IND vs SA 1st Test: ಮೊದಲ ಟೆಸ್ಟ್​ಗೆ ಕ್ಷಣಗಣನೆ: ಸೆಂಚುರಿಯನ್​ನಲ್ಲಿ ಟೀಮ್ ಇಂಡಿಯಾ ಭರ್ಜರಿ ಅಭ್ಯಾಸ

IND vs SA 1st Test: ಮೊದಲ ಟೆಸ್ಟ್​ಗೆ ಕ್ಷಣಗಣನೆ: ಸೆಂಚುರಿಯನ್​ನಲ್ಲಿ ಟೀಮ್ ಇಂಡಿಯಾ ಭರ್ಜರಿ ಅಭ್ಯಾಸ

Vinay Bhat
|

Updated on: Dec 26, 2023 | 11:20 AM

South Africa vs India 1st Test: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೊದಲ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಟೀಮ್ ಇಂಡಿಯಾ ಬ್ಯಾಟರ್‌ಗಳು ಆಫ್ರಿಕಾದ ಸವಾಲಿಗೆ ಸಜ್ಜಾಗುತ್ತಿದ್ದಾರೆ. ಸೆಂಚುರಿಯನ್‌ನಲ್ಲಿ ಭರ್ಜರಿ ಅಭ್ಯಾಸ ನಡೆಸುತ್ತಿದ್ದಾರೆ.

ರೋಹಿತ್ ಶರ್ಮಾ (Rohit Sharma) ನೇತೃತ್ವದ ಭಾರತವು ಡಿಸೆಂಬರ್ 26 ರಿಂದ ಜನವರಿ 7 ರವರೆಗೆ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೆಂಬಾ ಬವುಮಾ ಅವರ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಇಂದು ಮೊದಲ ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ಮಧ್ಯಾಹ್ನ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಭಾರತವು ಆಫ್ರಿಕಾದಲ್ಲಿ ಈವರೆಗೆ ಟೆಸ್ಟ್ ಸರಣಿಯನ್ನು ವಶಪಡಿಸಿಕೊಂಡಿಲ್ಲ. 2021/22 ರಲ್ಲಿ ಟೆಸ್ಟ್ ಸರಣಿಯನ್ನು ಗೆಲ್ಲುವ ಅವಕಾಶವನ್ನು ಭಾರತ ಕಳೆದುಕೊಂಡಿತು. ಗೆಲುವಿನೊಂದಿಗೆ ಸರಣಿಯನ್ನು ಪ್ರಾರಂಭಿಸಿ ನಂತರದ ಎರಡು ಪಂದ್ಯಗಳಲ್ಲಿ ಸೋತರು. ಇದೀಗ ಈ ಬಾರಿ ಇತಿಹಾಸ ಸೃಷ್ಟಿಸಬೇಕೆಂದು ಕಠಿಣ ಅಭ್ಯಾಸದಲ್ಲಿ ಟೀಮ್ ಇಂಡಿಯಾ ಆಟಗಾರರು ನಿರತರಾಗಿದ್ದಾರೆ. ನಾಯಕ ರೋಹಿತ್ ಕೂಡ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ