ಸಂಭಾವನೆ ಪಡೆದು ಸಿನಿಮಾ ಪ್ರಚಾರಕ್ಕೆ ಬರ್ತಿಲ್ಲ, ನಟಿ ಶ್ರಾವ್ಯಾ ವಿರುದ್ಧ ಚಿತ್ರತಂಡ ದೂರು

ಸಂಭಾವನೆ ಪಡೆದು ಸಿನಿಮಾ ಪ್ರಚಾರಕ್ಕೆ ಬರ್ತಿಲ್ಲ, ನಟಿ ಶ್ರಾವ್ಯಾ ವಿರುದ್ಧ ಚಿತ್ರತಂಡ ದೂರು

ಮಂಜುನಾಥ ಸಿ.
|

Updated on: Nov 05, 2023 | 9:54 PM

Shravya: ರಾಯಲ್ ಮೆಕ್' ಹೆಸರಿನ ಹೊಸ ಸಿನಿಮಾ ನಿರ್ಮಾಣಗೊಂಡಿದ್ದು ಬಿಡುಗಡೆಗೆ ರೆಡಿಯಾಗಿದೆ. ಆದರೆ ಸಿನಿಮಾದ ನಾಯಕಿಯಾಗಿ ನಟಿಸಿರುವ ಓಂ ಪ್ರಕಾಶ್ ರಾವ್ ಪುತ್ರಿ ಶ್ರಾವ್ಯಾ ವಿರುದ್ಧ ಚಿತ್ರತಂಡ ಅಸಮಾಧಾನಗೊಂಡಿದ್ದು, ಚೇಂಬರ್​ಗೆ ದೂರು ನೀಡುವುದಾಗಿ ಹೇಳಿದೆ.

‘ರಾಯಲ್ ಮೆಕ್’ (Royal Mec) ಹೆಸರಿನ ಹೊಸ ಸಿನಿಮಾ ನಿರ್ಮಾಣಗೊಂಡಿದ್ದು ಬಿಡುಗಡೆಗೆ ರೆಡಿಯಾಗಿದೆ. ಸಿನಿಮಾದಲ್ಲಿ ಬಹುತೇಕ ಹೊಸಬರೇ ಕೆಲಸ ಮಾಡಿದ್ದಾರೆ. ಸಿನಿಮಾದಲ್ಲಿ ನಾಯಕಿಯಾಗಿ ಓಂ ಪ್ರಕಾಶ್ ರಾವ್ ಪುತ್ರಿ ಶ್ರಾವ್ಯಾ ನಟಿಸಿದ್ದಾರೆ. ಆದರೆ ಈಗ ಚಿತ್ರತಂಡದವರು ನಾಯಕಿ ಶ್ರಾವ್ಯಾ ವಿರುದ್ಧ ದೂರು ನೀಡಿದ್ದಾರೆ. ಸಿನಿಮಾ ಬಿಡುಗಡೆಗೆ ರೆಡಿಯಾಗಿದ್ದು, ಶ್ರಾವ್ಯಾ ಅವರು ಸಿನಿಮಾದ ಪರ ಪ್ರಚಾರಕ್ಕೆ ಬರುತ್ತಿಲ್ಲವಂತೆ. ‘ಹೊಸಬರ ಸಿನಿಮಾ ಅಂತ ತಾತ್ಸಾರ ಮಾಡ್ತಿದ್ದಾರೆ. ನಟಿ ಶ್ರಾವ್ಯಾ ಸಿನಿಮಾದ ಪ್ರಮೋಶನ್​ಗೆ ಬರುತ್ತಿಲ್ಲ ಹೀಗಾಗಿ ಹೊಸಬರ ತಂಡಕ್ಕೆ ತೊಂದರೆ ಆಗುತ್ತಿದೆ ಎಂದು ನಟ ಧನುಷ್ ಹಾಗೂ ನಿರ್ದೇಶಕ ನಾಗಭೂಷಣ್ ಗಂಭೀರ ಆರೋಪ ಆರೋಪ ಮಾಡಿದ್ದಾರೆ. ಸಿನಿಮಾ ತುಂಬಾ ತಡ ಆಗಿರೋದ್ರಿಂದ ನನಗೆ ಬರೋಕೆ ಆಗಿಲ್ಲ ಅಂತ ಹೇಳುತ್ತಿದ್ದಾರೆ. ನಾಳೆಯಿಂದ ಆದರೂ ಬಂದು ತಂಡಕ್ಕೆ ಬೆಂಬಲ ನೀಡಲಿ ಅಂತ ಕೇಳಿಕೊಳ್ಳುತ್ತೀವಿ ಅವರಿಗೆ ಅವರಿಗೆ ಕೊಟ್ಟಿರೋ ಸಂಭಾವನೆ ಕೊಟ್ಡಿದ್ದೀನಿ ಆದರೂ ಬರುತ್ತಿಲ್ಲ, ಹೀಗೆ ಮುಂದುವರೆದರೆ ಫಿಲಂ ಚೇಂಬರ್​ಗೆ ದೂರು ಕೊಡುತ್ತೀವಿ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ