Tv9 Temple Tour: ದಾವಣಗೆರೆಯಲ್ಲಿರುವ ಕುಂಕವಾ ಲಕ್ಷ್ಮಿ ರಂಗನಾಥನನ್ನ ನೋಡಿದ್ದೀರಾ?

Tv9 Temple Tour: ದಾವಣಗೆರೆಯಲ್ಲಿರುವ ಕುಂಕವಾ ಲಕ್ಷ್ಮಿ ರಂಗನಾಥನನ್ನ ನೋಡಿದ್ದೀರಾ?

TV9 Web
| Updated By: ಆಯೇಷಾ ಬಾನು

Updated on: Sep 19, 2021 | 7:36 AM

ಜನರು ಕಾಲಿಡುವುದಕ್ಕೂ ಹೆದರುವಂತಾ ಈ ಕ್ಷೇತ್ರ ಕರ್ನಾಟಕದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರು ಭವಿಷ್ಯ ವಾಣಿ ಕೇಳಿ ಚುನಾವಣೆಗೆ ಸ್ಪರ್ಧಿಸುವಂತಾ ಪರಂಧಾಮ ಅನ್ನೋದೇ ವಿಶೇಷ.

ಕರ್ನಾಟಕದಲ್ಲಿರುವ ಸಾಕಷ್ಟು ಧಾರ್ಮಿಕ ಕ್ಷೇತ್ರಗಳು ಸ್ಥಳ ಪುರಾಣದಿಂದಲೇ ಪ್ರಸಿದ್ಧಿ ಪಡೆದಿವೆ. ಕೆಲವು ಕ್ಷೇತ್ರಗಳು ಆ ಕ್ಷೇತ್ರದ ಮಹಿಮೆಯಿಂದ ಭಕ್ತಾದಿಗಳನ್ನ ಆಕರ್ಷಿಸುತ್ತದೆ. ಅಂತಾ ಒಂದು ಕ್ಷೇತ್ರ ದಾವಣಗೆರೆಯಲ್ಲಿದೆ. ಜನರು ಕಾಲಿಡುವುದಕ್ಕೂ ಹೆದರುವಂತಾ ಈ ಕ್ಷೇತ್ರ ಕರ್ನಾಟಕದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರು ಭವಿಷ್ಯ ವಾಣಿ ಕೇಳಿ ಚುನಾವಣೆಗೆ ಸ್ಪರ್ಧಿಸುವಂತಾ ಪರಂಧಾಮ ಅನ್ನೋದೇ ವಿಶೇಷ. ದಾವಣಗೆರೆಯ ದಾಸರಹಳ್ಳಿಯ ಕುಂಕವಾ ಹಳ್ಳಿಯಿಂದ ಮೂರು ಕಿಲೋಮೀಟರ್ ದೂರದಲ್ಲಿ ಲಕ್ಷ್ಮಿ ರಂಗನಾಥನ ಆಲಯವಿದೆ. ಮಾಜಿ ಸಿಎಂ ಬಿಎಸ್​ವೈ ಅವರಿಗೆ ನೀವು ಶ್ರಾವಣ ಮಾಸದಲ್ಲಿ ಸಿಎಂ ಆಗುತ್ತೀರಿ ಎಂದು ಭವಿಷ್ಯ ಹೇಳಿದ್ದ ಪವಾಡ ಪುಣ್ಯ ಕ್ಷೇತ್ರವಾಗಿದೆ ಲಕ್ಷ್ಮಿ ರಂಗನಾಥನ ಸನ್ನಿಧಿ.