ಜಮೀನಿನಲ್ಲಿದ್ದ ರೈತನ ಮೇಲೆ ಹುಲಿ ಅಟ್ಯಾಕ್, ಕೂದಲೆಳೆ ಅಂತರದಲ್ಲಿ ಪಾರು: ಇಲ್ಲಿದೆ ಭಯಾನಕ ವಿಡಿಯೋ
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಹಲವೆಡೆ ಚಿತರೆಗಳು ಕಾಣಿಸಿಕೊಳ್ಳುತ್ತಿದ್ದು ಜನ ಭಯಭೀತರಾಗಿದ್ದಾರೆ. ಇದೀಗ ಚಾಮರಾಜನಗರ ಜಿಲ್ಲೆಯಲ್ಲಿ ಮತ್ತೆ ಹುಲಿ ಹಾವಳಿ ಶುರುವಾಗಿದೆ.
ಚಾಮರಾಜನಗರ: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಹಲವೆಡೆ ಚಿತರೆಗಳು ಕಾಣಿಸಿಕೊಳ್ಳುತ್ತಿದ್ದು ಜನ ಭಯಭೀತರಾಗಿದ್ದಾರೆ. ಮೊನ್ನೇ ಅಷ್ಟೇ ಮಂಡ್ಯ ಜಿ್ಲ್ಲೆಯಲ್ಲಿ ಚಿರತೆ ಇಬ್ಬರನ್ನು ಬಲಿಪಡೆದುಕೊಂಡಿತ್ತು. ಇದೀಗ ಚಾಮರಾಜನಗರ ಜಿಲ್ಲೆಯಲ್ಲಿ ಮತ್ತೆ ಹುಲಿ ಹಾವಳಿ ಶುರುವಾಗಿದೆ.
ಹೌದು….ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದಲ್ಲಿ ಜಾನುವಾರುಗಳ ಮೇಲೆ ದಾಳಿ ಮಾಡಿದ್ದ ಹುಲಿ, ಇಂದು(ಡಿಸೆಂಬರ್ 04) ಬಂಡೀಪುರ ಕಾಡಂಚಿನ ಚೌಡಹಳ್ಳಿ ಗ್ರಾಮದ ಜಮೀನಿನಲ್ಲಿ ರೈತನ ಮೇಲೆ ಹುಲಿ ಎರಗಿದೆ. ಅದೃಷ್ಟವಶಾತ್ ರೈತ ನಾಗರಾಜ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
Latest Videos