IND vs AUS 5th T20I: ಭಾರತದ ಗೆಲುವಿಗೆ ಕಾರಣವಾಗಿದ್ದು ಅರ್ಶ್ದೀಪ್ ಅವರ ಆ ಒಂದು ಎಸೆತ: ವಿಡಿಯೋ
Arshdeep Singh Last Over: ಬೆಂಗಳೂರಿನಲ್ಲಿ ನಡೆದ ಐದನೇ ಟಿ20 ಪಂದ್ಯದಲ್ಲಿ ಭಾರತ ನೀಡಿದ್ದ 161 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಆಸ್ಟ್ರೇಲಿಯಾಕ್ಕೆ ಕೊನೆಯ ಓವರ್ ಗೆಲ್ಲಲು 10 ರನ್ಗಳು ಬೇಕಾಗಿದ್ದವು. ಅರ್ಶ್ದೀಪ್ ಸಿಂಗ್ ಎಸೆದ ಈ 20ನೇ ಓವರ್ ಪಂದ್ಯದ ಟರ್ನಿಂಗ್ ಪಾಯಿಂಟ್ ಆಯಿತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ಐದನೇ ಟಿ20 ಪಂದ್ಯದಲ್ಲಿ ಭಾರತ ಅಮೋಘ ಜಯ ಸಾಧಿಸಿತು. ಕೊನೆಯ ಓವರ್ ವರೆಗೂ ತುದಿಗಾಲಿನಲ್ಲಿ ನಿಲ್ಲಿಸಿದ್ದ ಪಂದ್ಯದಲ್ಲಿ 6 ರನ್ಗಳ ಗೆಲುವು ಕಂಡಿತು. ಈ ಮೂಲಕ 4-1 ಅಂತರದಿಂದ ಸರಣಿ ಜಯಿಸಿದ ಸಾಧನೆ ಕೂಡ ಮಾಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 160 ರನ್ ಕಲೆಹಾಕಿತು. ಟಾರ್ಗೆಟ್ ಬೆನ್ನಟ್ಟಿದ ಆಸ್ಟ್ರೇಲಿಯಾಕ್ಕೆ ಕೊನೆಯ ಓವರ್ ಅರ್ಶ್ದೀಪ್ ಸಿಂಗ್ ಬೌಲಿಂಗ್ನಲ್ಲಿ ಗೆಲ್ಲಲು 10 ರನ್ಗಳು ಬೇಕಾಗಿದ್ದವು. ನಾಯಕ ಮ್ಯಾಥ್ಯೂ ವೇಡ್ ಕ್ರೀಸ್ನಲ್ಲಿದ್ದರು. ಮೊದಲ ಎರಡು ಎಸೆತ ಡಾಟ್ ಆಯಿತು. ಮೂರನೇ ಎಸೆತವನ್ನು ಸಿಕ್ಸರ್ಗೆ ಅಟ್ಟಲು ಹೋಗಿ ವೇಡ್ ಔಟಾದರು. ಇದು ಪಂದ್ಯದ ಟರ್ನಿಂಗ್ ಪಾಯಿಂಟ್ ಆಯಿತು. ನಂತರದ ಮೂರು ಎಸೆತಗಳಲ್ಲಿ ಬಂದಿದ್ದು ಕೇವಲ 3 ರನ್ ಮಾತ್ರ. ಇಲ್ಲಿದೆ ನೋಡಿ ಭಾರತದ ಗೆಲುವಿಗೆ ಕಾರಣವಾದ ವೇಡ್ ಔಟಾದ ವಿಡಿಯೋ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos