Sai Kumar: ‘ಪೊಲೀಸ್ ಸ್ಟೋರಿ’ ಸಿನಿಮಾದ ದಿನಗಳನ್ನು ನೆನೆದು ಎಮೋಷನಲ್ ಆದ ಸಾಯಿ ಕುಮಾರ್
Sai Kumar | Thriller Manju: ‘ರಾಕ್ಷಸರು’ ಚಿತ್ರದ ಸುದ್ದಿಗೋಷ್ಠಿಯಲ್ಲಿ ಸಾಯಿ ಕುಮಾರ್ ಅವರು ನೆನಪಿನ ಪುಟ ತೆರೆದಿದ್ದಾರೆ. ‘ಪೊಲೀಸ್ ಸ್ಟೋರಿ’ ಬಗ್ಗೆ ಅವರು ಮಾತನಾಡಿದ್ದಾರೆ.
ನಟ ಸಾಯಿ ಕುಮಾರ್ (Sai Kumar) ಅವರು ಪೊಲೀಸ್ ಪಾತ್ರಗಳ ಮೂಲಕ ತಮ್ಮದೇ ಛಾಪು ಮೂಡಿಸಿದ್ದಾರೆ. ಅವರ ಖಡಕ್ ಡೈಲಾಗ್ಗಳನ್ನು ಕೇಳಿ ಮಾಸ್ ಸಿನಿಪ್ರಿಯರು ಫಿದಾ ಆಗಿದ್ದುಂಟು. ಸಾಯಿ ಕುಮಾರ್ ಅವರ ಬದುಕು ಬದಲಿಸಿದ ಚಿತ್ರ ‘ಪೊಲೀಸ್ ಸ್ಟೋರಿ’ (Police Story) ಎಂದರೆ ತಪ್ಪಾಗಲಾರದು. ಆ ಸಿನಿಮಾದ ದಿನಗಳನ್ನು ಅವರೀಗ ನೆನಪು ಮಾಡಿಕೊಂಡಿದ್ದಾರೆ. ಅಂದಿನ ಸಮಯ ಹೇಗಿತ್ತು? ತಮಗೆ ಆ ಚಿತ್ರ ಯಾಕೆ ಅಷ್ಟು ಮುಖ್ಯ ಎಂಬುದನ್ನು ವಿವರಿಸುತ್ತ ಅವರು ಭಾವುಕರಾದರು. ಈ ವೇಳೆ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಕೂಡ ಜೊತೆಗಿದ್ದರು. ‘ರಾಕ್ಷಸರು’ (Rakshasaru Movie) ಚಿತ್ರದ ಸುದ್ದಿಗೋಷ್ಠಿಯಲ್ಲಿ ಸಾಯಿ ಕುಮಾರ್ ಅವರು ನೆನಪಿನ ಪುಟ ತೆರೆದಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Dec 05, 2022 09:45 AM