ರಾಜ್ಯಸಭೆ ಚುನಾವಣೆ: ವಿಧಾನ ಸಭೆಗೆ ಹೊರಡುವ ಮೊದಲು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅನ್ಯಮನಸ್ಕನಾಗಿದ್ದರು!

ಅವರ ಪ್ರತಿಕ್ರಿಯೆಗಳನ್ನು ನೋಡುತ್ತಿದ್ದರೆ ಶುಕ್ರವಾರ ಬೆಳಗ್ಗೆ ವಿಧಾನ ಸಭೆಗೆ ಹೊರಡುವಾಗ ಅವರು ಗೊಂದಲದಲ್ಲಿದ್ದರು ಅನ್ನೋದು ಸ್ಪಷ್ಟವಾಗುತ್ತದೆ.

TV9kannada Web Team

| Edited By: Arun Belly

Jun 10, 2022 | 11:26 AM

ಬೆಂಗಳೂರು:  ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು (Siddaramaiah) ಶುಕ್ರವಾರ ಬೆಳಗ್ಗೆ ಮಾಧ್ಯಮದವರಿಗೆ ಅನ್ಯಮನಸ್ಕತೆಯಿಂದ ಪ್ರತಿಕ್ರಿಯೆ ನೀಡಿದ್ದು ಆಶ್ಚರ್ಯ ಹುಟ್ಟಿಸಿತು. ಮೊದಲು ಅವರು ತಾವು ಯಾವುದೇ ಕಾಂಗ್ರೆಸ್ ಶಾಸಕನಿಗೆ ಪತ್ರ ಬರೆದಿಲ್ಲ ಎನ್ನುತ್ತಾರೆ. ಆಮೇಲೆ ಪತ್ರಕರ್ತರು, ಕಾಂಗ್ರೆಸ್ ಶಾಸಕರು ಕ್ರಾಸ್ ವೋಟಿಂಗ್ (crossvoting) ಮಾಡಿ ಬಿಜೆಪಿ ಗೆಲ್ಲಿಸುತ್ತಾರೆಂದು ಹೇಳಲಾಗುತ್ತಿದೆ ಎಂದು ಕೇಳಿದ ಪ್ರಶ್ನೆಗೆ ಯಾರು ಕ್ರಾಸ್ ಮಾಡುತ್ತಾರಂತೆ? ನಾನೂ ಹೇಳ್ತೀನಿ ಬಿಜೆಪಿ ಶಾಸಕರು ಕಾಂಗ್ರೆಸ್ ಅಭ್ಯರ್ಥಿಗೆ ಅಡ್ಡಮತದಾನ ಮಾಡಲಿದ್ದಾರೆ ಅಂತ ಹೇಳುತ್ತಾರೆ. ಪತ್ರಕರ್ತರು ಮುಂದುವರಿದು, ಕಾಂಗ್ರೆಸ್ ಸಹಕಾರದಿಂದಲೇ ಬಿಜೆಪಿ ಮೂರನೇ ಅಭ್ಯರ್ಥಿ ಗೆಲ್ಲುತ್ತಾರೆ ಅಂತ ಕೆ ಎಸ್ ಈಶ್ವರಪ್ಪ (KS Eshwarappa) ಹೇಳಿದ್ದಾರೆ ಅಂತ ಹೇಳಿದಾಗ ಈಶ್ವರಪ್ಪ ಹೇಳಿದಕ್ಕೆಲ್ಲ ನಾನು ರಿಯಾಕ್ಟ್ ಮಾಡಲ್ಲ ಅನ್ನುತ್ತಾರೆ. ಅವರ ಈ ಪ್ರತಿಕ್ರಿಯೆಗಳನ್ನು ನೋಡುತ್ತಿದ್ದರೆ ಶುಕ್ರವಾರ ಬೆಳಗ್ಗೆ ವಿಧಾನ ಸಭೆಗೆ ಹೊರಡುವಾಗ ಅವರು ಗೊಂದಲದಲ್ಲಿದ್ದರು ಅನ್ನೋದು ಸ್ಪಷ್ಟವಾಗುತ್ತದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Follow us on

Click on your DTH Provider to Add TV9 Kannada