ಪುಟಿನ್ ಯುದ್ಧವಿರಾಮ ಘೋಷಿಸುವ ಲಕ್ಷಣ ಕಾಣುತ್ತಿಲ್ಲ, ಉಕ್ರೇನಲ್ಲಿ 14 ಮಕ್ಕಳು ಸೇರಿದಂತೆ 352 ಜನ ಬಲಿ
ಪುಟಿನ್ ಅವರ ನಡೆಯನ್ನು ಅಂತರರಾಷ್ಟ್ರೀಯ ಸಮದಾಯ ಉಗ್ರವಾಗಿ ಖಂಡಿಸುತ್ತಿರುವುದು ನಿಜ ಆದರೆ, ಈಗ ರಷ್ಯನ್ನರೇ ಪುಟಿನ್ ಮಾಡಿದ್ದು ಘೋರ ಅಪರಾಧ ಎಂದು ಜರಿಯುತ್ತಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿದೆ. ವ್ಲಾದಿಮಿರ್ ಪುಟಿನ್ (Vladimir Putin) ಅವರು ಪಡೆಗಳು ಉಕ್ರೇನ್ ಮೇಲೆ ದಾಳಿ ಆರಂಭಿಸಿ ಸೋಮವಾರಕ್ಕೆ 5 ದಿನ. ಸುಮ್ಮನ ಹೆದರಿಸಿದಂತೆ ಮಾಡಿ ಒಂದೆರಡು ದಿನಗಳ ಬಳಿಕ ರಷ್ಯಾದ ಪಡೆಗಳು ವಾಪಸ್ಸು ಹೋಗುತ್ತವೆ ಎಂಬ ನಿರೀಕ್ಷೆ ಹುಸಿಹೋಗಿದೆ. ರಷ್ಯಾ ಯುದ್ಧವಿರಾಮ (ceasefire) ಘೋಷಿಸುವ ಲಕ್ಷಣಗಳು ಕಾಣುತ್ತಿಲ್ಲ. ಉಕ್ರೇನಿ ಆಂತರಿಕ ಸಚಿವಾಲಯ (internal ministry) ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ಇದುವರೆಗಿನ ದಾಳಿಯಲ್ಲಿ 14 ಮಕ್ಕಳೂ ಸೇರಿದಂತೆ ಒಟ್ಟು 352 ಉಕ್ರೇನಿಯನ್ ನಾಗರಿಕರು ಮೃತಪಟ್ಟಿದ್ದಾರೆ ಹಾಗೂ 116 ಮಕ್ಕಳೂ ಸೇರಿದಂತೆ 1,684 ಜನ ಗಾಯಗೊಂಡಿದ್ದಾರೆ, ಇವರಲ್ಲಿ ಗಂಭೀರ ಸ್ವರೂವಾಗಿ ಗಾಯಗೊಂಡವರು ಎಷ್ಟು ಜನ ಅಂತ ಸಚಿವಾಲಯ ಹೇಳಿಲ್ಲ. ಉಕ್ರೇನಿಯನ್ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ವರದಿಗಳ ಪ್ರಕಾರ ಗಾಯಗೊಂಡವರಲ್ಲಿ ಅನೇಕರು ಸಾವು ಬದುಕಿನೊಂದಿಗೆ ಹೋರಾಡುತ್ತಿದ್ದಾರೆ.
ಈ ವಿಡಿಯೋನಲ್ಲಿ ರಷ್ಯಾದ ಯುದ್ಧ ಟ್ಯಾಂಕರ್ಗಳು ಉಕ್ರೇನ್ ಗಡಿಯೊಳಗೆ ಹೋಗುತ್ತಿರುವುದು ಕಾಣಿಸುತ್ತದೆ. ಒಂದು ಕಡೆ ಟ್ಯಾಕರೊಂದು ಬಾಂಬ್ ದಾಳಿಯಲ್ಲಿ ನಜ್ಜಗುಜ್ಜಾಗಿರುವುದು ಕಾಣುತ್ತದೆ. ಹಾಗೆಯೇ ಇದೇ ಮಾರ್ಗದಲ್ಲಿ ಒಂದು ಬಂಕರ್ ಸಹ ನಿರ್ಮಿಸಲಾಗಿದೆ.
ಪುಟಿನ್ ಅವರ ನಡೆಯನ್ನು ಅಂತರರಾಷ್ಟ್ರೀಯ ಸಮದಾಯ ಉಗ್ರವಾಗಿ ಖಂಡಿಸುತ್ತಿರುವುದು ನಿಜ ಆದರೆ, ಈಗ ರಷ್ಯನ್ನರೇ ಪುಟಿನ್ ಮಾಡಿದ್ದು ಘೋರ ಅಪರಾಧ ಎಂದು ಜರಿಯುತ್ತಿದ್ದಾರೆ. ಯುದ್ಧ ನಿಲ್ಲಿಸಿ ರಷ್ಯನ್ ಪಡೆಗಳನ್ನು ವಾಪಸ್ಸು ಕರೆಸಿಕೊಳ್ಳಿ ಅಂತ ಅವರು ಪುಟಿನ್ ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ.
ಸಾವು-ನೋವುಗಳ ಸಂಖ್ಯೆ ಪ್ರತಿದಿನ ಹೆಚ್ಚುತ್ತಿದೆ. ಅಮಾಯಕ ನಾಗರಿಕರು ಮತ್ತು ಮಕ್ಕಳು ಯಾರದ್ದೋ ತೆವಲಿಗೆ ಪ್ರಾಣ ಕಳೆದುಕೊಳ್ಳುತ್ತಿರುವುದು ಅಕ್ಷಮ್ಯ. ಪುಟಿನ್ ಗೆ ಆದಷ್ಟು ಬೇಗ ಜ್ಞಾನೋದಯವಾಗಲಿ ಅಂತ ಬೇರೆದ ದೇಶಗಳೆಲ್ಲ ಹಾರೈಸುತ್ತಿವೆ.