಚ್ಚಲಿದೆ.

3 ಪ್ರಕರಣಗಳ ಪೈಕಿ ಎರಡರಲ್ಲಿ ದರ್ಶನ್​ A1; ಕುಖ್ಯಾತ ರೌಡಿಗಳ ಜತೆ ದಾಸನ ಕೇಸ್
ರೌಡಿಶೀಟರ್​ ಜತೆ ದರ್ಶನ್​
Follow us
ರಾಮು, ಆನೇಕಲ್​
| Updated By: ಮದನ್​ ಕುಮಾರ್​

Updated on: Aug 26, 2024 | 9:36 PM

ಕೊಲೆ ಆರೋಪದಲ್ಲಿ ಜೈಲು ಸೇರಿದ್ದ ದರ್ಶನ್​ ಸುಧಾರಿಸಬಹುದು ಎಂದುಕೊಂಡರೆ, ಜೈಲಿನೊಳಗೆ ಆಗಿದ್ದೇ ಬೇರೆ. ಪರಪ್ಪನ ಅಗ್ರಹಾರಕ್ಕೆ ಹೋದ ಬಳಿಕ ದರ್ಶನ್​ಗೆ ಕುಖ್ಯಾತ ರೌಡಿಗಳ ಜೊತೆ ನಂಟು ಹೆಚ್ಚಾಗಿದೆ. ಮೂರು ಪ್ರತ್ಯೇಕ ಎಫ್​ಐಆರ್​ಗಳ ಪೈಕಿ ಎರಡರಲ್ಲಿ ದರ್ಶನ್​ ಎ1 ಆಗಿದ್ದಾರೆ. ಜೈಲಿನಲ್ಲಿ ಕಾನೂನು ಉಲ್ಲಂಘನೆ ಮಾಡಿದ್ದಕ್ಕಾಗಿ ಈ ಕೇಸ್​ಗಳು ದಾಖಲಾಗಿವೆ. ನಟೋರಿಯಸ್​ ರೌಡಿಶೀಟರ್​ಗಳಾದ ವಿಲ್ಸನ್​ ಗಾರ್ಡನ್​ ನಾಗ, ಕುಳ್ಳ ಸೀನಾ, ಧರ್ಮ, ಸತ್ಯ ಮುಂತಾದವರ ಜೊತೆ ದರ್ಶನ್​ ಕೇಸ್​ ಹಾಕಿಸಿಕೊಂಡಂತೆ ಆಗಿದೆ. ಇದರಿಂದ ದರ್ಶನ್​ಗೆ ಕಾನೂನಿನ ಸಂಕಷ್ಟ ಹೆಚ್ಚಾಗಿದೆ.

ವಿಚಾರಣಾಧೀನ ಖೈದಿ ಆಗಿರುವ ದರ್ಶನ್​ಗೆ ಜೈಲಿನಲ್ಲಿ ರಾಜಾತಿಥ್ಯ ನೀಡಿದ್ದಕ್ಕಾಗಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇಂದ್ರ ಕಾರಾಗೃಹಗಳ ಉಪನಿರ್ದೇಶಕರಾದ ಎಂ. ಸೋಮಶೇಖರ್​ ಅವರಿಂದ ದೂರು ದಾಖಲು ಮಾಡಲಾಗಿದೆ. ಒಟ್ಟು ಮೂರೂ ಕೇಸ್​ನಲ್ಲಿ ದರ್ಶನ್​ ಆರೋಪಿ ಆಗಿದ್ದು, ನಟನಿಗೆ ಕಾನೂನಿನ ಸಂಕಷ್ಟ ಇನ್ನಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: ಜೈಲಿನಲ್ಲಿರುವ ದರ್ಶನ್ ಜತೆ ವಿಡಿಯೋ ಕಾಲ್ ಮಾಡಿದ ರೌಡಿಶೀಟರ್ ಸತ್ಯ ಪೊಲೀಸ್ ವಶಕ್ಕೆ

‘ಕಾರಾಗೃಹ U/s. 42 ಆ್ಯಕ್ಟ್’ ಅಡಿಯಲ್ಲಿ ಒಂದು ಎಫ್​ಐಆರ್​ ದಾಖಲಾಗಿದ್ದು, ಅದರಲ್ಲಿ ದರ್ಶನ್ A1, ಮ್ಯಾನೇಜರ್​ ನಾಗರಾಜ್ A2, ವಿಲ್ಸನ್ ಗಾರ್ಡನ್ ನಾಗ A3 ಹಾಗೂ ಕುಳ್ಳ ಸೀನಾ A4 ಆಗಿದ್ದಾನೆ. ಇನ್ನೊಂದು ಎಫ್​ಐಆರ್​ನಲ್ಲಿ ದರ್ಶನ್ A1, ಧರ್ಮ A2 ಹಾಗೂ ಸತ್ಯ A3 ಆಗಿದ್ದಾನೆ. ‘U/S 42, 54 (1(A) Prisons Act & 238, 323 BNS’ ಅಡಿಯಲ್ಲಿ ಸುದರ್ಶನ್ ಕೆ.ಎಸ್. A1, ಮುಜೀಬ್ A2, ಪರಮೇಶ ನಾಯಕ್ ಲಮಾಣಿ A3, ಕೆ.ಬಿ. ರಾಯಮನೆ A4 ಆಗಿರುವುದು ತಿಳಿದುಬಂದಿದೆ.

ಇದನ್ನೂ ಓದಿ: ಜೈಲಿನಿಂದ ಒಂದೊಂದಾಗಿಯೇ ಹೊರಬರುತ್ತಿವೆ ದರ್ಶನ್​ ಅಕ್ರಮಗಳ ಫೋಟೋ

ರೇಣುಕಾಸ್ವಾಮಿ ಮರ್ಡರ್​ ಕೇಸ್​ನಲ್ಲಿ ಜೈಲು ಪಾಲಾದ ದರ್ಶನ್​ಗೆ ಜಾಮೀನು ಕೊಡಿಸಲು ಅವರ ಕುಟುಂಬದವರು ಪ್ರಯತ್ನಿಸುತ್ತಿದ್ದಾರೆ. ಆದರೆ ಈಗ ಜೈಲಿನ ಒಳಗೆ ದರ್ಶನ್​ ಅಕ್ರಮ ಎಸಗಿರುವುದು ಬೆಳಕಿಗೆ ಬಂದಿದೆ. ಮರ್ಡರ್​ ಕೇಸ್​ ಜೊತೆ ಹೊಸ ಹೊಸ ಕೇಸ್​ಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ದರ್ಶನ್​ಗೆ ಜಾಮೀನು ಸಿಗುವುದು ಇನ್ನಷ್ಟು ಕಷ್ಟ ಆಗಲಿದೆ. ಕೊಲೆ ಕೇಸ್​ ತನಿಖೆ ಹಂತದಲ್ಲಿ ದರ್ಶನ್​ ಎ2 ಆಗಿದ್ದಾರೆ. ಆದರೆ ಚಾರ್ಜ್​ಶೀಟ್​ ಸಲ್ಲಿಸುವಾಗ ಎ1 ಮಾಡುವ ಸಾಧ್ಯತೆ ಕೂಡ ದಟ್ಟವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್