‘ವಿಷ್ಣುವರ್ಧನ್​ಗೆ ‘ಸಾಹಸ ಸಿಂಹ’ ಎಂಬ ಬಿರುದು ಸಿಕ್ಕಿದ್ದು ಬರೀ ಪಾತ್ರದ ಕಾರಣಕ್ಕಲ್ಲ’; ತೆರೆ ಹಿಂದಿನ ವಿಚಾರ ತೆರೆದಿಟ್ಟ ನಾಗತಿಹಳ್ಳಿ

| Updated By: ಮದನ್​ ಕುಮಾರ್​

Updated on: Sep 18, 2021 | 5:10 PM

ವಿಷ್ಣುವರ್ಧನ್​ ಅವರನ್ನು ‘ಸಾಹಸ ಸಿಂಹ’ ಎಂಬ ಬಿರುದಿನಿಂದ ಫ್ಯಾನ್ಸ್​ ಕರೆಯುತ್ತಾರೆ. ಹಾಗಾದರೆ ನಿಜಜೀವನದಲ್ಲಿ ವಿಷ್ಣು ಮಾಡಿದ ಸಾಹಸಗಳೇನು ಎಂಬುದನ್ನು ನಾಗತಿಹಳ್ಳಿ ಚಂದ್ರಶೇಖರ್​ ಅವರು ಈ ವಿಡಿಯೋದಲ್ಲಿ ವಿವರಿಸಿದ್ದಾರೆ.

ನಟ ಡಾ. ವಿಷ್ಣುವರ್ಧನ್​ ಅವರಿಗೆ ಇಂದು (ಸೆ.18) 71ನೇ ಜನ್ಮದಿನ. ಅವರನ್ನು ಹಲವು ರೀತಿಯಲ್ಲಿ ಸ್ಮರಿಸಿಕೊಳ್ಳಲಾಗುತ್ತಿದೆ. ಅಭಿಮಾನಿಗಳೆಲ್ಲರೂ ಅವರನ್ನು ಪ್ರೀತಿ, ಅಭಿಮಾನದಿಂದ ‘ಸಾಹಸ ಸಿಂಹ’ ಎಂದು ಕರೆಯುತ್ತಾರೆ. ಬರೀ ಪಾತ್ರಗಳ ಕಾರಣದಿಂದ ವಿಷ್ಣುವರ್ಧನ್​ಗೆ ಆ ಬಿರುದು ಬರಲಿಲ್ಲ ಎಂಬುದು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್​ ಅವರ ಅಭಿಪ್ರಾಯ. ಆ ಕುರಿತು ಅವರು ತಮ್ಮದೇ ಆದಂತಹ ವಿವರಣೆ ನೀಡಿದ್ದಾರೆ. ಜೀವನಲ್ಲಿ ಎದುರಾದ ಅನೇಕ ಕಷ್ಟಗಳನ್ನು ವಿಷ್ಣುವರ್ಧನ್​ ಅವರು ಸಿಂಹದಂತೆ ಎದುರಿಸಿದರು ಎಂದಿದ್ದಾರೆ ನಾಗತಿಹಳ್ಳಿ ಚಂದ್ರಶೇಖರ್​.

‘ಒಂದು ಹಂತದಲ್ಲಿ ವಿಷ್ಣುವರ್ಧನ್​ ಅವರಿಗೆ ಸಾಹಸ ಸಿಂಹ ಎಂಬ ಬಿರುದು ಬಂತು. ಅದು ಅವರು ಮಾಡುತ್ತಿದ್ದ ಪಾತ್ರಗಳನ್ನು ಆಧರಿಸಿ ಉದ್ಯಮ ಕೊಟ್ಟ ಬಿರುದು ಎಂದೇ ಅನೇಕರು ಸರಳವಾಗಿ ಹೇಳುತ್ತಾರೆ. ಆದರೆ ನನಗೆ ಅನಿಸಿದಂತೆ, ಅದು ಅವರ ವ್ಯಕ್ತಿತ್ವಕ್ಕೆ ಕೊಟ್ಟ ಬಿರುದು. ತೆರೆ ಹಿಂದಿನ ವಿಷ್ಣುವರ್ಧನ್ ಅವರ ಹೋರಾಟಕ್ಕೆ ಕೊಟ್ಟ ಬಿರುದು’ ಎಂದು ನಾಗತಿಹಳ್ಳಿ ಚಂದ್ರಶೇಖರ್​ ಹೇಳಿದ್ದಾರೆ. ವಿಷ್ಣು ಮಾಡಿದ ಸಾಹಸಗಳೇನು ಎಂಬುದನ್ನು ಅವರು ಈ ವಿಡಿಯೋದಲ್ಲಿ ವಿವರಿಸಿದ್ದಾರೆ.

ಇದನ್ನೂ ಓದಿ:

‘ವಿಷ್ಣುವರ್ಧನ್​ ರಾತ್ರೋರಾತ್ರಿ ಸಾಹಸ ಸಿಂಹ ಆಗಲಿಲ್ಲ; ಅವರ ಬಗ್ಗೆ ಪುಸ್ತಕ ಬರಲಿದೆ’: ನಟ ಅನಿರುದ್ಧ

ವಿಷ್ಣುವರ್ಧನ್ ಜನ್ಮದಿನ: ಎಂದೂ ಮರೆಯಲಾಗದ ವಿಷ್ಣು ದಾದಾಗೆ​ ಸೆಲೆಬ್ರಿಟಿಗಳು ವಿಶ್​ ಮಾಡ್ತಿರೋದು ಹೀಗೆ..

Follow us on