ಶಬರಿಮಲೆ ದೇಗುಲದ ಬಾಗಿಲು ಇಂದು ಓಪನ್; ಅಕ್ಟೋಬರ್ 22ರವರೆಗೆ ಭಕ್ತರ ದರ್ಶನಕ್ಕೆ ಅವಕಾಶ

Updated on: Oct 17, 2025 | 6:04 PM

ತುಳಮಾಸ ಪೂಜೆಗಳಿಗಾಗಿ ಕೇರಳದ ಶಬರಿಮಲೆ ದೇವಸ್ಥಾನ ಇಂದು ಸಂಜೆ 5 ಗಂಟೆಗೆ ತೆರೆಯಲಿದೆ. ದ್ವಾರಪಾಲಕ ಶಿಲ್ಪಗಳ ಚಿನ್ನದ ಲೇಪಿತ ಪದರಗಳನ್ನು ಸಂಜೆ 4 ಗಂಟೆಗೆ ಪುನಃಸ್ಥಾಪಿಸಲಾಗುತ್ತದೆ. ರಾಷ್ಟ್ರಪತಿಗಳ ಶಬರಿಮಲೆ ಭೇಟಿಗಾಗಿ ಗೂರ್ಖಾ ತುರ್ತು ವಾಹನಗಳ ಫ್ಲೀಟ್ ಅನ್ನು ಬಳಸಲು ಹೈಕೋರ್ಟ್ ಅನುಮತಿ ನೀಡಿದೆ.

ಶಬರಿಮಲೆ, ಅಕ್ಟೋಬರ್ 17: ತುಳಮಾಸ ಪೂಜೆಗಳಿಗಾಗಿ ಶಬರಿಮಲೆ (Sabarimala) ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಾಗಿಲು ಇಂದು ತೆರೆದಿದೆ. ತುಳಮಾಸ ಪೂಜೆ ಆರಂಭವಾಗುತ್ತಿದ್ದಂತೆ ಭಕ್ತರು ಪ್ರಾರ್ಥನೆ ಸಲ್ಲಿಸಲು ಪಟಣಾಂತಿಟ್ಟದಲ್ಲಿರುವ ಶಬರಿಮಲೆ ದೇವಾಲಯದ ಬಾಗಿಲುಗಳನ್ನು ತೆರೆಯಲಾಗಿದೆ. ಇಂದಿನಿಂದ ಅಕ್ಟೋಬರ್ 22ರವರೆಗೆ ಶಬರಿಮಲೆ ಬಾಗಿಲು ತೆರೆದಿರುತ್ತದೆ. ಮುಂದಿನ ವಾರ ಅಕ್ಟೋಬರ್ 22ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಶಬರಿಮಲೆಗೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ಧತೆಗಳು ಮತ್ತು ಭದ್ರತಾ ವ್ಯವಸ್ಥೆಗಳು ಭರದಿಂದ ಸಾಗಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ