‘ಸಂತೋಷ್ ಅವಾರ್ಡ್ಸ್​’ನಲ್ಲಿ ಕನ್ನಡ ಸ್ಟಾರ್​ಗಳಿಗೆ ಅಪಮಾನ, ರಮೇಶ್ ಅರವಿಂದ್ ಹೇಳಿದ್ದು ಹೀಗೆ

‘ಸಂತೋಷ್ ಅವಾರ್ಡ್ಸ್​’ನಲ್ಲಿ ಕನ್ನಡ ಸ್ಟಾರ್​ಗಳಿಗೆ ಅಪಮಾನ, ರಮೇಶ್ ಅರವಿಂದ್ ಹೇಳಿದ್ದು ಹೀಗೆ

ಮಂಜುನಾಥ ಸಿ.
|

Updated on: Dec 03, 2023 | 10:46 PM

Santhosh Awards: ಗೋವಾದಲ್ಲಿ ನಡೆದ ‘ಸಂತೋಷ್ ಅವಾರ್ಡ್ಸ್’ ಕಾರ್ಯಕ್ರಮಕ್ಕೆ ಆಹ್ವಾನದ ಮೇರೆಗೆ ಹೋಗಿದ್ದ ಕನ್ನಡದ ಹಲವು ಸ್ಟಾರ್ ನಟ-ನಟಿಯರನ್ನು ಅಪಮಾನ ಮಾಡಲಾಗಿದೆ. ಈ ಬಗ್ಗೆ ಹಿರಿಯ ನಟ ರಮೇಶ್ ಅರವಿಂದ್ ಮಾತನಾಡಿದ್ದಾರೆ.

ಗೋವಾದಲ್ಲಿ ನಡೆದ ‘ಸಂತೋಷ್ ಅವಾರ್ಡ್ಸ್’ (Santhosh Awards) ಕಾರ್ಯಕ್ರಮಕ್ಕೆ ಆಹ್ವಾನದ ಮೇರೆಗೆ ಹೋಗಿದ್ದ ಕನ್ನಡದ ಹಲವು ಸ್ಟಾರ್ ನಟ-ನಟಿಯರನ್ನು ಅಪಮಾನ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಹಿರಿಯ ನಟ ರಮೇಶ್ ಅರವಿಂದ್, ನಿರ್ಮಾಪಕಿ ಶೈಲಜಾ ನಾಗ್, ನಟಿ ಸಪ್ತಮಿ ಗೌಡ ಸೇರಿದಂತೆ ಸುಮಾರು 35 ಮಂದಿ ಕನ್ನಡದ ನಟರು ಗೋವಾಕ್ಕೆ ಹೋಗಿದ್ದರು. ಅವರಿಗೆ ಸೂಕ್ತ ವ್ಯವಸ್ಥೆ ಮಾಡದೆ, ಸೂಕ್ತವಾಗಿ ಪ್ರಶಸ್ತಿ ನೀಡದೆ ವಾಪಸ್ ಕಳಿಸಿದ್ದಾರೆ. ಕನ್ನಡದ ನಟ-ನಟಿಯರು ಸಹ ಕಾರ್ಯಕ್ರಮವನ್ನು ಅರ್ಧಕ್ಕೆ ಮೊಟಕುಗೊಳಿಸಿ ಬೆಂಗಳೂರಿಗೆ ವಾಪಸ್ ಬಂದಿದ್ದಾರೆ. ‘ಸಂತೋಷ್ ಅವಾರ್ಡ್ಸ್’ನಲ್ಲಿ ಆದ ಸಮಸ್ಯೆ ಏನು ಎಂಬುದನ್ನು ಹಿರಿಯ ನಟ ರಮೇಶ್ ಅರವಿಂದ್ ವಿವರಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ