ನಿಮಗೆ ನಾಚಿಕೆಯಾಗಬೇಕು… ಶ್ರೀಶಾಂತ್ ಪತ್ನಿಯ ಆಕ್ರೋಶ

Updated on: Aug 30, 2025 | 7:54 AM

Harbhajan Singh Slap S Sreesanth: ಈ ವಿಡಿಯೋವನ್ನು ಅಂದಿನ ಇಂಡಿಯನ್ ಪ್ರೀಮಿಯರ್ ಲೀಗ್​ನ ಅಧ್ಯಕ್ಷ ಲಲಿತ್ ಮೋದಿ ಹರಿಬಿಟ್ಟಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಆಟಗಾರ ಮೈಕೆಲ್ ಕ್ಲಾರ್ಕ್ ನಡೆಸಿಕೊಡುವ ಬಿಯಾಂಡ್23 ಕ್ರಿಕೆಟ್ ಪಾಡ್‌ಕಾಸ್ಟ್​​ನಲ್ಲಿ ಕಾಣಿಸಿಕೊಂಡ ಲಲಿತ್ ಮೋದಿ 17 ವರ್ಷಗಳ ಹಿಂದಿನ ಘಟನೆಯನ್ನು ವಿವರಿಸಿದ್ದಾರೆ. ಅಲ್ಲದೆ ಅಂದು ನಡೆದ ಘಟನೆಯ ಭದ್ರತಾ ಕ್ಯಾಮೆರಾ ಫೋಟೋಜ್ ಅನ್ನು ಬಿಯಾಂಡ್23 ಗೆ ನೀಡಿದ್ದಾರೆ.

ಅದು ಐಪಿಎಲ್ 2008… ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ (ಪಂಜಾಬ್ ಕಿಂಗ್ಸ್) ತಂಡಗಳುನ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕಿಂಗ್ಸ್ ಇಲೆವೆನ್ ಪಂಜಾಬ್ 182 ರನ್​ ಕಲೆಹಾಕಿತ್ತು. ಈ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 116 ರನ್​ಗಳಿಸಲಷ್ಟೇ ಶಕ್ತರಾಗಿದ್ದರು. ಅಂದು ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ಕಣಕ್ಕಿಳಿದಿದ್ದ ಹರ್ಭಜನ್ ಸಿಂಗ್​ಗೆ 66 ರನ್​​ಗಳ ಹೀನಾಯ ಸೋಲನ್ನು ಅರಗಿಸಿಕೊಳ್ಳಲಾಗಿರಲಿಲ್ಲ.

ಅಲ್ಲದೆ ಪಂದ್ಯ ಮುಗಿದ ಬಳಿಕ ಆಟಗಾರರು ಹಸ್ತಲಾಘವ ಮಾಡುತ್ತಿದ್ದ ವೇಳೆ ಸೋತ ಹತಾಶೆಯಲ್ಲಿದ್ದ ಹರ್ಭಜನ್ ಸಿಂಗ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆಟಗಾರ ಶ್ರೀಶಾಂತ್ ಕೆನ್ನೆಗೆ ಬಾರಿಸಿದ್ದರು. ಈ ಅಹಿತಕರ ಘಟನೆ ಕಳೆದ 18 ವರ್ಷಗಳಿಂದ ಸುದ್ದಿಯಾಗಿದ್ದವು. ಇದಾಗ್ಯೂ ಈ ಘಟನೆಯ ವಿಡಿಯೋ ಎಲ್ಲೂ ಹೊರಬಿದ್ದಿರಲಿಲ್ಲ.

ಆದರೆ ಇದೀಗ ಈ ವಿಡಿಯೋವನ್ನು ಅಂದಿನ ಇಂಡಿಯನ್ ಪ್ರೀಮಿಯರ್ ಲೀಗ್​ನ ಅಧ್ಯಕ್ಷ ಲಲಿತ್ ಮೋದಿ ಹರಿಬಿಟ್ಟಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಆಟಗಾರ ಮೈಕೆಲ್ ಕ್ಲಾರ್ಕ್ ನಡೆಸಿಕೊಡುವ ಬಿಯಾಂಡ್23 ಕ್ರಿಕೆಟ್ ಪಾಡ್‌ಕಾಸ್ಟ್​​ನಲ್ಲಿ ಕಾಣಿಸಿಕೊಂಡ ಲಲಿತ್ ಮೋದಿ 17 ವರ್ಷಗಳ ಹಿಂದಿನ ಘಟನೆಯನ್ನು ವಿವರಿಸಿದ್ದಾರೆ. ಅಲ್ಲದೆ ಅಂದು ನಡೆದ ಘಟನೆಯ ಭದ್ರತಾ ಕ್ಯಾಮೆರಾ ಫೋಟೋಜ್ ಅನ್ನು ಬಿಯಾಂಡ್23 ಗೆ ನೀಡಿದ್ದಾರೆ.

ಇದೀಗ 17 ವರ್ಷಗಳ ಹಿಂದಿನ ಕಪಾಳಮೋಕ್ಷದ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಶ್ರೀಶಾಂತ್ ಅವರ ಪತ್ನಿ ಭುವನೇಶ್ವರಿ ಸೋಷಿಯಲ್ ಮೀಡಿಯಾ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

ಲಲಿತ್ ಮೋದಿ ಮತ್ತು ಮೈಕೆಲ್ ಕ್ಲಾರ್ಕ್, ನಿಮಗೆ ನಾಚಿಕೆಯಾಗಬೇಕು. ನಿಮ್ಮ ಸ್ವಂತ ಅಗ್ಗದ ಪ್ರಚಾರ ಮತ್ತು ದೃಷ್ಟಿಕೋನಗಳಿಗಾಗಿ 2008 ರ ಘಟನೆಯನ್ನು ಎಳೆದು ತರುವ ನೀವು ಮನುಷ್ಯರೇ ಅಲ್ಲ. ಶ್ರೀಶಾಂತ್ ಮತ್ತು ಹರ್ಭಜನ್ ಸಿಂಗ್ ಇಬ್ಬರೂ ಬಹಳ ಹಿಂದೆಯೇ ಬದಲಾಗಿದ್ದಾರೆ. ಅವರು ಈಗ ಶಾಲೆಗೆ ಹೋಗುವ ಮಕ್ಕಳ ತಂದೆಯಾಗಿದ್ದಾರೆ. ನೀವು ಅವರಿಗೆ ಹಳೆಯ ಕಹಿ ಘಟನೆಯನ್ನು ನೆನಪಿಸಲು ಪ್ರಯತ್ನಿಸುತ್ತಿದ್ದೀರಿ. ಸಂಪೂರ್ಣವಾಗಿ ಅಸಹ್ಯಕರ, ಹೃದಯಹೀನ ಮತ್ತು ಅಮಾನವೀಯ ಎಂದು ಶ್ರೀಶಾಂತ್ ಅವರ ಪತ್ನಿ ಭುವನೇಶ್ವರಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.