Rural sports for women: ಹಾಸನದ ಗ್ರಾಮೀಣ ಕ್ರೀಡಾಕೂಟದಲ್ಲಿ ಮಹಿಳೆಯರು ತಾವು ಪುರುಷರಿಗಿಂತ ಕಡಿಮೆಯಿಲ್ಲ ಅಂತ ಸಾಬೀತು ಮಾಡಿದರು!
ಕಪ್ಪು ಶರ್ಟ್ ಧರಿಸಿರುವ ಯುವತಿ ನೋಡಲು ನಿಶಕ್ತಳಂತ ಕಂಡರೂ ಬಲಿಶಾಲಿಯಾಗಿದ್ದಾಳೆ ಅನ್ನೋದು ಸುಳ್ಳಲ್ಲ.
ಹಾಸನ: ಹಾಸನದಲ್ಲಿ ಇಂದು ಗ್ರಾಮೀಣ ಮಹಿಳೆಯರಿಗಾಗಿ ಕ್ರೀಡಾಕೂಟವೊಂದನ್ನು (sports event) ಏರ್ಪಡಿಸಲಾಗಿತ್ತು. ಬೇರೆ ಬೇರೆ ಹಳ್ಳಿಗಳ ಗೃಹಿಣಿಯರು, ಶಾಲಾ ವಿದ್ಯಾರ್ಥಿನಿಯರು, ಕಾಲೇಜುಗಳಲ್ಲಿ ಓದುತ್ತಿರುವ ಯುವತಿಯರು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ (talent) ಹಾಗೂ ಕೌಶಲ್ಯವನ್ನು (skill) ಪ್ರದರ್ಶಿಸಿದರು. ಸಾಮಾನ್ಯವಾಗಿ ಪುರುಷರಿಗೆಂದು ಮೀಸಲಾಗಿರುವ ತೋಳಿನ ಕುಸ್ತಿಯಲ್ಲಿ (arm wrestling) ಯವತಿಯರು ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ಮೊದಲು ಸೆಣಸುವ ಯುವತಿಯರ ಪಂದ್ಯಗಳು ಬೇಗ ಮುಗಿದುಬಿಡುತ್ತವೆ. ಆದರೆ ಕೊನೆಯಲ್ಲಿ ಸೆಣಸುವ ಹಳದಿ ಹೂಡಿ ಶರ್ಟ್ ಧರಿಸಿರುವ ಯುವತಿ ಮತ್ತು ಕಪ್ಪು ಟಾಪ್ ಧರಿಸಿರುವ ಯುವತಿಯರು ಪೈಸಾ ವಸೂಲ್ ಪರ್ಫಾರ್ಮನ್ಸ್ ನೀಡುತ್ತಾರೆ, ಇಬ್ಬರೂ ಸೋಲಲೊಲ್ಲರು. ಕಪ್ಪು ಶರ್ಟ್ ಧರಿಸಿರುವ ಯುವತಿ ನೋಡಲು ನಿಶಕ್ತಳಂತ ಕಂಡರೂ ಬಲಿಶಾಲಿಯಾಗಿದ್ದಾಳೆ ಅನ್ನೋದು ಸುಳ್ಳಲ್ಲ. ಒಂದು ಹಂತದಲ್ಲಿ ಆಕೆ ಗೆದ್ದೇ ಬಿಟ್ಟಳು ಅನಿಸುತ್ತದೆ. ಆದರೆ ಅಕೆಯ ಎದುರಾಳಿ ಚೇತರಿಸಿಕೊಂಡು ಫೈಟ್ ನೀಡುತ್ತಾಳೆ! ಕೊನೆಗೆ ಅವರ ಬೌಟ್ ಟೈನಲ್ಲಿ ಮುಕ್ತಾಯಗೊಳ್ಳುತ್ತದೆ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ