‘ಭೈರತಿ ರಣಗಲ್’ ಬಿಡುಗಡೆಗೆ ದಿನಾಂಕ ಫಿಕ್ಸ್; ನವೆಂಬರ್ 15ಕ್ಕೆ ಅದ್ದೂರಿ ರಿಲೀಸ್
‘ಭೈರತಿ ರಣಗಲ್’ ಸಿನಿಮಾವನ್ನು ಗೀತಾ ಶಿವರಾಜ್ಕುಮಾರ್ ಅವರು ನಿರ್ಮಾಣ ಮಾಡಿದ್ದಾರೆ. ಶಿವರಾಜ್ಕುಮಾರ್ ಜೊತೆ ರುಕ್ಮಿಣಿ ವಸಂತ್, ಅವಿನಾಶ್, ರಾಹುಲ್ ಬೋಸ್, ದೇವರಾಜ್, ಛಾಯಾ ಸಿಂಗ್, ಮಧು ಗುರುಸ್ವಾಮಿ, ಬಾಬು ಹಿರಣ್ಣಯ್ಯ ಮುಂತಾದ ಕಲಾವಿದರು ನಟಿಸಿದ್ದಾರೆ. ನವೀನ್ ಕುಮಾರ್ ಅವರ ಛಾಯಾಗ್ರಹಣ, ರವಿ ಬಸ್ರೂರು ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ನರ್ತನ್ ಆ್ಯಕ್ಷನ್-ಕಟ್ ಹೇಳಿದ್ದಾರೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಶಿವರಾಜ್ಕುಮಾರ್ ನಟನೆಯ ‘ಭೈರತಿ ರಣಗಲ್’ ಸಿನಿಮಾ ಆ.15ರಂದು ತೆರೆಕಾಣಬೇಕಿತ್ತು. ಕಾರಣಾಂತರಗಳಿಂದ ಸಿನಿಮಾದ ರಿಲೀಸ್ ದಿನಾಂಕವನ್ನು ಮುಂದೂಡಲಾಗಿತ್ತು. ಈ ಸಿನಿಮಾ ಯಾವಾಗ ಬರಲಿದೆ ಎಂಬ ಕಾತರದ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಇತ್ತು. ಉತ್ತರ ತಿಳಿಯಲು ಫ್ಯಾನ್ಸ್ ಕಾದಿದ್ದರು. ಆ ಕಾಯುವಿಕೆಗೆ ಈಗ ಪೂರ್ಣವಿರಾಮ ಬಿದ್ದಿದೆ. ನವೆಂಬರ್ 15ರಂದು ಸಿನಿಮಾ ರಿಲೀಸ್ ಆಗಲಿದೆ ಎಂದು ‘ಭೈರತಿ ರಣಗಲ್’ ಚಿತ್ರತಂಡ ತಿಳಿಸಿದೆ. ಇಂದು (ಆಗಸ್ಟ್ 26) ಬೆಂಗಳೂರಿನಲ್ಲಿ ರಿಲೀಸ್ ಡೇಟ್ ಅನೌನ್ಸ್ ಮಾಡಲಾಗಿದೆ.
ಯಲಹಂಕದ ಗೆಲರಿಯಾ ಮಾಲ್‍ನಲ್ಲಿ ಇದೇ ಮೊದಲ ಬಾರಿಗೆ ಹೊಸದಾಗಿ ನಿರ್ಮಿಸಲಾಗಿದ್ದ ಅತೀ ದೊಡ್ಡ ಗ್ರ್ಯಾಫಿಟಿ ಆರ್ಟ್ ಅನಾವರಣಗೊಳಿಸುವ ಮೂಲಕ ‘ಭೈರತಿ ರಣಗಲ್’ ಸಿನಿಮಾದ ರಿಲೀಸ್ ಡೇಟ್ ಘೋಷಣೆ ಮಾಡಲಾಯ್ತು. ಈ ಸಿನಿಮಾವನ್ನು ಗೀತಾ ಶಿವರಾಜ್ಕುಮಾರ್ ಅವರು ನಿರ್ಮಿಸಿದ್ದಾರೆ. ನರ್ತನ್ ಅವರು ನಿರ್ದೇಶನ ಮಾಡಿದ್ದಾರೆ. ಬಿಡುಗಡೆ ದಿನಾಂಕ ಘೋಷಿಸುವಾಗ ನಿವೇದಿತಾ ಶಿವರಾಜ್ಕುಮಾರ್ ಕೂಡ ಹಾಜರಿದ್ದರು. ಈ ಇವೆಂಟ್ ಅನ್ನು ಅಪಾರ ಸಂಖ್ಯೆಯ ಅಭಿಮಾನಿಗಳು ಕಣ್ತುಂಬಿಕೊಂಡರು.
ರಣಗಲ್ ಅಧ್ಯಾಯ ಶುರು #BhairathiRanagal In Theatres November 15https://t.co/VKru41WXjq#Narthan @GeethaPictures @rukminitweets @aanandaaudio @RahulBose1 @actorshabeer @RaviBasrur #NaveenKumarI @Dhilipaction @The_BigLittle #GeethaPictures #BhairathiRanagalNov15 pic.twitter.com/xDoFBiMglb
— DrShivaRajkumar (@NimmaShivanna) August 26, 2024
ಸಾವಿರಾರು ಅಭಿಮಾನಿಗಳ ಎದುರಿನಲ್ಲಿ ರಿಲೀಸ್ ಡೇಟ್ ಘೋಷಣೆ ಮಾಡಿದ್ದಕ್ಕೆ ನಿರ್ದೇಶಕ ನರ್ತನ್ ಅವರಿಗೆ ಖುಷಿ ಆಗಿದೆ. ನ.15ರಂದು ಚಿತ್ರಮಂದಿರದಲ್ಲಿ ಸಿನಿಮಾ ನೋಡುವ ಮೂಲಕ ಜನರು ಪ್ರೋತ್ಸಾಹ ನೀಡಬೇಕು ಎಂದು ಅವರು ಪ್ರೇಕ್ಷಕರಲ್ಲಿ ವಿನಂತಿಸಿಕೊಂಡರು. ಈ ಮೊದಲು ‘ಮಫ್ತಿ’ ಸಿನಿಮಾದಲ್ಲಿ ನರ್ತನ್ ಅವರು ಕಸುಬುದಾರಿಕೆ ತೋರಿದ್ದರು. ಆ ಸಿನಿಮಾದ ಪ್ರೀಕ್ಚೆಲ್ ಆಗಿ ‘ಭೈರತಿ ರಣಗಲ್’ ಸಿನಿಮಾ ಸಿದ್ಧವಾಗಿದೆ.
ಇದನ್ನೂ ಓದಿ: ‘ಭೈರತಿ ರಣಗಲ್’ ಗುಣಗಾನ ಮಾಡುವ ಟೈಟಲ್ ಸಾಂಗ್ ರಿಲೀಸ್; ಶಿವಣ್ಣ ಫ್ಯಾನ್ಸ್ ಖುಷ್
ರಿಲೀಸ್ ಡೇಟ್ ಘೋಷಿಸಿದ ನಂತರ ಗೀತಾ ಶಿವರಾಜ್ಕುಮಾರ್ ಮಾತಾಡಿದರು. ‘ಇದು ನಮ್ಮ ಗೀತಾ ಪಿಕ್ಚರ್ಸ್ ಮೂಲಕ ನಿರ್ಮಾಣ ಆಗಿರುವ 2ನೇ ಸಿನಿಮಾ. ಮೊದಲ ಚಿತ್ರ ‘ವೇದ’ಗೆ ನೀವು ನೀಡಿದ ಪ್ರೋತ್ಸಾಹ, ಬೆಂಬಲಕ್ಕೆ ಧನ್ಯವಾದಗಳು. ಈಗ ಈ ಸಿನಿಮಾಗೂ ನಿಮ್ಮೆಲ್ಲರ ಪ್ರೋತ್ಸಾಹ ಇರಲಿ. ಬೆಳಗಾವಿಯಲ್ಲೂ ಈ ಸಿನಿಮಾ ಕುರಿತಾದ ಕಾರ್ಯಕ್ರಮ ಮಾಡುತ್ತೇವೆ’ ಎಂದು ಗೀತಾ ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.