‘ಅಂದು ರಾಜ್ಕುಮಾರ್ ಚಿತ್ರಕ್ಕೆ ಥಿಯೇಟರ್ ಸಿಗಲು ವಾಟಾಳ್ ಕಾರಣ’; ನೆನಪಿನ ಪುಟ ತೆರೆದ ಚಿನ್ನೇಗೌಡ
ಕಾವೇರಿ ಹೋರಾಟದ ನಡುವೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ವಾಟಾಳ್ ನಾಗರಾಜ್ ಅವರು ಭೇಟಿ ನೀಡಿದ್ದಾರೆ. ಅವರ ಬಗ್ಗೆ ಎಸ್.ಎ. ಚಿನ್ನೇಗೌಡ ಮಾತನಾಡಿದ್ದಾರೆ. ‘ವಾಟಾಳ್ ನಾಗರಾಜ್ ಕನ್ನಡದ ಕಟ್ಟಾಳು. ಅವರು ಇದ್ದಲ್ಲಿ ಹೋರಾಟಕ್ಕೆ ಜಯ ಇರುತ್ತದೆ’ ಎಂದು ಹೇಳುವ ಮೂಲಕ ಒಂದು ಹಳೇ ಘಟನೆಯನ್ನು ಅವರು ನೆನಪಿಸಿಕೊಂಡಿದ್ದಾರೆ.
ಕಾವೇರಿ ನೀರಿಗಾಗಿ (Cauvery Water) ನಡೆಯುತ್ತಿರುವ ಹೋರಾಟದಲ್ಲಿ ಕನ್ನಡಪರ ಸಂಘಟನೆಗಳ ಜೊತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ಸಾಥ್ ನೀಡಿದೆ. ವಾಟಾಳ್ ನಾಗರಾಜ್ (Vatal Nagaraj) ಅವರು ವಾಣಿಜ್ಯ ಮಂಡಳಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಅವರ ಕುರಿತು ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಎಸ್.ಎ. ಚಿನ್ನೇಗೌಡ ಅವರು ಮಾತನಾಡಿದ್ದಾರೆ. ‘ವಾಟಾಳ್ ನಾಗರಾಜ್ ಅವರು ಕನ್ನಡದ ಕಟ್ಟಾಳು. ಸಾರಾ ಗೋವಿಂದು ಕೂಡ ಸಾಮಾನ್ಯ ವ್ಯಕ್ತಿ ಅಲ್ಲ. ಅವರೆಲ್ಲರೂ ಇದ್ದಲ್ಲಿ ಹೋರಾಟಕ್ಕೆ ಜಯ ಇರುತ್ತದೆ. ರಾಜ್ಕುಮಾರ್ ನಟನೆಯ ‘ರಣಧೀರ ಕಂಠೀರವ’ ಸಿನಿಮಾಗೆ ಚಿತ್ರಮಂದಿರ ಸಿಕ್ಕಿರಲಿಲ್ಲ. ಆಗ ಕೆಜಿ ರಸ್ತೆ ಹಿಂದಿಮಯ ಆಗಿತ್ತು. ನಂತರ ವಾಟಾಳ್ ನಾಗರಾಜ್ ಅವರು ಬಂದು ‘ಹಿಮಾಲಯ’ ಟಾಕೀಸ್ನಲ್ಲಿ ‘ರಣಧೀರ ಕಂಠೀರವ’ ಚಿತ್ರದ ಪ್ರದರ್ಶನಕ್ಕೆ ಅವಕಾಶ ಕೊಡಿಸಿದ್ದರು’ ಎಂದು ಎಸ್.ಎ. ಚಿನ್ನೇಗೌಡ (SA Chinne Gowda) ಅವರು ನೆನಪಿನ ಪುಟ ತೆರೆದಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.