Video: ಯುವಕನ ಸಮಯ ಪ್ರಜ್ಞೆ: ಅದೃಷ್ಟವಶಾತ್ ಅಪಾಯದಿಂದ ಪಾರಾದ 6 ತಿಂಗಳ ಮಗು
Ramanagara News: ಯುವಕನ ಸಮಯ ಪ್ರಜ್ಞೆಯಿಂದ 6 ತಿಂಗಳ ಮಗುವಿನ ಪ್ರಾಣ ಉಳಿದಿರುವಂತಹ ಘಟನೆ ರಾಮನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ನಡೆದಿದೆ. ತಂದೆಯಿಂದ ಮಿಸ್ ಆಗಿ ಮಗು ಕೆಳಗೆ ಬೀಳುತ್ತಿದ್ದು, ಮಕ್ಕದಲ್ಲೆ ತೆರಳಿತ್ತಿದ್ದ ಯುವಕನಿಂದ ಮಗುವಿನ ರಕ್ಷಣೆ ಮಾಡಲಾಗಿದೆ. ಸಿಸಿಟಿವಿಯಲ್ಲಿ ಮಗುವಿನ ರಕ್ಷಣೆ ದೃಶ್ಯ ಸೆರೆ ಆಗಿದೆ.
ರಾಮನಗರ, ಸೆಪ್ಟೆಂಬರ್ 27: ಯುವಕನ ಸಮಯ ಪ್ರಜ್ಞೆಯಿಂದ 6 ತಿಂಗಳ ಮಗುವಿನ (baby) ಪ್ರಾಣ ಉಳಿದಿರುವಂತಹ ಘಟನೆ ರಾಮನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ನಡೆದಿದೆ. ಕಾರು ನಿಲ್ಲಿಸಿ ದಂಪತಿ ಕೆಳಗೆ ಇಳಿಯುತ್ತಿದ್ದಾರೆ. ಮೊದಲು ಮಗು ಎತ್ತಿಕೊಂಡು ಪತಿ ಕಾರಿನಿಂದ ಇಳಿದಿದ್ದು, ಈ ವೇಳೆ ಪತ್ನಿ ಇಳಿಯುವಾಗ ಹ್ಯಾಂಡ್ ಬ್ರೇಕ್ ಮೇಲೆ ಕೈ ಇಟ್ಟಿದ್ದಾರೆ. ಇದರಿಂದ ಕಾರು ಮುಂದಕ್ಕೆ ಚಲಿಸಿದೆ. ಇದನ್ನು ಗಮನಿಸಿದ ಪತಿ ಮತ್ತೆ ಕಾರು ಹತ್ತಲು ಯತ್ನಿಸಿದ್ದಾರೆ. ಈ ವೇಳೆ ಪತಿಯಿಂದ ಮಿಸ್ ಆಗಿ ಮಗು ಕೆಳಗೆ ಬೀಳುತ್ತಿದ್ದು, ಮಕ್ಕದಲ್ಲೆ ತೆರಳಿತ್ತಿದ್ದ ಯುವಕನಿಂದ ಮಗುವಿನ ರಕ್ಷಣೆ ಮಾಡಲಾಗಿದೆ. ಸಿಸಿಟಿವಿಯಲ್ಲಿ ಮಗುವಿನ ರಕ್ಷಣೆ ದೃಶ್ಯ ಸೆರೆ ಆಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Sep 27, 2023 08:13 PM
Latest Videos