ಪೊಲೀಸರು ಬಂದಾಗ ಸೌಂದರ್ಯ ಜಗದೀಶ್​ ಮನೆಯಲ್ಲಿ ಹೈಡ್ರಾಮಾ; ಕೆಲ ಹೊತ್ತು ಬಾಗಿಲು ತೆರೆಯದ ಕುಟುಂಬಸ್ಥರು

| Updated By: ಮದನ್​ ಕುಮಾರ್​

Updated on: Oct 25, 2021 | 3:11 PM

ಮಹಾಲಕ್ಷ್ಮೀ ಲೇಔಟ್​ ಠಾಣೆಯ ಪೊಲೀಸ್ ಸಿಬ್ಬಂದಿ ಭೇಟಿ ನೀಡಿದಾಗ ಮನೆ ಬಾಗಿಲು ತೆಗೆಯದೆ ಹೈಡ್ರಾಮಾ ಮಾಡಲಾಗಿದೆ. ಹಲ್ಲೆಯಲ್ಲಿ ಜಗದೀಶ್​ ಮನೆ ಕೆಲಸದ ಭುವನಾ ಭಾಗಿಯಾಗಿದ್ದು, ಅವರನ್ನು ಕೂಡ ವಿಚಾರಣೆಗೆ ಒಳಪಡಿಸಲಾಗುತ್ತಿದೆ.

ಸ್ಯಾಂಡಲ್​ವುಡ್​ ನಿರ್ಮಾಪಕ ಸೌಂದರ್ಯ ಜಗದೀಶ್​ ಪುತ್ರ ಸ್ನೇಹಿತ್ ಅವರ ಪುಂಡಾಟ ಪ್ರಕರಣ ಹಲವು ರೂಪ ಪಡೆದುಕೊಳ್ಳುತ್ತಿದೆ. ಈ ಕೇಸ್​ ಕುರಿತು ವಿಚಾರಣೆ ನಡೆಸಲು ಸೌಂದರ್ಯ ಜಗದೀಶ್​ ನಿವಾಸಕ್ಕೆ ಪೊಲೀಸರು ಭೇಟಿ ನೀಡಿದ್ದರು. ಈ ವೇಳೆ ಬಾಗಿಲು ತೆರೆಯಲು ಕುಟುಂಬಸ್ಥರು ಕೆಲ ಕಾಲ ನಕಾರ ವ್ಯಕ್ತಪಡಿಸಿದರು. ಮಹಾಲಕ್ಷ್ಮೀ ಲೇಔಟ್​ ಠಾಣೆಯ ಪೊಲೀಸ್ ಸಿಬ್ಬಂದಿ ಭೇಟಿ ನೀಡಿದಾಗ ಮನೆ ಬಾಗಿಲು ತೆಗೆಯದೆ ಹೈಡ್ರಾಮಾ ಮಾಡಲಾಗಿದೆ. ಕೆಲಹೊತ್ತಿನ ಬಳಿಕ ಬಾಗಿಲು ತೆಗೆಯಲಾಯಿತು. ಹಲ್ಲೆಯಲ್ಲಿ ಜಗದೀಶ್​ ಮನೆ ಕೆಲಸದ ಭುವನಾ ಭಾಗಿಯಾಗಿದ್ದರು. ಅವರನ್ನು ಕೂಡ ವಿಚಾರಣೆಗೆ ಒಳಪಡಿಸಲಾಗುತ್ತಿದೆ.

ಈಸ್ಟ್ ವೆಸ್ಟ್ ಗ್ರೂಪ್ ಮಾಲೀಕ ರಜತ್ ಅವರ ಮನೆಗೆ ನುಗ್ಗಿ ಹಲ್ಲೆ ಮಾಡಿದ ಆರೋಪವನ್ನು ಸ್ನೇಹಿತ್​ ಎದುರಿಸುತ್ತಿದ್ದಾರೆ. ಶನಿವಾರ (ಅ.23) 10 ಜನ ಬೌನ್ಸರ್ಸ್​ ಜೊತೆ ಬಂದು ಸ್ನೇಹಿತ್​ ಪುಂಡಾಟ ನಡೆಸಿದ್ದರು. ಅದರ ಸಿಸಿಟಿವಿ ದೃಶ್ಯಗಳು ಲಭ್ಯವಾಗಿವೆ. ಈ ಕೇಸ್​ನಲ್ಲಿ ರಾಜಿ ಮಾಡಿಸಲು ಸ್ಯಾಂಡಲ್​ವುಡ್​ನ ಸ್ಟಾರ್​ ನಟ ಹಾಗೂ ನಿರ್ಮಾಪಕರು ಪ್ರಯತ್ನ ಮಾಡುತ್ತಿದ್ದಾರೆ ಎಂಬ ಮಾಹಿತಿ ಕೂಡ ಹೇಳಿಬಂದಿದೆ.

ಇದನ್ನೂ ಓದಿ:

ನಿರ್ಮಾಪಕ ಸೌಂದರ್ಯ ಜಗದೀಶ್​ ಪುತ್ರ ಸ್ನೇಹಿತ್​ ಪುಂಡಾಟ ಕೇಸ್​ನಲ್ಲಿ ರಾಜಿಗೆ ಪ್ರಯತ್ನಿಸಿದ ಸ್ಟಾರ್​ ನಟ?

Snehith: ಹಲ್ಲೆ ಆರೋಪ; ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರ ಸ್ನೇಹಿತ್ ಹಾಗೂ ಇತರರ ವಿರುದ್ಧ ಎಫ್​ಐಆರ್ ದಾಖಲು