AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯಸಭಾ ಚುನಾವಣೆ: ಚಿತ್ರನಟ ಜಗ್ಗೇಶ್ ರಾಜಕಾರಣಿಯ ದಿರಿಸಿನಲ್ಲಿ ವಿಧಾನ ಸಭೆಗೆ ಆಗಮಿಸಿದರು!

ರಾಜ್ಯಸಭಾ ಚುನಾವಣೆ: ಚಿತ್ರನಟ ಜಗ್ಗೇಶ್ ರಾಜಕಾರಣಿಯ ದಿರಿಸಿನಲ್ಲಿ ವಿಧಾನ ಸಭೆಗೆ ಆಗಮಿಸಿದರು!

TV9 Web
| Edited By: |

Updated on: Jun 10, 2022 | 10:31 AM

Share

ಅವರು ಲಿಫ್ಟ್ ಗಾಗಿ ಕಾಯುವಾಗ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಕೂಡ ಆಗಮಿಸುತ್ತಾರೆ. ಸಚಿವರು ಮೀಡಿಯಾನವರನ್ನು ಕಂಡು ಒಳಗಡೆ ಬರಲು ಬಿಟ್ಟಿದ್ದಾರಾ ಅಂತ ಕೇಳುತ್ತಾರೆ.

Bengaluru: ಕರ್ನಾಟಕದ 4 ಸ್ಥಾನಗಳು ಸೇರಿದಂತೆ ವಿವಿಧ ರಾಜ್ಯಗಳ ಒಟ್ಟು 57 ರಾಜ್ಯಸಭಾ ಸ್ಥಾನಗಳಿಗೆ ಶುಕ್ರವಾರ ಮತದಾನ ನಡೆಯುತ್ತಿದೆ. ರಾಜ್ಯದಲ್ಲಿ ಆಡಳಿತರೂಢ ಬಿಜೆಪಿ ಮೂವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಅವರಲ್ಲಿ ಚಿತ್ರನಟ ಜಗ್ಗೇಶ್ (Jaggesh) ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರ ಆಯ್ಕೆ ಖಚಿತವಾಗಿದೆ ಮತ್ತು ಮೂರನೇ ಅಭ್ಯರ್ಥಿ ಲೆಹರ್ ಸಿಂಗ್ (Lehar Singh) ಅವರನ್ನು ಗೆಲ್ಲಿಸಲು ಕಸರತ್ತು ನಡೆಸಬೇಕಿದೆ. ಶುಕ್ರವಾರ ಬೆಳಗ್ಗೆ ಜಗ್ಗೇಶ್ ವಿಧಾನ ಸೌಧದ ಬಾಗಿಲಿಗೆ ನಮಸ್ಕರಿಸಿ ಬರುತ್ತಿರುವುದನ್ನು ನೀವಿಲ್ಲಿ ನೋಡಬಹುದು. ಅವರು ಲಿಫ್ಟ್ ಗಾಗಿ ಕಾಯುವಾಗ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಕೂಡ ಆಗಮಿಸುತ್ತಾರೆ. ಸಚಿವರು ಮೀಡಿಯಾನವರನ್ನು ಕಂಡು ಒಳಗಡೆ ಬರಲು ಬಿಟ್ಟಿದ್ದಾರಾ ಅಂತ ಕೇಳುತ್ತಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.