Sai Kumar: ‘ಪೊಲೀಸ್​ ಸ್ಟೋರಿ’ ಸಿನಿಮಾದ ದಿನಗಳನ್ನು ನೆನೆದು ಎಮೋಷನಲ್​ ಆದ ಸಾಯಿ ಕುಮಾರ್​

Sai Kumar: ‘ಪೊಲೀಸ್​ ಸ್ಟೋರಿ’ ಸಿನಿಮಾದ ದಿನಗಳನ್ನು ನೆನೆದು ಎಮೋಷನಲ್​ ಆದ ಸಾಯಿ ಕುಮಾರ್​

TV9 Web
| Updated By: ಮದನ್​ ಕುಮಾರ್​

Updated on:Dec 05, 2022 | 9:45 AM

Sai Kumar | Thriller Manju: ‘ರಾಕ್ಷಸರು’ ಚಿತ್ರದ ಸುದ್ದಿಗೋಷ್ಠಿಯಲ್ಲಿ ಸಾಯಿ ಕುಮಾರ್​ ಅವರು ನೆನಪಿನ ಪುಟ ತೆರೆದಿದ್ದಾರೆ. ‘ಪೊಲೀಸ್​ ಸ್ಟೋರಿ’ ಬಗ್ಗೆ ಅವರು ಮಾತನಾಡಿದ್ದಾರೆ.

ನಟ ಸಾಯಿ ಕುಮಾರ್​ (Sai Kumar) ಅವರು ಪೊಲೀಸ್​ ಪಾತ್ರಗಳ ಮೂಲಕ ತಮ್ಮದೇ ಛಾಪು ಮೂಡಿಸಿದ್ದಾರೆ. ಅವರ ಖಡಕ್​ ಡೈಲಾಗ್​ಗಳನ್ನು ಕೇಳಿ ಮಾಸ್​ ಸಿನಿಪ್ರಿಯರು ಫಿದಾ ಆಗಿದ್ದುಂಟು. ಸಾಯಿ ಕುಮಾರ್​ ಅವರ ಬದುಕು ಬದಲಿಸಿದ ಚಿತ್ರ ‘ಪೊಲೀಸ್​ ಸ್ಟೋರಿ’ (Police Story) ಎಂದರೆ ತಪ್ಪಾಗಲಾರದು. ಆ ಸಿನಿಮಾದ ದಿನಗಳನ್ನು ಅವರೀಗ ನೆನಪು ಮಾಡಿಕೊಂಡಿದ್ದಾರೆ. ಅಂದಿನ ಸಮಯ ಹೇಗಿತ್ತು? ತಮಗೆ ಆ ಚಿತ್ರ ಯಾಕೆ ಅಷ್ಟು ಮುಖ್ಯ ಎಂಬುದನ್ನು ವಿವರಿಸುತ್ತ ಅವರು ಭಾವುಕರಾದರು. ಈ ವೇಳೆ ಸಾಹಸ ನಿರ್ದೇಶಕ ಥ್ರಿಲ್ಲರ್​ ಮಂಜು ಕೂಡ ಜೊತೆಗಿದ್ದರು. ‘ರಾಕ್ಷಸರು’ (Rakshasaru Movie) ಚಿತ್ರದ ಸುದ್ದಿಗೋಷ್ಠಿಯಲ್ಲಿ ಸಾಯಿ ಕುಮಾರ್​ ಅವರು ನೆನಪಿನ ಪುಟ ತೆರೆದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published on: Dec 05, 2022 09:45 AM