ಡೆತ್ ನೋಟ್ ಸಚಿನ್ ಒಬ್ಬನೇ ಬರೆದಿಲ್ಲ, 3-4 ಜನರ ಫಿಂಗರ್ ಪ್ರಿಂಟ್ಸ್ ಪತ್ತೆಯಾಗಿವೆ: ಪ್ರಕಾಶ್ ಕಪನೂರ್

|

Updated on: Dec 30, 2024 | 2:12 PM

ಸಚಿನ್ ಹಣ ನೀಡಿದ್ದರ ಬಗ್ಗೆ ಎಲ್ಲ ದಾಖಲೆ ಮತ್ತು ಬ್ಯಾಂಕ್ ಸ್ಟೇಟ್ಮೆಂಟ್​ಗಳು ತಮ್ಮಲ್ಲಿವೆ ಎಂದು ಹೇಳುವ ಪ್ರಕಾಶ್ ತನ್ನ ಸಹೋದರ ಅವರಿಗೆ ಯಾವುದೇ ರೀತಿಯ ಕಿರುಕುಳ ನೀಡಿಲ್ಲ ಎನ್ನುತ್ತಾರೆ. ಕಳೆದ 2-3 ತಿಂಗಳಿಂದ ಹಣ ವಾಪಸ್ಸು ನೀಡುವಂತೆ ಅವರನ್ನು ಕೇಳಲಾಗುತ್ತಿತ್ತು, ಅದರೆ ಅವರು ಮಾತ್ರ ಮುಖ ತಪ್ಪಿಸಿಕೊಳ್ಳುತ್ತಿದ್ದರು ಮತ್ತು ತನ್ನ ಮೊಬೈಲ್ ಫೋನ್ ಸ್ವಿಚ್ಚಾಫ್ ಮಾಡಿದ್ದರು ಎಂದು ಪ್ರಕಾಶ್ ಹೇಳುತ್ತಾರೆ.

ಕಲಬುರಗಿ: ಭಾಲ್ಕಿಯ ಗುತ್ತಿಗೆದಾರ ಸಚಿನ್ ಪಾಂಚಾಳ್ ಬರೆದಿರುವ ಡೆತ್ ನೋಟ್ ಕುರಿತು ಅವರ ಸಾವಿಗೆ ಕಾರಣರಾಗಿದ್ದಾರೆ ಎನ್ನಲಾಗುತ್ತಿರುವ ರಾಜು ಕಪನೂರ್ ಸಹೋದರ ಪ್ರಕಾಶ್ ಕಪನೂರ್ ಅನುಮಾನ ವ್ಯಕ್ತಪಡಿಸಿದ್ದು ಅದನ್ನು ಒಬ್ಬನೇ ಬರೆದಿಲ್ಲ 3-4 ಜನರ ಫಿಂಗರ್ ಪ್ರಿಂಟ್ಸ್ ಅದರ ಮೇಲೆ ಪತ್ತೆಯಾಗಿವೆ ಎನ್ನುತ್ತಾರೆ. ನಮ್ಮ ಕಲಬುರಗಿ ವರದಿಗಾರನೊದಿಗೆ ಮಾತಾಡಿರುವ ಪ್ರಕಾಶ್, ಸಚಿನ್ ಗೆ ತನ್ನ ಸಹೋದರ ಯಾವುದೋ ಕಾಮಗಾರಿಯ ಗುತ್ತಿಗೆ ಪಡೆಯಲು ಮತ್ತು ಈಎಂಡಿ ಪಾವತಿಸಲು 80 ಲಕ್ಷ ರೂ. ನೀಡಿದ್ದರು, ಅದರೆ ಸಚಿನ್ ಇಎಂಡಿ ಸಹ ಕಟ್ಟದೆ ಮೋಸ ಮಾಡಿದ್ದ, ಹಣ ವಾಪಸ್ಸು ನೀಡುವಂತೆ ಕೇಳಿದಾಗ ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾನೆ ಎಂದು ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮೇಧಾವಿಯಂತೆ ವರ್ತಿಸುವ ಪ್ರಿಯಾಂಕ್ ಖರ್ಗೆ ತಾನೊಂದು ನ್ಯಾಯಾಲಯ ಅಂದುಕೊಂಡಂತಿದೆ: ವಿಜಯೇಂದ್ರ