ಅನುಮತಿ ನಿರಾಕರಣೆ ನಡುವೆ RSS ಪಥಸಂಚಲನ: ಸೇಡಂನಲ್ಲಿ ಹೈಡ್ರಾಮಾ; ಕಾರ್ಯಕರ್ತರು ವಶಕ್ಕೆ
ತಹಶೀಲ್ದಾರ್ ಅನುಮತಿ ನಿರಾಕಣೆ ನಡುವೆಯೂ ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದಲ್ಲಿ RSS ಪಥಸಂಚಲನ ನಡೆಸಲಾಗಿದೆ. ಆದೇಶಕ್ಕೆ ಸೆಡ್ಡು ಹೊಡೆದು ಪಥಸಂಚಲನದಲ್ಲಿ ಭಾಗಿಯಾದ ಕಾರ್ಯಕರ್ತರನ್ನು ಪೊಲೀಸರು ಪಟ್ಟಣದ ರೈಲ್ವೆ ನಿಲ್ದಾಣದ ಬಳಿ ವಶಕ್ಕೆ ಪಡೆದಿದ್ದಾರೆ. ಈ ವೇಳೆ ಸ್ಥಳದಲ್ಲಿ ಭಾರಿ ಹೈಡ್ರಾಮಾವೇ ನಡೆದಿದೆ.
ಕಲಬುರಗಿ, ಅಕ್ಟೋಬರ್ 19: ತಹಶೀಲ್ದಾರ್ ಅನುಮತಿ ನಿರಾಕಣೆ ನಡುವೆಯೂ ಪಥಸಂಚಲನ ನಡೆಸುತ್ತಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ನಡೆದಿದೆ. ತಹಶೀಲ್ದಾರ್ ಶ್ರೀಯಾಂಕಾ ಆದೇಶಕ್ಕೆ ಸೆಡ್ಡು ಹೊಡೆದು ಪಥಸಂಚಲನ ನಡೆಸಲಾಗಿದ್ದು, ಸೇಡಂ ಪಟ್ಟಣದ ರೈಲ್ವೆ ನಿಲ್ದಾಣದ ಬಳಿ RSS ಕಾರ್ಯಕರ್ತರನ್ನ ವಶಕ್ಕೆ ಪಡೆಯಲಾಗಿದೆ. ಇಂದು ಸಂಜೆ ಪಥಸಂಚಲನಕ್ಕೆ ಅನುಮತಿ ಕೋರಿ RSS ಮುಖಂಡರು ಸಲ್ಲಿಸಿದ್ದ ಮನವಿಯನ್ನ ಸೇಡಂ ತಹಶೀಲ್ದಾರ್ ತಿರಸ್ಕರಿಸಿದ್ದರು. ಹೀಗಿದ್ದರೂ ಪಥಸಂಚಲನ ನಡೆಸುವ ಯತ್ನ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಪ್ರತಿನಿಧಿಸುವ ಸೇಡಂ ಕ್ಷೇತ್ರದಲ್ಲಿ ನಡೆದಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos
ಹಳೇಬೀಡು ದೇಗುಲದಲ್ಲೂ ಭದ್ರತಾ ಲೋಪ, ಸಿಸಿಟಿವಿ ಕ್ಯಾಮರಾಗಳೂ ನಿಷ್ಕ್ರಿಯ!
ಸಂಚಾರ ಪೊಲೀಸರಿಂದ ವಿನೂತನ ಅಭಿಯಾನ: ಒಂದು ದಿನ ಸಂಚಾರ ಪೊಲೀಸ್ ಆಗುವ ಅವಕಾಶ
ಮತ್ತೊಂದು ಟಾಸ್ಕ್ ಸೋಲಿಸಿದ ಗಿಲ್ಲಿ: ಇಲ್ಲಿ ಸಮಸ್ಯೆ ಯಾರದ್ದು?
ದೆಹಲಿ ಬ್ಲಾಸ್ಟ್ನಲ್ಲಿ ರಾಜಕಾರಣದ ವಾಸನೆ ಬರ್ತಿದೆ: ಶಾಸಕ ಚನ್ನಬಸಪ್ಪ
