AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

District in charge ministers: ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಿ ಆದೇಶ ಹೊರಡಿಸಿದ ಸಿದ್ದರಾಮಯ್ಯ ಸರ್ಕಾರ

District in charge ministers: ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಿ ಆದೇಶ ಹೊರಡಿಸಿದ ಸಿದ್ದರಾಮಯ್ಯ ಸರ್ಕಾರ

ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ| Edited By: |

Updated on:Jun 09, 2023 | 4:53 PM

Share

ತಕ್ಷಣದಿಂದಲೇ ನೇಮಕಾತಿಗಳು ಜಾರಿಗೆ ಬರುತ್ತವೆ ಎಂದು ಅದೇಶದಲ್ಲಿ ಸೂಚಿಸಲಾಗಿದೆ.

ಬೆಂಗಳೂರು: ಭಾರೀ ಕಾತುರತೆಯಿಂದ ನಿರೀಕ್ಷಿಸಲಾಗುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವರನ್ನು (district in charge minister) ನೇಮಕ ಮಾಡಿ ಆದೇಶ (order) ಹೊರಡಿಸಲಾಗಿದೆ. ತಕ್ಷಣದಿಂದಲೇ ನೇಮಕಾತಿಗಳು (appointments) ಜಾರಿಗೆ ಬರುತ್ತವೆ ಎಂದು ಅದೇಶದಲ್ಲಿ ಸೂಚಿಸಲಾಗಿದೆ. ಯಾರಿಗೆ ಯಾವ ಜಿಲ್ಲೆ ಎಂಬ ವಿವರ ಇಲ್ಲಿದೆ.

ಡಿ.ಕೆ.ಶಿವಕುಮಾರ್-ಬೆಂಗಳೂರು ನಗರ ಉಸ್ತುವಾರಿ ಸಚಿವ,

ಡಾ.ಜಿ.ಪರಮೇಶ್ವರ್-ತುಮಕೂರು ಜಿಲ್ಲೆ,

ಹೆಚ್.ಕೆ.ಪಾಟೀಲ್-ಗದಗ ಜಿಲ್ಲೆ,

ಕೆ ಹೆಚ್ ಮುನಿಯಪ್ಪ-ಬೆಂಗಳೂರು ಗ್ರಾಮಾಂತರ ಜಿಲ್ಲೆ,

ರಾಮಲಿಂಗಾರೆಡ್ಡಿ-ರಾಮನಗರ ಜಿಲ್ಲೆ,

ಕೆಜೆಜಾರ್ಜ್-ಚಿಕ್ಕಮಗಳೂರು ಜಿಲ್ಲೆ,

ಎಂಬಿ ಪಾಟೀಲ್-ವಿಜಯಪುರ ಜಿಲ್ಲೆ,

ದಿನೇಶ್ ಗುಂಡೂರಾವ್-ದಕ್ಷಿಣ ಕನ್ನಡ ಜಿಲ್ಲೆ,

ಡಾ ಹೆಚ್ ಸಿ ಮಹದೇವಪ್ಪ– ಮೈಸೂರು ಜಿಲ್ಲೆ,

ಸತೀಶ್ ಜಾರಕಿಹೊಳಿ-ಬೆಳಗಾವಿ ಜಿಲ್ಲೆ,

ಪ್ರಿಯಾಂಕ್ ಖರ್ಗೆ-ಕಲಬುರಗಿ ಜಿಲ್ಲೆ,

ಶಿವಾನಂದ ಪಾಟೀಲ-ಹಾವೇರಿ ಜಿಲ್ಲೆ,

ಬಿಜೆಡ್ ಜಮೀರ್ ಅಹ್ಮದ್ ಖಾನ್ ಖಾನ್-ವಿಜಯನಗರ ಜಿಲ್ಲೆ,

ಶರಣಬಸಪ್ಪ ದರ್ಶನಾಪುರ-ಯಾದಗಿರಿ ಜಿಲ್ಲೆ,

ಈಶ್ವರ ಖಂಡ್ರೆ-ಬೀದರ್ ಜಿಲ್ಲೆ,

ಎನ್ ಚಲುವರಾಯಸ್ವಾಮಿ-ಮಂಡ್ಯ ಜಿಲ್ಲೆ,

ಎಸ್ಎಸ್ ಮಲ್ಲಿಕಾರ್ಜುನ-ದಾವಣಗೆರೆ ಜಿಲ್ಲೆ,

ಸಂತೋಷ್ ಲಾಡ್-ಧಾರವಾಡ ಜಿಲ್ಲೆ,

ಡಾ ಶರಣ ಪ್ರಕಾಶ್ ಪಾಟೀಲ್-ರಾಯಚೂರು ಜಿಲ್ಲೆ,

ಆರ್ ಬಿ ತಿಮ್ಮಾಪುರ-ಬಾಗಲಕೋಟೆ ಜಿಲ್ಲೆ,

ಕೆ ವೆಂಕಟೇಶ್-ಚಾಮರಾಜನಗರ ಜಿಲ್ಲೆ,

ಶಿವರಾಜ ತಂಗಡಗಿ-ಕೊಪ್ಪಳ ಜಿಲ್ಲೆ, ಡಿ ಸುಧಾಕರ್-ಚಿತ್ರದುರ್ಗ ಜಿಲ್ಲೆ,

ಬಿ ನಾಗೇಂದ್ರ-ಬಳ್ಳಾರಿ ಜಿಲ್ಲೆ,

ಕೆಎನ್ ರಾಜಣ್ಣ-ಹಾಸನ ಜಿಲ್ಲೆ,

ಭೈರತಿ ಸುರೇಶ್-ಕೋಲಾರ ಜಿಲ್ಲೆ,

ಲಕ್ಷ್ಮೀ ಹೆಬ್ಬಾಳ್ಕರ್-ಉಡುಪಿ ಜಿಲ್ಲೆ,

ಮಂಕಾಳ್ ವೈದ್ಯ-ಉತ್ತರ ಕನ್ನಡ ಜಿಲ್ಲೆ,

ಮಧು ಬಂಗಾರಪ್ಪ-ಶಿವಮೊಗ್ಗ ಜಿಲ್ಲೆ,

ಡಾ ಎಂಸಿ ಸುಧಾಕರ್-ಚಿಕ್ಕಬಳ್ಳಾಪುರ ಜಿಲ್ಲೆ,

ಎನ್ ಎಸ್ ಬೋಸರಾಜು-ಕೊಡಗು ಜಿಲ್ಲಾ ಉಸ್ತುವಾರಿ ಸಚಿವರುಗಳನ್ನಾಗಿ ನೇಮಕ ಮಾಡಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jun 09, 2023 04:25 PM
Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.