IND vs WI: ಶರವೇಗದಲ್ಲಿ ಬಂದ ಕ್ಯಾಚ್ ಸುದರ್ಶನ್ ಕೈಯೊಳಗೆ ಕುಳಿತಿದ್ದು ಹೇಗೆ ನೋಡಿ
Sai Sudharsan's Stunning Catch: ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್‌ನ 2ನೇ ದಿನ, ಟೀಂ ಇಂಡಿಯಾ 518 ರನ್ ಡಿಕ್ಲೇರ್ ಮಾಡಿತು. ಇದಕ್ಕೆ ಉತ್ತರವಾಗಿ, ವೆಸ್ಟ್ ಇಂಡೀಸ್ ಕಳಪೆ ಆರಂಭ ಪಡೆಯಿತು. ಸಾಯಿ ಸುದರ್ಶನ್ ಅವರ ಅದ್ಭುತ ಕ್ಯಾಚ್, ಗಾಯಗೊಂಡಿದ್ದರೂ ಸಹ, ಮೊದಲ ವಿಕೆಟ್ ಪತನಕ್ಕೆ ಕಾರಣವಾಯಿತು. ಜಾನ್ ಕ್ಯಾಂಪ್‌ಬೆಲ್‌ನನ್ನು ಔಟ್ ಮಾಡಿದ ಈ ವೈರಲ್ ಕ್ಯಾಚ್ ಮೈದಾನದಲ್ಲಿ ಸುದರ್ಶನ್ ಅವರ ಅಸಾಧಾರಣ ಪ್ರದರ್ಶನವನ್ನು ಎತ್ತಿ ತೋರಿಸುತ್ತದೆ.
ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಂದು, ಟೀಂ ಇಂಡಿಯಾ ತನ್ನ ಮೊದಲ ಇನ್ನಿಂಗ್ಸ್ ಅನ್ನು 5 ವಿಕೆಟ್‌ಗೆ 518 ರನ್‌ಗಳಿಗೆ ಡಿಕ್ಲೇರ್ ಮಾಡಿತು. ಇದಕ್ಕೆ ಪ್ರತಿಯಾಗಿ, ವೆಸ್ಟ್ ಇಂಡೀಸ್ ಕಳಪೆ ಆರಂಭ ಪಡೆದುಕೊಂಡಿದೆ. 21 ರನ್‌ಗಳಿಗೆ ವಿಂಡೀಸ್ನ ಮೊದಲ ವಿಕೆಟ್ ಪತನವಾಯಿತು. ಟೀಂ ಇಂಡಿಯಾಕ್ಕೆ ಈ ವಿಕೆಟ್ ಸಿಗುವಲ್ಲಿ ಸಾಯಿ ಸುದರ್ಶನ್ ಪಾತ್ರ ಪ್ರಮುಖವಾಗಿತ್ತು. ಗಾಯಗೊಂಡಿದ್ದರೂ, ಅವರು ಅದ್ಭುತ ಕ್ಯಾಚ್ ತೆಗೆದುಕೊಂಡು ಪ್ರವಾಸಿ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ನನ್ನು ಔಟ್ ಮಾಡಿದರು.
ಎರಡನೇ ಟೆಸ್ಟ್‌ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಸಾಯಿ ಸುದರ್ಶನ್, ಮೈದಾನದಲ್ಲಿಯೂ ಅಸಾಧಾರಣ ಪ್ರದರ್ಶನ ನೀಡಿದರು. ವೆಸ್ಟ್ ಇಂಡೀಸ್ ಆರಂಭಿಕ ಆಟಗಾರ ಜಾನ್ ಕ್ಯಾಂಪ್‌ಬೆಲ್ ನೀಡಿದ ಕ್ಯಾಚ್ ಅನ್ನು ಸುದರ್ಶನ್ ಅದ್ಭುತವಾಗಿ ಹಿಡಿದರು. ರವೀಂದ್ರ ಜಡೇಜಾ ಅವರ ಓವರ್‌ನ ಎರಡನೇ ಎಸೆತದಲ್ಲಿ ಜಾನ್ ಕ್ಯಾಂಪ್‌ಬೆಲ್ ಸ್ವೀಪ್ ಶಾಟ್ ಹೊಡೆದರು. ಶಾರ್ಟ್ ಲೆಗ್‌ನಲ್ಲಿ ನಿಂತಿದ್ದ ಸಾಯಿ ಸುದರ್ಶನ್ ಅವರ ಕೈಗೆ ಚೆಂಡು ನೇರವಾಗಿ ತಗುಲಿತು. ಕೂಡಲೇ ಎಚ್ಚೆತ್ತು ಕೊಂಡ ಸುದರ್ಶನ್ ಚೆಂಡನ್ನು ಕೆಳಕ್ಕೆ ಬೀಳಲು ಬಿಡಲಿಲ್ಲ. ಸುದರ್ಶನ್ ಹಿಡಿದ ಕ್ಯಾಚ್ಗೆ ಕ್ಯಾಂಪ್‌ಬೆಲ್ ಅವರೇ ಆಶ್ಚರ್ಯಚಕಿತರಾದರು. ಇದೀಗ ಸುದರ್ಶನ್ ಕ್ಯಾಚ್ ಹಿಡಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

